ಶಿಗ್ಗಾವ್

ಅಕಾಡಮಿ ಪ್ರಶಸ್ತಿ ಪುರಸ್ರ್ಕತರಿಗೆ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯಿಂದ ಸನ್ಮಾನ

ಅಕಾಡಮಿ ಪ್ರಶಸ್ತಿ ಪುರಸ್ರ್ಕತರಿಗೆ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯಿಂದ ಸನ್ಮಾನ

ಲೋಕದರ್ಶನ ವರದಿ

ಶಿಗ್ಗಾವಿ 29:  ನಗರದ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳವರ ಕಲಾ ಸಂಸ್ಥೆ ಶಿಗ್ಗಾವಿ ಇವರ ವತಿಯಿಂದ ಕನರ್ಾಟಕ ಸಕರ್ಾರದ ಬಯಲಾಟ ಅಕಾಡಮಿ ನೀಡುವ ವಾರ್ಷಿಕ  ಗೌರವ ಪ್ರಶಸ್ತಿಗೆ ಭಾಜನರಾದ ಬಯಲಾಟ ಕಲಾವಿದರಾದ ಗೋವಿಂದಪ್ಪ ತಳವಾರ, ಪಕ್ಕಿರೇಶ ಬಿಶೆಟ್ಟಿ ಹಾಗೂ ಚಂದ್ರಶೇಖರಯ್ಯಾ ಗುರಯ್ಯನವರ ಅವರನ್ನು ಪಟ್ಟಣದ ಹಳೇ ಕೋರ್ಟ್  ಆವರಣದಲ್ಲಿ ಬುಧವಾರ ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಮುಖಂಡ ಕೇದಾರೆಪ್ಪ ಬಗಾಡೆ ಮಾತನಾಡಿ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯು ಪ್ರಾರಂಭವಾಗಿ 10 ವರ್ಷ ಕಳೆದಿವೆ ಅಂದಿನಿಂದ ಇಂದಿನವರೆಗೂ ಮಕ್ಕಳಿಗೆ ಉಚಿತ ಸಂಗೀತ ಪಾಠಶಾಲೆ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಮತ್ತು ಸಂಸ್ಥೆಯು ಅನೇಕ ಧಾರ್ಮಿಕ  ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿತ್ಯ ನಿರಂತರವಾಗಿ ಚಟುವಟಿಕೆ ಬರಿತ ಸಂಸ್ಥೆಯಾಗಿದೆಆದರೆ ಆ ಸಂಸ್ಥೆಗೆ ಇನ್ನೂ ಒಂದು ನೆಲೆ ಇಲ್ಲದಿರುವುದು ದುಃಖದ ಸಂಗತಿ ಹಾಗಾಗಿ ಸಂಸ್ಥೆಗೆ ಒಂದುಜಾಗ ಮತ್ತು ಕಟ್ಟಡಕ್ಕೆ ನಾವೆಲ್ಲರು ಶ್ರಮಿಸಬೇಕಿದೆ ಎಂದರು. 

ಹುಬ್ಬಳ್ಳಿ ರಂಗಭೂಮಿ ಕಲಾವಿದ ಗದಗಯ್ಯ ಹಿರೇಮಠ ಅವರು ಮಾತನಾಡಿ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯವರು ನಿತ್ಯ ನಿರಂತರವಾಗಿ ಏನಾದರೂ ಕಾರ್ಯಕ್ರಮವನ್ನು ಮಾಡುತ್ತಿರುತ್ತಾರೆ ಸದಾ ಕ್ರಿಯಾಶೀಲವಾಗಿ ಚಟುವಟಿಕೆಗಳನ್ನು ನಡೆಸುತ್ತಾರೆ ಅದರ ಭಾಗವಾಗಿ ಇವತ್ತು ಅಕಡಾಮಿ ಪ್ರಶಸ್ತಿ ಪುರಸ್ರ್ಕತರನ್ನು ಸನ್ಮಾನಿಸುತ್ತಿರುವುದು ಒಂದು ಸಂತೋಷದ ಸಂಗತಿಎಂದರು.

 ಸಂಸ್ಥೆಯಅಧ್ಯಕ್ಷ ಪಕ್ಕಿರೇಶ ಕೊಂಡಾಯಿ ಮಾತನಾಡಿ ನಮ್ಮ ಸಂಸ್ದೆಯ ವತಿಯಿಂದ 10 ವರ್ಷಗಳಿಂದ ಅನೇಕ ವಿನೂತನ ಕಾರ್ಯಕ್ರಮ ಮಾಡುತ್ತಿದ್ದು ಅದರ ಭಾಗವಾಗಿ ಇಂದು ಅಕಾಡಮಿಯಿಂದ ಪ್ರಶಸ್ತಿಗೆ ಭಾಜನರಾದವರನ್ನು ಸನ್ಮಾನಿಸುತ್ತಿರುವುದು ನಮ್ಮ ಭಾಗ್ಯಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೊಟ್ರೇಶಮಾಸ್ತರ ಬೆಳಗಲಿ ಮಾತನಾಡಿ ನಮ್ಮ ಸಂಸ್ಥೆ ಆರ್ಥಿಕವಾಗಿ ಮತ್ತು ಎಲ್ಲ ರೀತಿಯಿಂದ ಸದೃಢವಾದರೆ ಸರ್ಕಾರದ ರೀತಿಯಲ್ಲಿ ರಾಜ್ಯದ ಪ್ರತಿಭಾನ್ವಿತಕಲಾವಿದರಿಗೆ ಪ್ರಶಸ್ತಿ ನೀಡುತ್ತೆವೆಎಂದರು.

ಬಿ.ಎಚ್.ಚಲವಾದಿ, ಶಿವಾನಂದ ಹೊಸಮನಿ ಇತರರು ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ರಮೇಶ ಸಾತಣ್ಣವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಶೇಖಪ್ಪ ಜೋಳದ,ಚಿನ್ನಪ್ಪ ಕುಂದಗೋಳ, ಬಸವರಾಜ ಶಿಗ್ಗಾಂವ, ಮಲ್ಲಿಕಾರ್ಜುನ  ಗೊಬ್ಬರಗುಂಪಿ, ವಿಜಯಲಕ್ಷ್ಮೀ ಹೆಸರೂರ, ಸುಮಂಗಲಾ ಹೆಸರೂರ, ಕಲಾವಿದರಾದ ಬಸವರಾಜ ಕರಡಿ ಹಾಗೂ ಇತರರು ಇದ್ದರು ಸಂಸ್ಥೆಯ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು 

ಸುದ್ದಿ ಓದಿ