ಧಾರವಾಡ - ಹುಬ್ಬಳ್ಳಿ

ಸೋನಂ ವಾಂಗ್ಚುಕ್ ಬೆಂಬಲಿಸಿ ಎಐಡಿಎಸ್ಒ ಪ್ರತಿಭಟನೆ

ಸೋನಂ ವಾಂಗ್ಚುಕ್ ಬೆಂಬಲಿಸಿ ಎಐಡಿಎಸ್ಒ ಪ್ರತಿಭಟನೆ

ಲೋಕದರ್ಶನ ವರದಿ 

ಧಾರವಾಡ  18 : ಸೋನಂ ವಾಂಗ್ಚುಕ್ ಹಾಗೂ ಇತರೆ ಉಪವಾಸನಿರತ ಹೋರಾಟಗಾರರೊಂದಿಗೆ ನಾವಿದ್ದೇವೆ, ಹೋರಾಟಗಾರರೊಂದಿಗೆ ಪ್ರಜಾತಾಂತ್ರಿಕ ಸಂವಾದ ಆರಂಭಿಸಲು  ಆಗ್ರಹಿಸಿ ಹಾಗೂ ಉಪವಾಸ ನಿರತ ಹೋರಾಟಗಾರರನ್ನು ಬಲವಂತವಾಗಿ ಎಳೆದೊಯ್ದ ಸರ್ಕಾರದ ಅಪ್ರಜಾತಾಂತ್ರಿಕ ನಡೆಯನ್ನು ಖಂಡಿಸಿ ಇಂದು ವಿವೇಕಾನಂದ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು ಎಐಡಿಎ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.! 

ಪ್ರತಿಭಟನೆಯನ್ನು ಉದ್ದೇಶಿಸಿ  “ಹಿರಿಯ ಸಾಹಿತಿಗಳಾದ ಹೇಮಾ ಪಟ್ಟಣಶೆಟ್ಟಿ ಅವರು ಮಾತನಾಡಿ ದೇಶದಾದ್ಯಂತ ಈ ಅನ್ಯಾಯದ ವಿರುದ್ಧ  ಈಗಾಗಲೇ ಹಲವಾರು ಕಡೆ ಹೋರಾಟಗಳು ನಡೆದಿವೆ. ಅದೇ ರೀತಿ ಕಳೆದ 21 ದಿನದಿಂದ ದೆಹಲಿಯ ಜಂತರ್ ಮಂತರಲ್ಲಿ ಸೋನಂ ವಂಗ್ಚುಕ್ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಕಿಂಚಿತ್ತು ಕಾಳಜಿಯಾದರೂ ಇದ್ದರೆ ಅವರ ಜೊತೆಗೆ ಮಾತುಕತೆಯನ್ನು ನಡೆಸಬೇಕಿತ್ತು. ಆದರೆ ಇಲ್ಲಿಯವರೆಗೂ ಒಂದು ಮಾತನ್ನು ಕೂಡ ಆಡಿಲ್ಲ. ಇದು ಸರ್ಕಾರದ ನಿರ್ಲಕ್ಷವನ್ನು ತೋರಿಸುತ್ತದೆ. ಹಾಗೆ ಒಂದು ಪ್ರಜಾತಾಂತ್ರಿಕ ದೇಶದಲ್ಲಿ ಇದು ನಡೆಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.” 

ಹಿರಿಯ ಕಲಾವಿದರಾದ ಬಿ ಮಾರುತಿ ಅವರು ಮಾತನಾಡಿ,  “21 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿರುವ  ಸೋನಂ ವಾಂಗ್ಚುಕ್  ಅವರ ಜೊತೆಗೆ ಮಾತುಕತೆಗೆ ನಡೆಸಬೇಕಾದ ಕೇಂದ್ರ ಸರ್ಕಾರ, ಅದರ ಬದಲಾಗಿ ಅವರನ್ನು ಇಂದು ಜಂತರ್ ಮಂತರ್ ನಿಂದ ಬಲವಂತವಾಗಿ ತೆರವುಗೊಳಿಸಿರುವ   ಅಪ್ರಜಾತಾಂತ್ರಿಕ, ಸರ್ವಾಧಿಕಾರಿ ಧೋರಣೆಯನ್ನು ಅತ್ಯುತ್ರವಾಗಿ ಖಂಡಿಸಿದರು. 

ಸುದ್ದಿ ಓದಿ