ಬಳ್ಳಾರಿ

ಐಟಿಐ ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಎಐಡಿವೈಓ ಆಗ್ರಹ

ಐಟಿಐ ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಎಐಡಿವೈಓ ಆಗ್ರಹ

ಬಳ್ಳಾರಿ 17 : ಐಟಿಐ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಎಐಡಿವೈಓ ಯುವಜನ ಸಂಘಟನೆಯಿಂದ ಬುಧವಾರ ಬಳ್ಳಾರಿಯಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಆಯುಕ್ತರಿಗೆ ಮನವಿ ಸಲ್ಲಿಸಿದರು. 

ಪ್ರತಿಭಟನೆ ವೇಳೆ ಎಐಡಿವೈಓ ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಜಗದೀಶ್ ನೇಮಕಲ್ ಮಾತನಾಡಿ, ಕೋವಿಡ್-19 ಕಾರಣದಿಂದಾಗಿ ಐಟಿಐ ವಿದ್ಯಾರ್ಥಿಗಳು ಸುಮಾರು 10 ತಿಂಗಳು ತರಬೇತಿಯನ್ನು ಕಳೆದುಕೊಂಡಿರುತ್ತಾರೆ. ಮೊದಲನೇ ವರ್ಷದ ಐಟಿಐ ವಿದ್ಯಾರ್ಥಿಗಳಿಗೆ ಮಾರ್ಚ್-2021ರಲ್ಲಿ ಪರೀಕ್ಷೆಯನ್ನು ನಡೆಸಬೇಕೆಂದು ಘೋಷಿಸಲಾಗಿದ್ದು, ಜೊತೆಗೆ ಶುಲ್ಕವನ್ನು ದಿ.17ರ ಒಳಗಾಗಿ ತುಂಬಬೇಕೆಂದು ಆದೇಶ ನೀಡಿರುತ್ತಾರೆ. ಇದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಠಿಸಿದೆ. ಕೂಡಲೇ ಈ ಕುರಿತು ಸರಿಯಾದ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು. 

ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಹೆಚ್.ಎರ್ರಿಸ್ವಾಮಿ ಅವರು, ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಗೆ ಕನಿಷ್ಠ 10-15 ದಿನಾಗಳ ಕಾಲಾವಕಾಶವನ್ನು ನೀಡಬೇಕಿತ್ತು ಎನ್ನುವುದು ಪೋಷಕರ ಅಭಿಪ್ರಾಯವಾಗಿದೆ. ಈ ಗೊಂದಲ, ಆತಂಕಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಐಟಿಐ ವಿದ್ಯಾರ್ಥಿಗಳಾದ ರುದ್ರೇಶ್, ವಂಶಿ, ದುರ್ಗೇಶ್, ಎರ್ರಿಸ್ವಾಮಿ, ಕಾರ್ತಿಕ್, ಜಿ.ಶೇಖರ್, ಜಮೀರ್ ಭಾಷಾ ಇನ್ನಿತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿ ಓದಿ