ಅಪ್ಪಟ ದೇಶಭಕ್ತ, ಕ್ರಾಂತಿಕಾರಿ ಚಂದ್ರಶೇಖರ ಆಜಾದನ ಒಂದು ನೆನಪು
ಅಪ್ಪಟ ದೇಶಭಕ್ತ, ಕ್ರಾಂತಿಕಾರಿ ಚಂದ್ರಶೇಖರ ಆಜಾದನ ಒಂದು ನೆನಪು
ಹದಿಮೂರು ವರ್ಷದ ಆ ಪುಟ್ಟ ಬಾಲಕನ ಬಾಯಿಂದ ಬಂದ ಮಾತು ದುಷ್ಮನೋಂಕೆ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ.... ಆಜಾದ್ ಹೀ ರಹೇ ಹೆ ಹಮ್ ಆಜಾದ್ ಹೀ ರಹೇಂದೆ! ಇಂದಿಗೂ ಆ ಮಾತನ್ನು ನೆನಪಿಸಿಕೊಂಡರೆ ಮೈ ಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಬಾಲ್ಯದಲ್ಲಿ ಮಾಡಿದ ತನ್ನ ಪ್ರತಿಜ್ಞೆಯಂತೆ; ತನ್ನ ಇಡೀ ಜೀವಿತ ಅವಧಿಯವರೆಗೂ ಆಂಗ್ಲ ಸಕರ್ಾರದ ಕೈಯಲ್ಲಿ ಸಿಗದೆ ಚಳ್ಳೆಹಣ್ಣು ತಿನ್ನಿಸಿ, ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಿದ ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್, ಇವರ ಚಾಣಾಕ್ಷತೆ, ಸಾಮಥ್ರ್ಯಕ್ಕೆ ಭಗತ್ಸಿಂಗ್, ರಾಜಗುರು, ಸುಖದೇವರಿಗಿಂತ ಎರಡು ಪಟ್ಟು ಹೆಚ್ಚು!. ನೂರಾರು ಬ್ರಿಟೀಷ್ ಪೊಲೀಸರು ಎಕಕಾಲಕ್ಕೆ ಅಟ್ಟಿಸಿಕೊಂಡು ಹೋದರೂ, ಯಾರೊಬ್ಬರ ಕೈಗೆ ಸಿಗದೆ ಮಾಯವಾದಂತೆ ತಪ್ಪಿಸಿಕೊಂಡು ಹೋಗಿಬಿಡುತ್ತಿದ್ದ.
ಆಜಾದ್ ತನ್ನ 15ನೇ ವಯಸ್ಸಿನಲ್ಲಿ ಸಂಸ್ಕೃತ ಕಲಿಯಲು ಕಾಶಿಗೆ ಬಂದಿದ್ದ, ಆ ಸಂದರ್ಭದಲ್ಲ್ಲಿಯೇ 1919 ಜಲಿಯನ್ ವಾಲಾಬಾಗದ ದುರಂತ ನಡೆದುಹೋಯಿತು. ಅಮೃತಸರದ ಜಲಿಯನ್ ವಾಲಾಬಾಗ ಉದ್ಯಾನವನದಲಿ,್ಲ ಬ್ರಿಟಿಷರ ಕ್ರೂರ ಧೋರಣೆಯ ಪ್ರತೀಫಲವಾಗಿ ಜಾರಿಗೊಳಿಸಿದ್ದ ರೌಲೆಟ್ ಕಾಯ್ದೆಯ ವಿರುದ್ದವಾಗಿ ಅತ್ಯಂತ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ತನ್ನ ಸೈನಿಕ ಸೂತ್ರಭದ್ದ ಯೋಜನೆಯೊಂದಿಗೆ ಆ ಸ್ಥಳಕ್ಕೆ ಆಗಮಿಸಿದ ಆಂಗ್ಲ ಅಧಿಕಾರಿ ಜನರಲ್ ಡಯರ್, ಅಲ್ಲಿದ್ದ ನೂರಾರು ಜನರ ಮೇಲೆ ಹಿಂದೆ ಮುಂದೆ ನೋಡದೆ ಗುಂಡು ಹಾರಿಸಲು ಆದೇಶ ನೀಡಿಬಿಡುತ್ತಾನೆ. ಅವರ ಆ 1650 ಸುತ್ತಿನ ಗುಂಡೆಟಿನ ಸುರಿಮಳೆಯ ರಭಸಕ್ಕೆ ಒಂದೇ ಒಂದು ಗುಂಡು ಮಿಸ್ ಆಗಲಿಲ್ಲ, ನೂರಾರು ಜನರು ಸಾವನ್ನಪ್ಪಿದರು. ಆ ಘಟನೆಯಲ್ಲಿ ಹತ್ಯೆಯಾದವರ ಸುದ್ದಿ ದೇಶದ ಎಲ್ಲೆಡೆಯೂ ಹಬ್ಬಿತ್ತು, ಈ ರಾಕ್ಷಸಿಯ ಘಟನೆಯಿಂ ತಿವೃವಾಗಿ ಮನನೊಂದ ಮಹಾತ್ಮಾ ಗಾಂಧೀಜಿ ದೇಶಾದ್ಯಂತ ಬ್ರಿಟಿಷರ ವಿರುದ್ದ ಅ ಸಹಕಾರ ಚಳುವಳಿಗೆ ಕರೆ ಕೊಟ್ಟರು. ಇದರ ಉದ್ದೇಶ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು, ವಿದ್ಯಾಥರ್ಿಗಳು ಶೈಕéಣಿಕ ಸಂಸ್ಥೆಗಳಿಂದ ಹೊರಬರುವುದು, ಸರಕಾರಿ ಕೆಲಸಕ್ಕೆ ಹಾಜರಾಜದೇ ಇರುವುದು, ಕೋಟರ್ು, ಕಛೇರಿಗಳನ್ನು ಬಹಿಷ್ಕರಿಸಿ ಹೋರಾಟ ಮಾಡುವುದು ಈ ಚಳುವಳಿಯ ಉದ್ದೇಶವಾಗಿತ್ತು. ಆಗ ಚಂದ್ರಶೇಖರ ಆಜಾದನೂ ಈ ಆಂದೋಲನದಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಿ, ಭಗತ್ ಸಿಂಗ್, ರಾಜಗುರು, ಸುಖದೇವ, ರಾಮ್ ಪ್ರಸಾದ್ ಬಿಸ್ಮಿಲ್, ಆಶ್ಫಾಕುಲ್ಲಾಖಾನ್ ಅವರೊಂದಿಗೆ ಜತೆಗೂಡಿ ಹೋರಾಟಕ್ಕಿಳಿದ. ಆ ಚಳುವಳಿ ನಡೆಯುತ್ತಿದ್ದಂತೆ ಗೋರಖ್ಪುರದ ಚೌರಿಚೌರಾ ಎಂಬ ಗ್ರಾಮದಲ್ಲಿ ರೊಚ್ಚಿಗೆದ್ದ ಕ್ರಾಣತಿಕಾರಿಗಳ ಗುಂಪೊಂದು ಇಪ್ಪತ್ತೆರಡು ಜನ ಪೊಲೀಸ್ ಮತ್ತು ಒಬ್ಬ ಪಿಎಸ್ ಐನನ್ನು ಠಾಣೆಯ ಕಟ್ಟಡದಲ್ಲಿಯೇ ಬೆಂಕಿಹಾಕಿ ಕೊಂದಿತು. ಇದರಿಂದ ಅಸಹಕಾರ ಚಳುವಳಿಗೆ ಮುಖಭಂಗವಾಯಿತು. ಪರಿನಾಮ ಗಾಂಧೀಜಿ ಕೂಡಲೇ ಈ ಚಳುವಳಿಯನ್ನು ಹಿಂಪಡೆದರು. ಲಾಲಾ ಲಜಪತರಾಯರು ಗಾಂಧೀಜಿಯ ಈ ಕ್ರಮವನ್ನ ಕಟುವಾಗಿ ವಿರೋಧಿಸಿದರು.
