ಕೆಬಿಸಿಯಲ್ಲಿ 25 ಲಕ್ಷ ರೂ ಗೆದ್ದಕೊಂಡ... 14 ವರ್ಷದ ಅನ್ ಮೋಲ್ ಶಾಸ್ತ್ರಿ..!
ಮುಂಬೈ, ಡಿ 16: ‘ಕೌನ್ ಬನೇಗಾ ಕರೋಡ್
ಪತಿ’ ಟಿವಿ ಷೋ ಕಾರ್ಯಕ್ರಮದಲ್ಲಿ ಹಣ ಗೆಲ್ಲಲು ಬಹಳಷ್ಟು
ಜನರು ಪೈಪೋಟಿ ನಡೆಸುತ್ತಾರೆ. ಆದರೆ, ಕೆಲವರು
ಮಾತ್ರ ಸರಿ ಉತ್ತರ ನೀಡುವ
ಮೂಲಕ ಹಣವನ್ನು ಗೆಲ್ಲುತ್ತಾರೆ. ಗುಜರಾತ್‌ನ ಹದಿನಾಲ್ಕು ವರ್ಷದ ಅನ್ ಮೋಲ್ ಶಾಸ್ತ್ರಿ ತನ್ನ ಅದ್ಭುತ ಪ್ರತಿಭೆಯಿಂದ ಕೆಬಿಸಿಯಲ್ಲಿ 25 ಲಕ್ಷ
ಗೆದ್ದುಕೊಂಡಿದ್ದಾನೆ.
ಕೌನ್ ಬನೇಗಾ ಕರೋಡ್‌ಪತಿ ವಿದ್ಯಾರ್ಥಿಗಳ ವಿಶೇಷ ವಾರದಲ್ಲಿ ಅನ್ ಮೋಲ್ ಶಾಸ್ತ್ರಿ ಭಾಗವಹಿಸಿದ್ದ. ಅಮಿತಾಬ್ ಬಚ್ಚನ್ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿ ಎಲ್ಲರಿಂದಲೂ ಅನ್ ಮೋಲ್ ಬೇಷ್ ಎನಿಸಿಕೊಂಡ. ಆತನ ಪ್ರತಿಭೆಯನ್ನು ನೋಡಿ ಅಮಿತಾಬ್ ಬಚ್ಚನ್ ಮಂತ್ರಮುಗ್ದರಾದರು. 50 ಲಕ್ಷ ರೂ ಪ್ರಶ್ನೆಗೂ ಸರಿಯಾದ ಉತ್ತರ ಗೊತ್ತಿಲ್ಲದ ಕಾರಣ ಅನ್ಮೋಲ್ 25 ಲಕ್ಷ ರೂಗೆ ಸರಿದೂಗಿಸಿಕೊಂಡ. ಅಲ್ಲಿಗಾಗಲೇ ಲೈಫ್‌ಲೈನ್‌ಗಳನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರಿಂದ, ಸ್ಪರ್ಧೆಯಿಂದ ವಿರಮಿಸಿ 25 ಲಕ್ಷರೂ ಪಡೆದುಕೊಂಡ.
25 ಲಕ್ಷಗಳ ಜತೆಗೆ ಶೋ ಪ್ರಾಯೋಜಕ ಸಂಸ್ಥೆಯಿಂದ 5 ಲಕ್ಷ ಸ್ಕಾಲರ್‌ಶಿಪ್ ಪಡೆದುಕೊಂಡ ಅನ್ಮೊಲ್ ಶಾಸ್ತ್ರಿ, ಈ ಹುಡುಗ ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ 'ಹೌ ಇಟ್ ವರ್ಕ್ಸ್' ಪ್ರಮೋಟ್ ಮಾಡುವುದಾಗಿ ಅಮಿತಾಬ್ ಬಚ್ಚನ್ ಭರವಸೆ ನೀಡಿದ್ದಾರೆ. ಅನ್ಮೋಲ್ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಭೌತಶಾಸ್ತ್ರ, ಜೀವಶಾಸ್ತ್ರಕ್ಕೆ ಸಂಬಂಧಿಸಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾನೆ.ಎಪಿಜೆ ಅಬ್ದುಲ್ ಕಲಾಂ, ಸ್ಟೀಫನ್ ಹಾಕಿಂಗ್ ತನಗೆ ಇಷ್ಟ ಎಂದು ಹೇಳುವ ಈ ಹುಡುಗನಿಗೆ ಖಗೋಳ ವಿಜ್ಞಾನಿ ಆಗಬೇಕು ಎಂಬ ಆಸೆ ಹೊಂದಿದ್ದಾನೆ. ನೊಬೆಲ್ ಪ್ರಶಸ್ತಿ ಪಡೆಯಬೇಕು ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಬೇಕೆಂಬ ತನ್ನ ಮನಸ್ಸಿನ ಮಾತುಗಳನ್ನು ಅನ್ಮೋಲ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾನೆ.