ಚಿಕ್ಕೋಡಿ

ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧನೆ: ಸೂಕ್ತ ಕ್ರಮಕ್ಕೆ ಆಗ್ರಹ

ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧನೆ: ಸೂಕ್ತ ಕ್ರಮಕ್ಕೆ ಆಗ್ರಹ
ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ ಶಿವಸೇನೆ ಕಾರ್ಯಕರ್ತನ ಮೇಲೆ ಸೂಕ್ತ ವಹಿಸಬೇಕೆಂದು ಕವರೇ ಕಾರ್ಯಕರ್ತರು

ಚಿಕ್ಕೋಡಿ17:  ಬೆಳಗಾವಿಯ ಎಂ.ಇ.ಎಸ್ ಮತ್ತು ಶಿವಸೇನೆಯ ಕಾರ್ಯಕರ್ತ ಶುಭಂ ಶೇಳಕೆ ಎಂಬಾತನು  ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದು, ಶಿವಸೇನೆ ಕಾರ್ಯಕರ್ತನನ್ನು ಕೂಡಲೇ ಜಿಲ್ಲಾಡಳಿತ ಗಡಿಪಾರು ಮಾಡುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಅಂಕಲಿ ಪೊಲೀಸ್ ಠಾಣಾಧಿಕಾರಿಗೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾನ ಮತ್ತು ಮಾಧ್ಯಮಗಳಲ್ಲಿ ಶೇಳಕೆ ಎಂಬಾತನು ಕನ್ನಡಿಗರನ್ನು ಅವಹೇಳನ ಮಾಡುವ ಉದ್ದೇಶದಿಂದ ಹಳದಿ ಕೆಂಪು ಶಾಲ ಹೊಂದಿದ ಯುವಕರನ್ನು ಕಂಡು-ಕಂಡಲ್ಲಿ ಥಳಿಸಲಾಗುವುದು ಎಂದು ಕನ್ನಡರಿಗೆ ಜೀವ ಬೇದರಿಕೆ ಹಾಕಿ ಮುಗ್ಧ ಮರಾಠಿಗರನ್ನು ಪ್ರಚೋದಿಸಿ ಕನ್ನಡಿಗರ ವಿರುದ್ಧ ಎತ್ತಿಕಟ್ಟಿ ಕರ್ನಾಟಕ ರಾಜ್ಯದಂತಹ ಶಾಂತಿ ಸುವ್ಯವಸ್ಥೆ ಹದಗೆಡುವಂತೆ ಮಾಡುತ್ತಿದ್ದು, ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕರವೇ ಜಿಲ್ಲಾ ಸಂಚಾಲಕ ಸಂಜು ಬಡಿಗೇರ, ತಾಲೂಕಾ ಅಧ್ಯಕ್ಷ ನಾಗೇಶ ಮಾಳಿ ಮುಂತಾದವರು ಇದ್ದರು.

ಸುದ್ದಿ ಓದಿ