ರಾಷ್ಟ್ರೀಯ

20 ವರ್ಷದಲ್ಲಿ ವಿಶ್ವದ ಪ್ರಮುಖ 3 ಆರ್ಥಿಕತೆಯಲ್ಲಿ ಭಾರತವೂ ಒಂದಾಗಿರಲಿದೆ: ಅಂಬಾನಿ

20 ವರ್ಷದಲ್ಲಿ ವಿಶ್ವದ ಪ್ರಮುಖ 3 ಆರ್ಥಿಕತೆಯಲ್ಲಿ ಭಾರತವೂ ಒಂದಾಗಿರಲಿದೆ: ಅಂಬಾನಿ

ನವದೆಹಲಿ, ಡಿಸೆಂಬರ್ 16: ಭಾರತವು ಮುಂದಿನ ಎರಡು ದಶಕದಲ್ಲಿ ವಿಶ್ವದ ಟಾಪ್ ಮೂರು ಆರ್ಥಿಕತೆಗಳಲ್ಲಿ ಒಂದಾಗಿರುತ್ತದೆ. ಮತ್ತು ತಲಾದಾಯವು ದುಪ್ಪಟ್ಟಿಗಿಂತ ಹೆಚ್ಚಾಗಿರುತ್ತದೆ ಎಂದು ಭಾರತದ ಅತ್ಯಂತ ಶ್ರೀಮಂತ- ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ  ಮುಕೇಶ್ ಅಂಬಾನಿ ಮಂಗಳವಾರ ಹೇಳಿದ್ದಾರೆ. ಫ್ಯುಯೆಲ್ ಫಾರ್ ಇಂಡಿಯಾ 2020 ಕಾರ್ಯಕ್ರಮದಲ್ಲಿ ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ ಬರ್ಗ್ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಭಾರತದ ಮಧ್ಯಮ ವರ್ಗವು ದೇಶದ ಒಟ್ಟಾರೆ ಕುಟುಂಬಗಳ ಪೈಕಿ ಶೇಕಡಾ 50ರಷ್ಟಿದೆ. ಅದು ವರ್ಷಕ್ಕೆ ಮೂರರಿಂದ ನಾಲ್ಕು ಪರ್ಸೆಂಟ್ ಏರಿಕೆ ಆಗುತ್ತದೆ ಎಂದರು.

"ನಾನು ತುಂಬ ಬಲವಾಗಿ ನಂಬುತ್ತೇನೆ, ಮುಂದಿನ ಎರಡು ದಶಕದಲ್ಲಿ ಭಾರತವು ವಿಶ್ವದ ಟಾಪ್ ಮೂರು ಆರ್ಥಿಕತೆಯಾಗಿ ಬೆಳೆಯಲಿದೆ," ಎಂದು ಅಂಬಾನಿ ಹೇಳಿದ್ದಾರೆ.  ಮುಂದುವರಿದು, ಇದಕ್ಕಿಂತ ಹೆಚ್ಚಾಗಿ ಡಿಜಿಟಲ್ ಸಮಾಜ ಸೃಷ್ಟಿ ಆಗಲಿದೆ. ಯುವಜನರು ಅದರ ಮುಂಚೂಣಿಯಲ್ಲಿ ಇರಲಿದ್ದಾರೆ. "ನಮ್ಮ ತಲಾದಾಯವು 1800ರಿಂದ 2000 ಯುಎಸ್ ಡಿಯಿಂದ 5000 ಯುಎಸ್ ಡಿ ಆಗಲಿದೆ ಎಂದು ಹೇಳಿದರು. ಫೇಸ್ ಬುಲ್ ಮತ್ತು ವಿಶ್ವದ ಹಲವು ಇತರ ಕಂಪೆನಿಗಳು ಹಾಗೂ ಉದ್ಯಮಿಗಳಿಗೆ ಭಾರತದಲ್ಲಿ ಸುವರ್ಣಾವಕಾಶ ಇದೆ; ಮುಂದಿನ ದಶಕಗಳಲ್ಲಿ ಇಲ್ಲಿ ಆಗಲಿರುವ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಯ ಭಾಗವಾಗಬಹುದು ಎಂದು ಅವರು ಹೇಳಿದರು.

ಸುದ್ದಿ ಓದಿ