ಮನರಂಜನೆ

ಕೊರೋನಾ : ನಟ ಅಕ್ಷಯ್ ಕುಮಾರ್ ಆಸ್ಪತ್ರೆಗೆ

ಕೊರೋನಾ : ನಟ ಅಕ್ಷಯ್ ಕುಮಾರ್ ಆಸ್ಪತ್ರೆಗೆ

ಮುಂಬೈ, ಏಪ್ರಿಲ್ 05 : ಕೊರೋನಾ ಸೋಂಕಿಗೆ ಒಳಗಾಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ಈ ಕುರಿತು ಟ್ವೀಟ್ ಮಾಡಿರುವ ಅಕ್ಷಯ್, “ನಿಮ್ಮೆಲ್ಲರ ಪ್ರೀತಿಯ ಹಾರೈಕೆ ಮತ್ತು ಪ್ರಾರ್ಥನೆಗಾಗಿ ಧನ್ಯವಾದ. ನಾನು ಚೇತರಿಸಿಕೊಳ್ಳುತ್ತಿರುವೆ.  ಆದಾಗ್ಯೂ ವೈದ್ಯರ ಸಲಹೆಯಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆದಷ್ಟು ಶೀಘ್ರವೇ ಮನೆಗೆ ಮರಳುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬಾಲಿವುಡ್ ನ ಜನಪ್ರಿಯ ನಟ, 53 ವರ್ಷ ವಯಸ್ಸಿನ ಅಕ್ಷಯ್ ಕುಮಾರ್ ಅವರಲ್ಲಿ ಏಪ್ರಿಲ್ 4ರಂದು ಕೊರೋನಾ ಸೋಂಕು ದೃಢಪಟ್ಟಿತ್ತು.  ಬಳಿಕ ಮನೆಯಲ್ಲೇ ಪ್ರತ್ಯೇಕವಾಗಿರುವುದಾಗಿ ತಿಳಿಸಿದ್ದರು.

 

ಸುದ್ದಿ ಓದಿ