ಮನರಂಜನೆ

ಅಮೀರ್‌ ಖಾನ್‌ ಗೆ ಕೊರೊನಾ

ಅಮೀರ್‌ ಖಾನ್‌ ಗೆ ಕೊರೊನಾ

ಮುಂಬೈ,  ಮಾ 24: ಬಾಲಿವುಡ್  ನಾಯಕ ನಟ ಅಮೀರ್ ಖಾನ್  ಕೊರೊನಾ ವೈರಸ್‌  ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ -19ಗೆ  ಪರೀಕ್ಷೆಗೆ ಒಳಗಾಗಿದ್ದ ಅವರಿಗೆ ಪಾಸಿಟಿವ್‌   ಇರುವುದು ದೃಢಪಟ್ಟಿದೆ.  ಪ್ರಸ್ತುತ ಹೋಂ ಕ್ವಾರಂಟೈನ್‌ ನಲ್ಲಿರುವ  ಅವರು, ವೈದ್ಯರ  ಸಲಹೆ ಸೂಚನೆಗಳನ್ನು ಪಾಲಿಸುತ್ತಿದ್ದಾರೆ   ಎಂದು  ಅವರ  ಸಹಾಯಕರು ಹೇಳಿದ್ದಾರೆ. ತಮ್ಮ ಎಲ್ಲ  ಸಿಬ್ಬಂದಿಯೂ  ಕೋವಿಡ್  ಪರೀಕ್ಷೆಗೆ  ಒಳಗಾಗುವಂತೆ  ಅಮೀರ್‌ ಖಾನ್‌  ಸೂಚನೆ ನೀಡಿದ್ದಾರೆ.ದೇಶಾದ್ಯಂತ   ಕರೋನಾ ವೈರಸ್ ಮತ್ತೊಮ್ಮೆ ವ್ಯಾಪಿಸುತ್ತಿದ್ದು,     ದಿನ ದಿನಕ್ಕೂ  ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ   ಕಾರಣ  ಜನರು ಭಯಭೀತಗೊಂಡಿದ್ದಾರೆ. ಏತನ್ಮಧ್ಯೆ, ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಕೋವಿಡ್  ಸೋಂಕು  ಪ್ರಸರಣ ವ್ಯಾಪಿ ತೀವ್ರಗೊಳ್ಳುತ್ತಿದೆ.  ಇನ್ನೂ    ಹಲವು  ಬಾಲಿವುಡ್  ನಟರೂ  ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.  ಬಾಲಿವುಡ್ ನಟ ಆಶಿಶ್ ವಿದ್ಯಾರ್ಥಿ, ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್   ಹಾಗೂ ಜನಪ್ರಿಯ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಕೂಡ ಇತ್ತೀಚಿನ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. 


ಸುದ್ದಿ ಓದಿ