ಎಎಪಿ ಅಭ್ಯರ್ಥಿ ಹನುಮಂತಪ್ಪ ನಾಮಪತ್ರ ಸಲ್ಲಿಕೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ.ಏ.16 : ಯಾವುದೇ ಷರತ್ತುಗಳನ್ನು ವಿಧಿಸದೇ ಆಮ್ ಆದ್ಮಿ ಪಾರ್ಟಿಗೆ ಸೇರೆ್ಡಯಾಗಿದ್ದನೆ ಎಂದು ಎಎಪಿಯ ರಾಜ್ಯ ಕಾರ್ಯದರ್ಶಿ ತಿಪ್ಪೇಸ್ವಾಮಿ ವೆಂಕಟೇಶ್ ಹೇಳಿದರು.
ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿಯ ಹಾಲಸ್ವಾಮಿ ಮಠದ ಬಳಿ ಇರುವ ಎಎಪಿ ಕಾರ್ಯಾಲಯದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಅವರು ಮಾತನಾಡಿದರು. ಈ ಮೊದಲು ಕ್ಷೇತ್ರದ ಜೆಡಿಎಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೆ ಆದರೆ ಪಕ್ಷದಲ್ಲಿ ಪ್ರಮಾಣಿಕವಾಗಿ ದುಡಿದವರಿಗೆ ಟಿಕೇಟ್ ನಿಡದೇ, ಸರ್ವಾಧಿಕಾರಿ ಧೋರಣೆ ತಾಳಿದ ಕೆಲ ಪಕ್ಷದ ಮುಖಂಡರು ನನಗೆ ಟಿಕೇಟ್ ನೀಡದಿರುವಂತೆ ಹಾಗೂ ಇಲ್ಲಿನ ತಾಲೂಕಾಧ್ಯಕ್ಷರನ್ನು ನನ್ನಜೊತೆ ಗುರುತಿಸಿಕೊಳ್ಳದಂತೆ ತಾಕೀತು ಮಾಡಿ ನನಗೆ ಟಿಕೇಟ್ ಸಿಗದಂತೆ ಮಾಡಿದ್ದಾರೆ ಇದಕ್ಕೆ ಬೇಸರವಾಗಿ ಕಳೆದ ಕೆಲದಿನಗಳ ಹಿಂದೆ ಎಎಪಿ ಗೆ ಸೇರೆ್ಡಯಾಗಿದ್ದೆನೆ.
ಎಎಪಿಯ ರಾಜ್ಯ ನಾಯಕರು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ತಿಳಿಸಿದರು ಈ ಮೊದಲೇ ಹನುಮಂತಪ್ಪನವರಿಗೆ ಟಿಕೇಟ್ ಖಾತರಿಯಾಗಿದ್ದು ಜೆಡಿಎಸ್ ನನಗೆ ಮೋಸಮಾಡಿದೆ ಎಂದು ನಾನು ಮತ್ತೊಬ್ಬರಿಗೆ ಮೋಸ ಮಾಡಬಾರದು ಎಂದು ಹನುಮಂತಪ್ಪನವರಿಗೆ ಟಿಕೇಟ್ ನೀಡಿ ಅವರ ಪರ ಕೆಲಸ ಮಾಡುವುದಾಗಿ ಹೇಳಿದ್ದೆನೆ ಎಂದರು.
ಸೋಮವಾರ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅಭ್ಯರ್ಥಿ ಹನುಮಂತಪ್ಪನವರು ಬೆಳೆಗ್ಗೆ ನಾಮಪತ್ರ ಸಲ್ಲಿಸಲಿದ್ದು, ಇವರ ಗೆಲುವಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತವೆ, ಪಕ್ಷದಲ್ಲಿ ಭ್ರಷ್ಠಮುಕ್ತ ಆಡಳಿತಕ್ಕೆ ಮೊದಲ ಮನ್ನಣೆ ಇದ್ದು ಇಲ್ಲಿನ ಮತದಾರರು ಪಕ್ಷಕ್ಕೆ ಬೆಂಬಲ ನೀಡುವುದರಲ್ಲಿ ಯಾವುದೆ ಅನುಮಾನವಿಲ್ಲ, ಸೇರೆ್ಡಯಾದ ಕೋಡಲೇ ರಾಜ್ಯ ಕಾರ್ಯದರ್ಶಿ ಹಾಗೂ ಸ್ಟಾರ್ ಪ್ರಚಾರ ಸಮಿತಿಯಲ್ಲಿ ಸ್ಥಾನ ನೀಡಿದ್ದು ಬಾವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಎಂದರು.
ಅಭ್ಯರ್ಥಿ ಹನುಮಂತಪ್ಪ ಮಾತನಾಡಿ ಕ್ಷೇತ್ರದಲ್ಲಿ ಎಎಪಿಗೆ ಅಪಾರ ಬೆಂಬಲವಿದೆ ಸ್ವಚ್ಛ ರಾಜಕಾರಣವೇ ಪಕ್ಷದ ಧ್ಯೆಯವಾಖ್ಯವಾಗಿದೆ, ತಿಪ್ಪೆಸ್ವಾಮಿ ವೆಂಕಟೇಶ್ ಅವರು ಅಭ್ಯರ್ಥಿಯಾಗಿ ಎಂದು ರಾಜ್ಯ ನಾಯಕರು ಹೇಳಿದರು ನನ್ನ ಪರವಾಗಿ ಕೆಲಸ ಮಾಡುವುದಾಗಿ ಹೇಳಿರುವುದು ನಿಜಕ್ಕೂ ಸಂತಸ ತಂದಿದೆ ಈ ಬಾರಿ ಮತದಾರರು ಸ್ವಚ್ಛ ರಾಜಕಾರಣಕ್ಕೆ ಮನ್ನಣೆ ನೀಡಿದ್ದು ಎಎಪಿ ಗೆಲುವಿನ ಸಂಬ್ರಮ ಆಚರಿಸಲಿದೆ ಎಂದರು. ಇದೇ ಸಂಧರ್ಭದಲ್ಲಿ 30ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರೆ್ಡಗೊಂಡರು.ಈ ಸಂಧರ್ಭದಲ್ಲಿ ರಾಮನಗೌಡ್ರು, ಕುಮಾರನಾಯ್ಕ್, ನವೀನ್ ಕುಮಾರರ (ರಾಜು), ಜಮದಗ್ನಿ, ಲಿಂಗನಗೌಡ, ದಾದಾಪೀರ್, ರೋಷನ್, ಬಸವರಾಜ ಸೇರಿದಂತೆ ಇನ್ನಿತರರು ಇದ್ದರು.