ತಾಳಿಕೋಟಿ

ಸೋಲು-ಗೆಲವು ಸಮಾನವಾಗಿ ಸ್ವೀಕರಿಸಿ-ಶಾಸಕ ನಡಹಳ್ಳಿ

ಸೋಲು-ಗೆಲವು ಸಮಾನವಾಗಿ ಸ್ವೀಕರಿಸಿ-ಶಾಸಕ ನಡಹಳ್ಳಿ

ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟ ಽ ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡೆ ಅಗತ್ಯ 

ತಾಳಿಕೋಟಿ: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಅಗತ್ಯ ಇದೆ. ಇಂದು ಅಂತರಾಷ್ಟ್ರೀಯ ಕ್ರೀಡೆಗಳಿಂದಾಗಿ ನಮ್ಮ ದೇಶಿಯ ಕ್ರೀಡೆಗಳು ಇಂದು ಮಹತ್ವವನ್ನು ಕಳೆದುಕೊಳ್ಳುತ್ತಿವೆ, ಅವುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೇಲ್ಲರದ್ದಾಗಿದೆ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್‌. ಪಾಟೀಲ(ನಡಹಳ್ಳಿ) ಹೇಳಿದರು.  

ಎಸ್‌. ಕೆ. ಕಾಲೇಜು ಮೈದಾನದಲ್ಲಿ ತಾಲೂಕಾ ಪಂಚಾಯತ ತಾಳಿಕೋಟಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪೂರ ಹಾಗೂ ಎಸ್‌.ಕೆ. ಕಾಲೇಜು ಇವರ ಸಹಯೋಗದಲ್ಲಿ ಏರಿ​‍್ಡಸಿದ್ದ 2022-23ನೇ ಸಾಲಿನ ತಾಳಿಕೋಟಿ ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕ್ರೀಡೆಯಲ್ಲಿ ಕೇವಲ ಸೋಲು-ಗೆಲವು ಮುಖ್ಯವಾಗಬಾರದು ಒಳ್ಳೆಯ ಕ್ರೀಡಾ ಮನೋಭಾವ ಹಾಗೂ ಸ್ಪೂರ್ತಿಯೊಂದಿಗೆ ಭಾಗವಹಿಸುವುದು ಮುಖ್ಯವಾಗಬೇಕು ತಾಲೂಕಾ ಮಟ್ಟದಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಾಧನೆಯೊಂದಿಗೆ ರಾಷ್ಟ್ರಮಟ್ಟಕ್ಕೆ ಹೊಗುವ ಸಂಕಲ್ಪ ಕ್ರೀಡಾ ಪಟುಗಳಲ್ಲಿ ಬರಬೇಕು ಎಂದರು. 

ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ ಜಿ.ಪಂ. ಮಾಜಿ ಸದಸ್ಯ ಬಸನಗೌಡ ವಣಕಿಹಾಳ, ಎಸ್‌. ಕೆ. ಪಿಯು ಕಾಲೇಜ ಅಧ್ಯಕ್ಷ ಶಂಕರಗೌಡ ಹಿಪ್ಪರಗಿ, ಕಾಶಿನಾಥ ಮುರಾಳ, ತಾ.ಪಂ ಇಓ ಬಿ. ಆರ್‌. ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಪುರಸಭೆ ಸದಸ್ಯರಾದ ಜಯಸಿಂಗ ಮೂಲಿಮನಿ, ಮುದಕ್ಕಪ ಬಡಿಗೇರ, ಪಿಡಿಓ ನಿಂಗನಗೌಡ ದೊಡಮನಿ, ದೈಹಿಕ ಶಿಕ್ಷಕ ಆರ್ ಎಲ್‌. ಕೊಪ್ಪದ, ಶಿಕ್ಷಕ ಬಿ. ಟಿ. ವಜ್ಜಲ್ ವೇದಿಕೆಯಲ್ಲಿದ್ದರು. 

ಇದಕ್ಕೂ ಮುನ್ನ ಶಾಸಕರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೊತಿ ಸ್ವೀಕರಿಸಿದರು. ನಂತರ ಕಬಡ್ಡಿ ಪಂದ್ಯ ಉದ್ಘಾಟಿಸುವದರೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. 


ಸುದ್ದಿ ಓದಿ