ಬಳ್ಳಾರಿ

20ರಂದು ಎಬಿವಿಪಿ ರಾಜ್ಯ ಸಮ್ಮೇಳನ

20ರಂದು ಎಬಿವಿಪಿ ರಾಜ್ಯ ಸಮ್ಮೇಳನ

ಬಳ್ಳಾರಿ 12:  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ನಗರ ಶಾಖೆ ವತಿಯಿಂದ ಎಬಿವಿಪಿಯ 40ನೇ ರಾಜ್ಯ ಸಮ್ಮೇಳನ ಬಳ್ಳಾರಿ ವಿಭಾಗದ ರಾಯಚೂರಿನಲ್ಲಿ 2021ನೇ ಫೆಬ್ರವರಿ 20, 21ರಂದು ನಡೆಯಲಿದ್ದು, ಸಮ್ಮೇಳನದ ಪೋಸ್ಟರ್‍ಗಳನ್ನು ನಗರದ ಕಲ್ಯಾಣ ಸ್ವಾಮೀಜಿ, ಕಲ್ಯಾಣ ಸ್ವಾಮಿ ಮಠ ಹಾಗೂ ಬಳ್ಳಾರಿ ನಗರದ ವಿವಿಧ ಕಾಲೇಜುಗಳಲ್ಲಿ ಅಧ್ಯಕ್ಷರು ಪ್ರಾಂಶುಪಾಲರ ಮೂಲಕ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರ ಸಂಘಟನಾ ಕಾರ್ಯದರ್ಶಿ ಕೌಶಿಕ್, ವಿಭಾಗ ಸಹ ಸಂಚಾಲಕರು ಹರ್ಷನಾಯಕ್, ಜಿಲ್ಲಾ ಸಂಚಾಲಕ ಪ್ರವೀಣ್, ನಗರ ಕಾರ್ಯದರ್ಶಿ ಹೊನ್ನೂರಸ್ವಾಮಿ, ವಿನೋದ್, ಪ್ರಸಾದ್, ರುದ್ರೇಶ್, ಮಂಜುನಾಥ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸುದ್ದಿ ಓದಿ