ಇಂಡಿ

ಏಡ್ಸ್‌ ರೋಗ ಸಂಪೂರ್ಣ ಹತೋಟೆಗೆ ಬಂದಿಲ್ಲ: ಅಂಬಲಗಿ

ಏಡ್ಸ್‌ ರೋಗ ಸಂಪೂರ್ಣ ಹತೋಟೆಗೆ ಬಂದಿಲ್ಲ: ಅಂಬಲಗಿ


ಇಂಡಿ 03: ಏಡ್ಸ್‌ ರೋಗ ತಡೆಗಟ್ಟುವಿಕೆಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಕಾಯಿಲೆ ಸಂರ​‍್ೂಣ ಹತೋಟೆಗೆ ಬಂದಿಲ್ಲ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಸುನಂದ.ಎಸ್‌. ಅಂಬಲಗಿ ಹೇಳಿದರು. 

ಅವರು ಗುರುವಾರ ಪಟ್ಟಣದ ಅಗರಖೇಡ ರಸ್ತೆಯ ದೀಪಾಲಯ ಸಂಸ್ಥೆ ಹಾಗೂ ತಾಲೂಕಾ ಆಸ್ಪತ್ರೆ ಇಂಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಏಡ್ಸ್‌ ದಿನಾಚರಣೆ ಅಂಗವಾಗಿ ಮಾತನಾಡಿದರು. 

ಸರಕಾರವು ತಾಲೂಕಾ ಮತ್ತು ಹೋಬಳಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಪ್ರತಿ ವರ್ಷವೂ ಏಡ್ಸ್‌ ನಿಯಂತ್ರಣಕಾಗಿ ಒಂದೊಂದು ಘೋಷವಾಕ್ಯವನ್ನು ಹೊರಡಿಸಲಾಗುತ್ತಿದ್ದು. ಈ ಬಾರಿ ಎಚ್‌ಐವಿ ಸೋಂಕಿನ ತಡೆಗಾಗಿ ಜಾಗೃತಿಕ ಒಗ್ಗಟ್ಟು ಜವಾಬ್ದಾರಿಯನ್ನು ಹಂಚಿಕೆ ಎಂಬ ಘೋಷಣೆ ಮಾಡಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ದೀಪಾಲಯ ಸಂಸ್ಥೆಯ ನಿರ್ದೇಶಕ ಜೋಶಿಂತ್, ಸಮನ್ವಯ ಅಧಿಕಾರಿ ವೀಣಾ ಲೋಬೊ, ಕೆ.ಜಿ. ಶೀಲವಂತ ಐ.ಸಿ.ಟಿ.ಸಿ. ಕೌನ್ಸಲರ್, ಎಸ್‌.ಎನ್‌. ಸಜ್ಜನ್ ಎಸ್‌.ಟಿ.ಟಿ.ಕೌನ್ಸಲರ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಉಪಸ್ಥಿತರಿದ್ದರು. 



ಸುದ್ದಿ ಓದಿ