ತದನಂತರ ಕಾಶಿಯಲ್ಲಿ ಜರುಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಮೆರವಣಿಗೆ ಮೇಲೆ ಪೊಲೀಸರು ಲಾಟಿ ದೌರ್ಜನ್ಯ ಮಾಡುತ್ತಾರೆ ಆ ದೃಶ್ಯವನ್ನು ಕಣ್ಣಾರೆ ಕಂಡ ಪುಟ್ಟ ಹುಡುಗ ಚಂದ್ರಶೇಖರ ಆಜಾದ್ ಆ ಪೊಲೀಸ್ ಅಧಿಕಾರಿಗೆ ಕಲ್ಲಿನಿಂದ ಹೊಡೆದೆಬಿಟ್ಟ. ಅಲ್ಲಿದ್ದ ಪೊಲೀಸರು ತಕ್ಷಣಕ್ಕೆ ಅವನನ್ನು ಬಂಧಿಸಿ ಜೈಲಿಗೆ ಹಾಕಿದರು. ಮರುದಿನ ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರನೆಯ ವೇಳೆಯಲ್ಲಿ ನ್ಯಾಯಾಧೀಶರು ಏನು ನಿನ್ನ ಹೆಸರು? ಆಗ ಆ ಪುಟ್ಟ ಬಾಲಕನ ಬಾಯಿಂದ ಬಂದ ಉತ್ತರ ನನ್ನ ಹೆಸರು ಆಜಾದ್! ನಿನ್ನ ತಂದೆಯ ಹೆಸರೇನು? ಸ್ವಾಧೀನತೆ ನನ್ನ ಅಪ್ಪ ಎಂದ, ಯಾವುದು ನಿನ್ನ ವಿಳಾಸ? ಆಗ ಆಜಾದ್ ಸೆರೆಮನೆನೆ ನನ್ನ ವಿಳಾಸ ಎಂದುಬಿಟ್ಟ! ಕಣ್ಣು ಮಿಟುಕಿಸದೆ ಆಜಾದನನ್ನು ನೋಡುತ್ತಿದ್ದ ನ್ಯಾಯಾಧೀಶರು ಆಜಾದನಿಗೆ 12 ಛಡಿ ಏಟಿನ ಶಿಕ್ಷೆ ಘೋಷಿಸಿದರು, ಪ್ರತಿ ಛಡಿ ಏಟಿನ ಶಿಕ್ಷೆ ಕೊಡುವಾಗ ಆಜಾದನ ಬಾಯಿಂದ ಬರುತ್ತಿದ್ದದ್ದು 'ವಂದೇ ಮಾತರಂ' ರಣ ಮಂತ್ರದ ಝೇಂಕಾರ! ಕೊಟ್ಟು ಜೈಲಿಗೆ ಈ ಪುಟ್ಟ ಹುಡುಗನ ಪೊಗರಿಗೆ ಬ್ರಿಟೀಷರು ಮಾತ್ರ ಹೆದರಿಹೋಗಿದ್ದರು.
ಚಂದ್ರಶೇಖರ ಆಜಾದ್ ತನ್ನ 17ನೇ ವಯಸ್ಸಿನಲ್ಲಿ ರಾಮ್ಪ್ರಸಾದ್ ಬಿಸ್ಲಿಲ್ ಪ್ರಾರಂಭಿಸಿದ 'ಹಿಂದೂಸ್ಥಾನ್ ರಿಪಬ್ಲಿಕನ ಆಮರ್ಿ' ಎಂಬ ಕ್ರಾಂತಿಕಾರಿ ಸಂಸ್ಥೆಗೆ ಸೇರಿಕೊಂಡು ಕ್ರಾಂತಿಕಾರಕ ಚಟುವಟಿಕೆಗಳಿಗೆ ಹೊಸ ಆಯಾಮಗಳನ್ನು ರೂಪಿಸಿದ. ಹಳ್ಳಿ ಹಳ್ಳಿಗಳಿಗೆ ಸಂಚರಿಸಿ, ಹೆಚ್ಚು ಹೆಚ್ಚು ಯುವಕರನ್ನು ಸಂಘಟಿಸಿದ. ಹಿಂದೂಸ್ಥಾನ್ ರಿಪಬ್ಲಿಕನ್ ಆಮರ್ಿಗೆ ಬಂದೂಕು, ಸಾಮಗ್ರಿಗಳ ಅಗತ್ಯತೆಗೆ ಹಣದ ಕೊರತೆ ಇತ್ತು. ಆಗ ರಾಮ್ಪ್ರಸಾದ್ ಬಿಸ್ಮಿಲ್ ಬರೆದ ಅಮೇರಿಕ ಸ್ವಾತಂತ್ರ್ಯವನ್ನು ಹೇಗೆ ಪಡೆಯಿತು' ಎಂಬ ಪುಸ್ತಕ ಪ್ರಕಟಿಸಿದರು. ಅದರ ಮಾರಾಟದಿಂದ ಬಂದ ಹಣದಿಂದ ಬೆಕಾದ ಸಾಮಗ್ರಿಗಳನ್ನು ಖರೀದಿಸಿದರು.
