ರಾಷ್ಟ್ರೀಯ

‘ಏರ್ ಇಂಡಿಯಾ’ ನಿಯಂತ್ರಣ ಟಾಟಾಗಳಿಗೆ ಮರಳುವ ಸಾಧ್ಯತೆ ...!

‘ಏರ್ ಇಂಡಿಯಾ’  ನಿಯಂತ್ರಣ  ಟಾಟಾಗಳಿಗೆ  ಮರಳುವ  ಸಾಧ್ಯತೆ ...!

ನವದೆಹಲಿ, ಡಿ 14: ಏರ್ ಇಂಡಿಯಾ .... ಸಾಲದ ಹೊರೆಯಿಂದ   ಇನ್ನಿಲ್ಲದ  ಸಂಕಷ್ಟ  ಎದುರಿಸುತ್ತಿರುವ  ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ. ಲಾಭದ ಹಾದಿಯಲ್ಲಿ ಮುನ್ನೆಡೆಯದ ಈ  ಸಂಸ್ಥೆ ಇತ್ತೀಚೆನ  ಕೊರೊನಾ ಸಂಕಷ್ಟ   ಮತ್ತಷ್ಟು   ಹೈರಾಣದ  ಸ್ಥಿತಿಗೆ ತಂದಿದೆ.   ಇದು... ಉದ್ಯೋಗಿಗಳ  ಭವಿಷ್ಯದ ಮೇಲೆ  ದೊಡ್ಡ  ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.    

ಖಾಸಗೀಕರಣ   ಸಮಸ್ಯೆಗೆ ಪರಿಹಾರ ಎಂದು ಮೊದಲಿನಿಂದಲೂ ಬಲವಾಗಿ ನಂಬಿರುವ  ಬಿಜೆಪಿ ನೇತೃತ್ವದ  ಕೇಂದ್ರ ಸರ್ಕಾರ  .. ಸಂಸ್ಥೆಯಲ್ಲಿರುವ   ಸರ್ಕಾರದ ಸಂಪೂರ್ಣ  ಪಾಲನ್ನು  ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ಪ್ರಸ್ತುತ, ಸರ್ಕಾರದ ಪ್ರಯತ್ನಗಳು ಫಲ ನೀಡುವಂತೆ  ಕಾಣಿಸುತ್ತಿವೆ. ಏರ್ ಇಂಡಿಯಾ ಖರೀದಿಸಲು  ಟಾಟಾಸನ್ಸ್   ಆಸಕ್ತಿ ಹೊಂದಿದೆ ಎಂಬ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗುತ್ತಿದೆ.

ಏರ್ ಇಂಡಿಯಾದಲ್ಲಿ  ಕೇಂದ್ರ ಸರ್ಕಾರ ಹೊಂದಿರುವ  ಶೇ. 73 ರಷ್ಟು ಪಾಲನ್ನು ಸಂಪೂರ್ಣವಾಗಿ  ಖಾಸಗಿ ಸಂಸ್ಥೆಗೆ ಮಾರಾಟ ಮಾಡಲು ಕೇಂದ್ರ ಯೋಜಿಸಿದೆ. ಈ ಕ್ರಮದಲ್ಲಿ  ಮೂಲ ಕಂಪನಿಯ  ಷೇರುಗಳನ್ನು ಖರೀದಿಸಲು  ಟಾಟಾ ಗ್ರೂಪ್ ಮೂಲದ ಸಂಸ್ಥೆ  ಆಸಕ್ತಿ ತೋರಿಸುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.  ಮಲೇಷ್ಯಾದ ಕಂಪನಿಯೊಂದಿಗೆ   ಟಾಟಾ ಸನ್ಸ್ ಜಂಟಿ ಉದ್ಯಮ ವಿಮಾನಯಾನ ಸಂಸ್ಥೆಯಾದ ಏರ್ ಏಷ್ಯಾ ಮೂಲಕ  ಎಕ್ಸ್ ಪ್ರಷನ್  ಆಫ್   ಇಂಟರೆಸ್ಟ್  ಸಲ್ಲಿಸಿದೆ ಎಂಬ ಸುದ್ದಿ  ಬಂದಿದೆ.

ಆದರೆ...  ಏರ್ ಇಂಡಿಯಾಗಾಗಿ   ಏರ್ ಇಂಡಿಯಾ ಉದ್ಯೋಗಿಗಳ  ಗುಂಪು  ಇ ಒ ಐ ಸಲ್ಲಿಸಿದೆ ಎಂದು ತಿಳಿದುಬಂದಿದೆ.  ತಮ್ಮ  ಪ್ರಯತ್ನದಲ್ಲಿ  ಒಬ್ಬ  ಪ್ರಮುಖ ಹಣಕಾಸು ಸಲಹೆಗಾರರೂ ಭಾಗಿಯಾಗಿದ್ದಾರೆ ಎಂದು ಗುಂಪು ಹೇಳಿದೆ. ಇದಲ್ಲದೆ,  ಅಗ್ಗದ  ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್  ವ್ಯವಸ್ಥಾಪಕ ಅಜಯ್ ಸಿಂಗ್ ಕೂಡ ಏರ್ ಇಂಡಿಯಾದ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ  ಎಂದು ಹೇಳಲಾಗಿದ್ದು,  ಆದರೆ,  ಸ್ಪೈಸ್ ಜೆಟ್ ಈ ಬಗ್ಗೆ ಅಧಿಕೃತ ಹೇಳಿಕೆ  ಬಿಡುಗಡೆ ಮಾಡಿಲ್ಲ.

ವಾಸ್ತವವಾಗಿ, 2018 ರಲ್ಲಿ ಕೇಂದ್ರ  ಸರ್ಕಾರ, ಏರ್ ಇಂಡಿಯಾವನ್ನು   ಖಾಸಗೀಕರಣಗೊಳಿಸಲು ಪ್ರಯತ್ನಿಸಿತು. ಆದರೆ ಅದು ನಿರೀಕ್ಷಿತ ಫಲಿತಾಂಶ  ನೀಡಲಿಲ್ಲ. ಆ ಸಮಯದಲ್ಲಿ  ಸಂಸ್ಥೆ ಒಟ್ಟು 62,000 ಕೋಟಿ ರೂ. ಸಾಲ ಹೊಂದಿತ್ತು. ಈ ಬೃಹತ್ ಸಾಲದ ಭಾರ ತಮಗೆ  ವರ್ಗಾವಣೆಗೊಳ್ಳಲಿದೆ  ಎಂಬ ಆತಂಕದಿಂದಾಗಿ ಕಾರ್ಪೊರೇಟ್‌ ಸಂಸ್ಥೆಗಳು  ಖರೀಸಿಲು  ಮುಂದಾಗಲಿಲ್ಲ ಮೂಲಗಳು ಪ್ರತಿಕ್ರಿಯಿಸಿವೆ. ಇದರೊಂದಿಗೆ ಕೇಂದ್ರ  ಸಮಸ್ಯೆ ಪರಿಹರಿಸಲು  ಯತ್ನಿಸಿ  ಸಂಸ್ಥೆಯ ನಿವ್ವಳ ಸಾಲ 23,286 ಕೋಟಿರೂಗೆ  ತಗ್ಗಿಸಿದೆ. ಸರ್ಕಾರ  ಕಳೆದ ಜನವರಿಯಲ್ಲಿ ಎರಡನೇ ಬಾರಿಗೆ ಬಿಡ್‌ಗಳನ್ನು ಆಹ್ವಾನಿಸಿತ್ತು.  ಈ ಕ್ರಮದಲ್ಲಿ  ಟಾಟಾ ಸನ್ಸ್   ಪ್ರಸ್ತಾವನೆ ಮುನ್ನಲೆಗೆ ಬಂದಿದೆ.

ದೇಶದಲ್ಲಿ ಏರ್ ಇಂಡಿಯಾ  ಸ್ಥಾಪಿಸಿದ್ದು    ಜೆಆರ್‌ಡಿ ಟಾಟಾ.  ಸ್ವಾತಂತ್ರ್ಯ ಪೂರ್ವದಲ್ಲಿ  ಟಾಟಾ ಏರ್‌ಲೈನ್ಸ್ ಅನ್ನು ಪ್ರಾರಂಭಿಸಿದರು.  ಆದರೆ,  ಸ್ವಾತಂತ್ರ್ಯ ನಂತರ, ಕೇಂದ್ರ ಸರ್ಕಾರ   ಹೆಚ್ಚಿನ  ಪಾಲನ್ನು ಟಾಟಾ ಅವರಿಂದ  ಖರೀದಿಸಿತು. ಜವಹರಲಾಲ್  ನೆಹರೂ ನೇತೃತ್ವದ ಸರ್ಕಾರ  ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ  ಹಲವಾರು ಪ್ರಮುಖ ಖಾಸಗಿ  ಉದ್ಯಮಗಳನ್ನು  ರಾಷ್ಟ್ರೀಕರಣಗೊಳಿಸಿತು. ಈ ಅವಧಿಯಲ್ಲಿ, ಟಾಟಾ ಏರ್ ಲೈನ್ಸ್  ಪೂರ್ಣ ಪ್ರಮಾಣದ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿ  ಬದಲಾಗಿ, ಏರ್ ಇಂಡಿಯ ವಾಯಿತು. ಮಾರುಕಟ್ಟೆ ಮೂಲಗಳ ಪ್ರಕಾರ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಏರ್ ಇಂಡಿಯಾ ನಿಯಂತ್ರಣ ಟಾಟಾಗಳಿಗೆ  ಮರಳುವ ಸಾಧ್ಯತೆಯಿದೆ.

ಸುದ್ದಿ ಓದಿ