“ಅಮೃತ ಅಪಾರ್ಟ್ಮೆಂಟ್ಸ್” ಫಸ್ಟ್ ಲುಕ್ ರಿಲೀಸ್
ಬೆಂಗಳೂರು, ಮಾರ್ಚ್ 17 : ಜಿ9 ಕಮ್ಯೂನಿಕೇಷನ್ಸ್ ಮೀಡಿಯಾ ಆ್ಯಂಡ್ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ ಅಮೃತಾ ಅಪಾರ್ಟ್'ಮೆಂಟ್ಸ್. ಈ ಚಿತ್ರಕ್ಕೆ ರಚನೆ, ಗುರುರಾಜ್ ಕುಲಕರ್ಣಿಯವರ ನಿರ್ಮಾಣ, ನಿರ್ದೇಶನವಿದ್ದು, ಇತ್ತೀಚೆಗೆ ಫಸ್ಟ್ ಲುಕ ಬಿಡುಗಡೆಯಾಗಿದೆ. ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮಕ್ಕೆ ಚಂದನವನದ ಖ್ಯಾತ ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅದೇ ರೀತಿ ನಟಿ, ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್ ಅವರಿಂದಲೂ ತಂಡ ಹಾರೈಕೆಯನ್ನು ಪಡೆದುಕೊಂಡಿತು. ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೇ ಅಮೃತಾ ಅಪಾರ್ಟ್ ಮೆಂಟ್ ಸಿನಿಮಾ ಹೊಂದಿದೆ. ಇಡೀ ತಂಡಕ್ಕೆ ಈ ಸಿನಿಮಾ ಅಮೃತವನ್ನು ಉಣಿಸಲಿ ಎಂದರು ಕೆಸಿಎನ್ ಚಂದ್ರಶೇಖರ್.
ಗುರುರಾಜ್ ತುಂಬ ಫ್ಯಾಷನೇಟ್ ನಿರ್ದೇಶಕರು. ಅಷ್ಟೇ ಚೆನ್ನಾಗಿ ಈ ಸಿನಿಮಾ ಮಾಡಿದ್ದಾರೆ. ಅವರ ಆಕ್ಸಿಡೆಂಟ್ ಚಿತ್ರದಲ್ಲಿಯೇ ಅವರ ಕೆಲಸವನ್ನು ನೋಡಿದ್ದೆ. ಲಾಸ್ಟ್ ಬಸ್ ಚಿತ್ರದಲ್ಲಿಯೂ ನೋಡಿದ್ದೆ. ಹಾಗಾಗಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ವಿಜಯಲಕ್ಷ್ಮಿ ಸಿಂಗ್ ಹಾರೈಸಿದರು. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಬಾಲಾಜಿ ಮನೋಹರ್, ಇದು ಸಣ್ಣ ಬಜೆಟ್ನ ಸಿನಿಮಾ ಆದರೆ, ದೊಡ್ಡ ಐಡಿಯಾದೊಂದಿಗೆ ತಯಾರಾಗಿದೆ. ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು. ಅರ್ಜುನ್ ಅಜಿತ್ ಛಾಯಾಗ್ರಹಣ, ಕೆಂಪರಾಜ್ ಅರಸ್ ಸಂಕಲನ, ಎಸ್.ಡಿ ಅರವಿಂದ್ 3ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಎ.ಎಮ್.ಶಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕೆ. ಕಲ್ಯಾಣ್ ಡಾ. ಬಿ.ಆರ್ ಪೊಲೀಸ್ ಪಾಟೀಲ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ತಾರಕ್ ಪೊನ್ನಪ್ಪ ನಾಯಕ, ಊರ್ವಶಿ ಗೋವರ್ಧನ್ ನಾಯಕಿಯಾಗಿದ್ದಾರೆ. ಬಾಲಾಜಿ ಮನೋಹರ್ ವಿಶೇಷ ಪಾತ್ರದಲ್ಲಿದ್ದಾರೆ. ಸೀತಾ ಕೋಟೆ ವಕೀಲೆಯಾಗಿ, ಮಾನಸಾ ಜೋಶಿ ಎಸಿಪಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮಾಲತೇಶ್, ಸಿತಾರ, ಜಗದೀಶ್ ಜಾಲಾ, ಅರುಣ್ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಪಾತ್ರವರ್ಗದಲ್ಲಿದ್ದಾರೆ. ಸುನೀಲ್ ಆರ್.ಡಿ. ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರಾಗಿದ್ದಾರೆ. ಹರೀಶ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.