ಮುಂದಗೋಡ

ಅಭಿಷೇಕ ರಾಷ್ಟ್ರಮಟ್ಟಕ್ಕೆ ಆಯ್ಕೆ

ಅಭಿಷೇಕ ರಾಷ್ಟ್ರಮಟ್ಟಕ್ಕೆ ಆಯ್ಕೆ

ಲೋಕದರ್ಶನ ವರದಿ

ಮುಂಡಗೋಡ:ತಾಲೂಕಿನ ಸುಳ್ಳಳ್ಳಿ ಗ್ರಾಮದ ಅಭಿಷೇಕ ಹುಡೇಲಕೊಪ್ಪ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕೀರ್ತಿ  ಹೆಚ್ಚಿಸಿದ್ದಾನೆ.

ಇತ್ತೀಚೆಗೆ ಧಾರವಾಡದಲ್ಲಿ ನಡೆದ ಅಂತರ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 80 ಮೀಟರ್ ಮತ್ತು 600 ಮೀಟರ್ ಓಟಗಳಲ್ಲಿ ವಿಜೇತನಾಗಿ ಜ.12, 13 ಮತ್ತು 14ರಂದು ಬಿಹಾರದ ಪಾಟ್ನಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾನೆ.   ಕಡು ಬಡತನದಲ್ಲಿ ಜನಿಸಿದ ಅತಿ ಚಿಕ್ಕ ಗ್ರಾಮ ಸುಳ್ಳಳ್ಳಿಯ ಅಭಿಷೇಕ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ಧಾರವಾಡದ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆಯಾಗಿ ಸಾಧನೆ ತೋರಿದ್ದಾನೆ. ಈತನ ತಂದೆ ಚಂದ್ರಕಾಂತ, ತಾಯಿ ರತ್ನ, ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಗೊಟಗೋಡಿ, ಶಿಕ್ಷಕರು ಮತ್ತು ಗ್ರಾಮಸ್ಥರು ಈತನಿಗೆ ಶುಭ ಹಾರೈಸಿದ್ದಾರೆ 

ಸುದ್ದಿ ಓದಿ