ಫಲಾನುಭವಿಗಳ ಸಮೃದ್ಧಿಯೇ ಈ ಸಂಪರ್ಕದ ಗುರಿ: ಡಾ. ಕ್ರಾಂತಿ ಕಿರಣ್
ಶಿಗ್ಗಾವಿ 03: ಫಲಾನುಭವಿಗಳ ಸಂಪರ್ಕವೇ ಈ ಅಭಿಯಾನದ ಗುರಿ ಫಲಾನುಭವಿಗಳ ಸಂಪರ್ಕದೊಂದಿಗೆ ಪ್ರತಿಯೊಬ್ಬರ ಸಂಬಂಧ ಬೆಳೆಯುತ್ತದೆ ಎಂದು ಧಾರವಾಡ ಲೋಕಸಭಾ ಫಲಾನುಭವಿಗಳ ಸಂಪರ್ಕದ ಅಭಿಯಾನದ ಸಂಚಾಲಕ ಡಾ. ಕ್ರಾಂತಿ ಕಿರಣ್ ಹೇಳಿದರು.
ಪಟ್ಟಣದ ಶಿಗ್ಗಾವಿ ಮಂಡಳದ ಭಾಜಪ ಕಾರ್ಯಾಲಯದಲ್ಲಿ ನಡೆದ ಫಲಾನುಭವಿಗಳ ಸಂಪರ್ಕ ಅಭಿಯಾನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿವಿಧತೆಯಲ್ಲಿ ಏಕತೆಯ ರೂಪಗೊಂಡು ಭಾರತೀಯರಾದ ನಾವೆಲ್ಲರೂ ಒಂದು. ಪ್ರಪಂಚದಲ್ಲಿಯೇ ಆಗಬೇಕು ನಾವು ಮುಂದು. ಎಂಬ ಭಾವನೆಗಳು ಮೂಡಲು ನಾವು ಸದಾ ಜನರೊಂದಿಗೆ ಸಂಪರ್ಕ ಇರಬೇಕು. ಪ್ರಧಾನಿ ನರೇಂದ್ರ ಮೋದಿಜಿ ಅವರ ಹತ್ತು ವರ್ಷದ ಸಾಧನೆ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ತಿಳಿಸುವುದರ ಜೊತೆಗೆ ಕೇಂದ್ರ ಬಿಜೆಪಿ ಪ್ರಧಾನಿ ಮೋದಿಜಿ ಅವರ ಸರಕಾರದ ರಸ್ತೆ ನೀರು ವಿದ್ಯುತ್ ಶಿಕ್ಷಣ ಆರೋಗ್ಯ ಉದ್ಯೋಗ ಕಲೆ ಸಾಹಿತ್ಯ ಸೇರಿದಂತೆ 10 ಹಲವಾರು ಯೋಜನೆಗಳನ್ನು ಪಡೆದ ಫಲಾನುಭವಿಗಳ ಸಂಪರ್ಕ ಮಾಡಿ ಸರಳ ಯಾಪ್ ನಲ್ಲಿ ದಾಖಲಿಸಿ ತಿಳಿಸಿ ಹೇಳಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕಮಲದ ಗುರುತಿಗೆ ಮತ ನೀಡಿ ಮತ್ತೊಮ್ಮೆ ಮೋದಿಜಿಯವರನ್ನು ಪ್ರಧಾನಿ ಮಾಡೋಣ ಎಂದು ವಿನಂತಿಸಿ ಬರೋಣ ಎಂದರು.
ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಅಂತ್ಯೋದಯ ಪರಿಕಲ್ಪನೆಯಿಂದ ಆಡಳಿತ ಮಾಡಿದ ಏಕೈಕ ಪ್ರಧಾನಿ ಮೋದಿಜಿಯವರು ಅವರ ಯೋಜನೆಗಳನ್ನು ಪಡೆದ ಜನರಿಗೆ ನೆನಪಿಸುವ ಕೆಲಸ ನಾವೆಲ್ಲರೂ ಬೂತಿಗೆ ತೆರಳಿ ಮಾಡಬೇಕಾಗಿದೆ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಆರೋಗ್ಯಕವಾದ ಅನೇಕ ಜನಪರ ರೈತ ಪರ ಮಹಿಳೆಯರ ಪರ ಯುವಕರ ಪರ ಬಡವರ ಪರವಾಗಿರುವ ಮತ್ತು ಅವರ ಸಬಲೀಕರಣಕ್ಕಾಗಿ ಮಾಡಿದ ಅನೇಕ ಯೋಜನೆಗಳು ನಮ್ಮೆಲ್ಲರ ಬದುಕಿನಲ್ಲಿ ಬೆಳಕು ತಂದಿವೆ ಈ ಕ್ಷೇತ್ರದ ಜನಪ್ರಿಯ ಶಾಸಕರು ನಿಕಟಪೋರ್ವ ಮುಖ್ಯಮಂತ್ರಿ, ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಮಾಡಿದ ಪ್ರತಿಯೊಂದು ಹಳ್ಳಿಯಿಂದ ಹಿಡಿದು ನಗರಗಳ ಅಭಿವೃದ್ಧಿ ದಾಖಲೆಯಾಗಿದೆ ಅದರೊಂದಿಗೆ ಕೇಂದ್ರ ಸರಕಾರದ ಯೋಜನೆಗಳು ಮತ್ತು ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಆಡಳಿತ ಮತ್ತು ಅಭಿವೃದ್ಧಿ ಮಾಡಿದ ಕೆಲಸಗಳನ್ನು ತಿಳಿಸಿ ಹೇಳಿ ಅವರನ್ನು ಐದನೇ ಬಾರಿಗೆ ಬಿಜೆಪಿ ಸಂಸದರನ್ನಾಗಿ ಆಯ್ಕೆ ಮಾಡೋಣ ಅಭಿವೃದ್ಧಿಗೆ ಕೈಜೋಡಿಸೋಣ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ ನಾರಾಯಣಪುರ. ರೇಣು ಕನಗೌಡ ಪಾಟೀಲ್ .ಮಂಡಲ ಸಂಚಾಲಕ ವಿಜಯ ಕಳ್ಳಿಮನಿ ಸಹ ಸಂಚಾಲಕ ಮಂಜುನಾಥ ಮಿರ್ಜಿ ಹಾಗೂ ಮಹಾಶಕ್ತಿ ಕೇಂದ್ರದ ಪ್ರಮುಖರು ಬೂತ್ ಸಂಚಾಲಕರು ಸಹ ಸಂಚಾಲಕರು ಮೋರ್ಚಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಮುಖರು ಪದಾಧಿಕಾರಿಗಳು ಹಾಜರಿದ್ದರು.