ಕೋವಿಡ್ ಲಸಿಕೆ ಪಡೆದ ಬಳಿಕವೂ ಸೋಂಕು: ನಿರ್ಮಾಪಕ ಅಲ್ಲು ಅರವಿಂದ್ ಸ್ಪಷ್ಟನೆ
ಹೈದರಾಬಾದ್, ಏಪ್ರಿಲ್ 06: ನಿರ್ಮಾಪಕ ಅಲ್ಲು ಅರವಿಂದ್ ಅವರು ಕೋವಿಡ್ ಲಸಿಕೆ ಪಡೆದ ನಂತರವೂ ಸೋಂಕಿಗೆ ಒಳಗಾಗಿದ್ದಾರಂತೆ. ಆದರೆ ಎರಡು ಹಂತದ ಲಸಿಕೆಯನ್ನು ತೆಗೆದುಕೊಂಡಿದ್ದರೂ ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ವದಂತಿ ಕೇಳಿಬಂದಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲು ಅರವಿಂದ್, ನಾನು ಕೋವಿಡ್ ಸೋಂಕಿಗೆ ಒಳಗಾಗಿರುವುದು ನಿಜ. ಆದರೆ 2 ಡೋಸ್ ಲಸಿಕೆ ತೆಗೆದುಕೊಂಡಿದ್ದೇನೆ ಎಂಬುದು ಸುಳ್ಳು. ನಾನು ಇಲ್ಲಿಯವರೆಗೆ ಒಂದು ಪ್ರಮಾಣವನ್ನು ಮಾತ್ರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ನಾನು ಮತ್ತು ನನ್ನ ಇಬ್ಬರು ಸ್ನೇಹಿತರು ಹಳ್ಳಿಯೊಂದರಲ್ಲಿ ಭೇಟಿಯಾಗಿದ್ದೆವು. ನಮ್ಮಲ್ಲಿ ನಾನೂ ಸೇರಿದಂತೆ ಇಬ್ಬರು ಒಂದು ಡೋಸ್ ತೆಗೆದುಕೊಂಡಿದ್ದರೆ ಇನ್ನೊಬ್ಬ ಸ್ನೇಹಿತ ಯಾವುದೇ ಡೋಸ್ ತೆಗೆದುಕೊಂಡಿಲ್ಲ. ಹಾಗಾಗಿ ನಾವು ಮೂವರು ಸೋಂಕಿಗೆ ಒಳಗಾಗಿದ್ದೇವೆ. ನಾವು ಮೂವರು 3 ದಿನಗಳ ಕಾಲ ಸಣ್ಣ ಜ್ವರದಿಂದ ಬಳಲುತ್ತಿದ್ದೇವೆ ಎಂದು ತಿಳಿಸಿದ್ದಾರೆ.