ಬಳ್ಳಾರಿ

ಅಖಿಲ ಭಾರತ ಬೇಡಿಕೆಗಳ ಸಪ್ತಾಹ: ಆನ್‌ಲೈನ್ ಚಳುವಳಿ

ಅಖಿಲ ಭಾರತ ಬೇಡಿಕೆಗಳ ಸಪ್ತಾಹ:  ಆನ್‌ಲೈನ್ ಚಳುವಳಿ

ಬಳ್ಳಾರಿ 30: ಇಂದು AIDSO ಬಳ್ಳಾರಿ ಜಿಲ್ಲಾ ಸಮಿತಿಯಿಂದ ಕೋವಿಡ್‌-19ರ ಎರಡನೇ ಅಲೆಯಿಂದಾಗಿ ಜನರು ತಿವ್ರ ಸಂಕಷ್ಟದಲ್ಲಿ ಇದ್ದಾರೆ. ಎಲ್ಲಾ ಜನರಿಗೂ ಕೊರೊನಾ ವ್ಯಾಕ್ಸಿನ್ ಉಚಿತವಾಗಿ ನೀಡಿರಿ, ಎಲ್ಲರಿಗೂ ಆರೋಗ್ಯ ವ್ಯವಸ್ಥೆ ಕಲ್ಪಿಸಿ ಎಂದು ಅಖಿಲ ಭಾರತ ಬೇಡಿಕೆಗಳ ಸಪ್ತಾಹ (ಏಪ್ರೀಲ್ 25ರಿಂದ ಮೇ 1ರವರೆಗೂ) ಅಂಗವಾಗಿ ಆನ್‌ಲೈನ್ ಚಳುವಳಿ ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ಜಿಲ್ಲೆಯಾದ್ಯಾದಂತ ನೂರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಜನಸಾಮಾನ್ಯರು ಬೇಡಿಕೆಗಳ ಫಲಕ ಹಿಡಿದು ಫೋಟೋ ತೆಗೆದು ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದರ ಮೂಲಕ ಆನ್‌ಲೈನ್ ಚಳುವಳಿಯಲ್ಲಿ ಭಾಗವಹಿಸಿದರು. 

ಕೋವಿಡ್ -19ರ ಎರಡನೇ ಅಲೆಗೆ ಒಂದೆಡೆ ಇಡೀ ದೇಶವೇ ನಲುಗಿದೆ. ಎಲ್ಲೆಡೆ ಸಾವು ನೋವುಗಳ ಆಕ್ರಂದನ, ಜೀವನದ ಮೇಲೆ ಹತಾಶೆಯು ಮನೆ ಮಾಡಿದೆ. ದಿನೇ ದಿನೇ ಏರುತ್ತಿರುವ ಪ್ರಕರಣಗಳು ಮೈ ನಡುಗಿಸಿದೆ. ತನ್ನನ್ನು,  ತನ್ನವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಅದೆಷ್ಟೋ ಜೀವಗಳು ಚೀರುತ್ತಿರುವ ಘಟನೆಗಳು ಹೃದಯವಿದ್ರಾವಕವಾಗಿವೆ. ಕೊರೊನಾಯಿಂದ ಬಳಲುತ್ತಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆಯಿಲ್ಲದೇ ಸಾಯುತ್ತಿರುವುದು ಅತ್ಯಂತ ದುರಂತರವೇ ಸರಿ. ಕೆಲವೋ ದಿನದ ಹಿಂದೆ ದೇಶದ ಎರಡು ಆಸ್ಪತ್ರೆಗಳಲ್ಲಿ 30 ಜನರು ಆಕ್ಸಿಜನ್ ಇಲ್ಲದೇ ಅಸುನೀಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆಸ್ಪತ್ರೆ ಗಳಲ್ಲಿ ಮೂಲಭೂತವಾಗಿ ಆಕ್ಸಿಜನ್ ಸೌಕರ್ಯ ಎಲ್ಲರಿಗೂ ದೊರಕಬೇಕು. ಆದರೆ ಈ ಮಟ್ಟಿಗಿನ ಕೊರತೆ ಹಾಗೂ ಆಕ್ಸಿಜನ್‌ಗಾಗಿ ಜನ ಬೀದಿ ಬೀದಿ ಅಲೆಯುತ್ತಿರುವ ಧಾರುಣ ಪರಿಸ್ಥಿತಿ ಏಕೆ!? ಇದಕ್ಕೆ ಸರ್ಕಾರದ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣವಾಗಿದೆ. 

ಈ ಹಿನ್ನೆಲೆ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸುವಂತೆ, ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಮತ್ತು ಉಚಿತ ಲಸಿಕೆ ನೀಡುವಂತೆ ಒತ್ತಾಯಿಸಲು ಏಪ್ರಿಲ್ 25ರಿಂದ ಮೇ 1ರವರೆಗೆ ಅಖಿಲ ಭಾರತ ಸಪ್ತಾಹದ ಹಿನ್ನೆಲೆಯಲ್ಲಿ ಂಋಖಓ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಇಂದು ಆನ್‌ಲೈನ್ ಚಳುವಳಿಯನ್ನು ಸಂಘಟಿಸಲಾಗಿದೆ, ಈ ಚಳುವಳಿಯಲ್ಲಿ ನೂರಾರು  ವಿದ್ಯಾರ್ಥಿಗಳು, ಜನಸಾಮಾನ್ಯರು ಭಾಗವಹಿಸವಹಿಸಿದ್ದರು ಎಂದು ಂಋಖಓ ಜಿಲ್ಲಾ ಅಧ್ಯಕ್ಷರಾದ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್‌.ಜೆ.ಪಿ ಹೇಳಿದರು. 


ಸುದ್ದಿ ಓದಿ