1925 ಅಗಷ್ಟ 9 ರಂದು ಲಕ್ನೋ ಪಕ್ಕದ ಕಾಕೋರಿ ಗ್ರಾಮದ ಬಳಿ ಬರುತ್ತಿದ್ದ ರೈಲಿನಲ್ಲಿ ರಾಮ್ಪ್ರಸಾದ ಬಿಸ್ಮಿಲ್ಲ, ಆಶ್ಫಾಕ್ ಉಲ್ಲಾಖಾನ್, ಚಂದ್ರಶೇಖರ ಆಜಾದ್ ಸೇರಿದಂತೆ ಒಟ್ಟು ಒಂಬತ್ತು ಜನರ ತಂಡ ಕೂಡಲೇ ಆ ರೈಲೊಳಗೆ ನುಗ್ಗಿ, ರೈಲಿನ ಸರಪಳಿ ಎಳೆದು ಅದರಲ್ಲಿನ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಪರಾರಿಯಾದರು. ತಕ್ಕಮಟ್ಟಿಗೆ ಆ ಸಂದರ್ಭದಲ್ಲಿ ಯಾರೊಬ್ಬರು ಸಿಗಲಿಲ್ಲ. ಕೆಲ ದಿನಗಳ ನಂತರ ಸಂಶಯಾಸ್ಪದವಾಗಿ ಪೊಲೀಸರು ಹಿಂದೂಸ್ಥಾನ್ ಅಸೋಸಿಯೆಸಿಯನ್ನಿನ ಎಲ್ಲ ಮುಖಂಡರನ್ನು ಬಂಧಿಸಿದರು. ಆದರೆ ಆಜಾದ್ ಮಾತ್ರ ಅವರ ಕೈಗೆ ಸಿಗಲಿಲ್ಲ, ತಪ್ಪಿಸಿಕೊಂಡು ಹೋದ. 1927ರ ಡಿಸೆಂಬರ್ 17 ರಂದು ರಾಮ್ಪ್ರಸಾದ್ ಬಿಸ್ಮಿಲ್ಲ, ಆಶ್ಫಾಕ್ ಉಲ್ಲಾಖಾನ್, ರೋಶನ್ಸಿಂಹರವರನ್ನು ಗಲ್ಲಿಗೇರಿಸಿದರು. ಕಾಕೋರಿ ಘಟನೆಯ ನಂತರ ತಪ್ಪಿಸಿಕೊಂಡ ಚಂದ್ರಶೇಖರ ಆಜಾದ್ ಅನೇಕ ರೀತಿಯಲ್ಲಿ ವೇಷ ಮರೆಸಿಕೊಂಡು ಸನ್ಯಾಸಿ, ಕೂಲಿ, ಸಾಹುಕಾರ, ಡ್ರೈವರ್, ಪೊಲೀಸ್ ಇನ್ನೂ ಹಲವಾರು. ಪೊಲೀಸರಿಗೆ ಅವನ ಮೇಲೆ ಯಾವಾಗಲೂ ಅನುಮಾನ ಇತ್ತು. ಆಜಾದ್ ಒಂದು ಬಾರಿಯೂ ಬ್ರಿಟಿಷ್ ಪೋಲಿಸರ ಕೈಗೆ ಸಿಗದೆ, ಲಕ್ನೋ, ಕಾನ್ಪುರ, ಝಾನ್ಸಿ, ದೆಹಲಿ, ಕಾಶಿ, ಲಾಹೋರ್ ಎಲ್ಲ ಕಡೆಯಲ್ಲಿ ಓಡಾಡಿದ. ಚಂದ್ರಶೇಖರ್ ಆಜಾದ್ ಎಷ್ಟು ಚಾಣಾಕ್ಷನಾಗಿದ್ದನೆಂದರೆ! ಒಮ್ಮೆ ಝಾನ್ಸಿಯಲ್ಲಿದ್ದ ಸಂದರ್ಭದಲ್ಲಿ ಒಂದು ಬಾರಿ ಪೊಲೀಸರು ಅನುಮಾನದಿಂದ ಅವನನ್ನು ಹಿಂಬಾಲಿಸಿದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆಜಾದ್, ಮುಂದೆ ಇದ್ದ ಇದ್ದಿಲು ವ್ಯಾಪಾರಿ ಅಜ್ಜಿಯ ಮನೆ ಒಳಗೆ ವೇಗವಾಗಿ ಪ್ರವೇಶಿಸಿ ಕೂಡಲೇ ತಾನು ಯಾರೆಂಬುದನ್ನು ಆ ಅಜ್ಜಿಗೆ ಸೂಕ್ಷ್ಮವಾಗಿ ತಿಳಿಸಿ ಒಳಗಡೆ ಹೋದ. ಪೊಲೀಸರು ಅಷ್ಟರಲ್ಲಿ ಆಜಾದ್ ಒಳಗಡೆ ಹೋಗಿದ್ದನ್ನು ಗಮನಿಸಿ, ಅಜ್ಜಿಗೆ ಕೇಳುವಷ್ಟರಲ್ಲಿ ಚಂದ್ರಶೇಖರ ಆಜಾದ ಒಬ್ಬ ಹಮಾಲನ ವೇಷದಲ್ಲಿ ಮೈಯೆಲ್ಲ ಇದ್ದಿಲಿನ ಮಸಿ ಬಡಿದುಕೊಂಡು ಬೆನ್ನುಮೇಲೆ ಇದ್ದಲಿ ಚೀಲ ಹೊತ್ತುಕೊಂಡು ಪೊಲೀಸರ ಮುಂದೆ ಸಾಮಾನ್ಯವಾಗಿ ಅವರನ್ನು ಮಾತಾನಾಡಿಸಿಯೇ ಹೋದ. ಅವರಿಗೆ ಕಿಂಚಿತ್ತೂ ಸಂಶಯ ಬರಲಿಲ್ಲ. ಒಳಗಡೆ ಹೋಗಿ ನೋಡಿದರೆ ಅಲ್ಲಿ ಯಾರೂ ಇರಲಿಲ್ಲ. ಆಗ ಅಜ್ಜಿ ನಕ್ಕು ಇದೀಗ ನಿಮ್ಮ ಕಣ್ಮುಂದೆ ಹೋದವನೆ ಅಜಾದ್ ಎನ್ನುತ್ತಾಳೆ. ಇದರಿಂದ ಬ್ರಿಟೀಷ್ ಪೊಲೀಸರು ಕಕ್ಕಾಬಿಕ್ಕಿಯಾದರು. ನೀವು ನಂಬುತ್ತಿರೊ ಬಿಡುತ್ತಿರೊ ಗೊತ್ತಿಲ್ಲ, ಆಜಾದ್ ಒಟ್ಟು 112 ಬಾರಿ ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ!!.
ರಾಮ್ಪ್ರಸಾದರನ್ನು ಗಲ್ಲಿಗೇರಿಸಿದ ನಂತರ ಆಜಾದನ ಹೊಣೆ ಹೆಚ್ಚಾಯಿತು. ಆಗ ಝಾನ್ಸಿಯಲ್ಲಿದ್ದ ಕ್ರಾಂತಿಕಾರಿಗಳೆಲ್ಲರೂ ಚದುರಿ ಹೋಗಿದ್ದರು. ಯಾರು ಎಲ್ಲೆಲ್ಲಿ ಇದ್ದಾರೋ ತಿಳಿಯದಂತಾಗಿತ್ತು. ಎಲ್ಲ ಕ್ರಾಂತಿಕಾರಿಗಳನ್ನು ಒಂದೆಡೆ ಮತ್ತೆ ಕಲೆ ಹಾಕುವ ಯೋಚನೆಯಲ್ಲಿ ಆಜಾದ್ ಇದ್ದ. ಆ ಸಂದರ್ಭದಲ್ಲೇ ಇತ್ತ ಭಗತ್ಸಿಂಗ್ಗೆ ಮದುವೆ ಏಪರ್ಾಡಗಿತ್ತು. ಅವನ ನಿಶ್ಚಿತಾರ್ಥದ ದಿನ ಕ್ರಾಂತಿಯ ಗುರು, ಶಚಿಂದ್ರನಾಥ್ ಸನ್ಯಲ್ ರವರ ಕರೆ ಬರುತ್ತದೆ, ಆ ಕರೆಗೆ ಒಗೊಟ್ಟ ಭಗತ್ಸಿಂಗ್ ಕೂಡಲೆ ಮನೆಬಿಟ್ಟು ದೇಶ ಸೇವೆಯಲ್ಲಿ ತೊಡಗಿದ. ಲಾಹೋರಿನಲ್ಲಿ ನೌಜವಾನ್ ಭಾರತ ಸಭಾ ಎಂಬ ಕ್ರಾಂತಿಕಾರಿಗಳ ಸಂಘ ಸ್ಥಾಪನೆಯಾಗಿತ್ತು. ಭಗತ್ಸಿಂಗ ಅದರ ಕಾರ್ಯದಶರ್ಿಯಾಗಿ ಕ್ರಾಂತಿಕಾರಿಗಳನ್ನು ಸಂಘಟಿಸಲಾರಂಭಿಸಿದ. ಅಷ್ಟರಲ್ಲಿ ಭಗತ್ಸಿಂಗ್ಗೆ ಚಂದ್ರಶೇಖರ ಆಜಾದ್ ಎಂಬ ಕ್ರಾಂತಿಕಾರಿ ಇರುವುದಾಗಿ ತಿಳಿಯುತ್ತದೆ. ಆಗ ಭಗತ್ಸಿಂಗ್ ದೆಹಲಿಗೆ ಹೋಗಿ ಆಜಾದ್ ನನ್ನು ಭೇಟಿಯಾಗುತ್ತಾನೆ. ಇಬ್ಬರೂ ಒಟ್ಟುಗೂಡಿ 1928 ರಂದು ದೆಹಲಿಯಲ್ಲಿ ಕ್ರಾಂತಿಕಾರಿಗಳ ಸಭೆ ಸೇರಿಸಿದರು. ಅಲ್ಲಿ ಹಿಂದೂಸ್ಥಾನ್ ರಿಪಬ್ಲಿಕನ್ ಆಮರ್ಿಗೆ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇನ್ ಎಂದು ಹೆಸರು ಬದಲಾಯಿಸಿ, ಅದರ ನೇತೃತ್ವವನ್ನು ಚಂದ್ರಶೇಖರ ಆಜಾದನಿಗೆ ವಹಿಸಿಕೊಳ್ಳುತ್ತಾನೆ.
ಅದೇ ವರ್ಷ 1928 ಫೆಬ್ರುವರಿಯಲ್ಲಿ ಆಂಗ್ಲ ಸರಕಾರ ಸೈಮನ್ ಎಂಬ ಅಧಿಕಾರಿಯ ನಾಯಕತ್ವದಲ್ಲಿ 'ಸೈಮನ್ ಕಮೀಷನ್' ಎಂಬ ಆಯೋಗವನ್ನು ರಚಿಸುತ್ತದೆ. ಇದರ ಉದ್ದೇಶ ಭಾರತೀಯರಿಗೆ ಎಷ್ಟು ಅಧಿಕಾರವನ್ನು ಕೊಡಬೆಕೆಂಬುದನ್ನು ತೀಮರ್ಾನಿಸುವದು. ಸೈಮನ್ ಕಮೀಷನ್ನು ವಿರೋಧಿಸಿ 'ನೌಜವಾನ್ ಭಾರತ ಸಭಾ' ಭಾರೀ ಪ್ರಮಾಣದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಏರ್ಪಡಿಸುತ್ತದೆ. ಪಂಜಾಬಿನ ಕೇಸರಿ ಲಾಲ ಲಜಪತರಾಯ್ರು ಇದರ ನಾಯಕರಾಗಿದ್ದರು. ಈ ಹೋರಾಟದಲ್ಲಿ ಚಂದ್ರಶೇಖರ ಆಜಾದ್ ಮತ್ತು ಭಗತ್ಸಿಂಗ್ ರ ಪ್ರಯತ್ನದಿಂದಾಗಿ ಸಾವಿರಾರು ಯುವಕರು ಸೆರುತ್ತಾರೆ. ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಂಗ್ಲ ಅಧಿಕಾರಿ ಸ್ಕಾಟ್, ಲಾಟಿ ಚಾರ್ಜ ಮಾಡುವಂತೆ ಪೊಲೀಸರಿಗೆ ಆದೇಶಿಸಿದ, ಪರಿಣಾಮವಾಗಿ ವೃದ್ಧ ಲಾಲ ಲಜಪತರಾಯರು ಲಾಟಿ ಏಟಿನ ಪೆಟ್ಟಿನಿಂದಾಗಿ ಬಲಿಯಾದರು. ಲಾಲ ಲಜಪತರಾಯ್ರ ಸಾವು ಕ್ರಾಂತಿಕಾರಿಗಳಿಗೆ ತುಂಬಲಾರದ ನಷ್ಟವಾಯಿತು. ಇದರ ಪ್ರತಿಕಾರವಾಗಿ ಆಜಾದ, ಭಗತ್ಸಿಂಗ್, ರಾಜಗುರು ಜಯಗೋಪಾಲ್ ಎಲ್ಲರೂ ಸೇರಿ ಸ್ಕಾಟ್ನ್ನು ಕೊಲ್ಲುವ ಯೋಜನೆ ರೂಪಿಸಿದ್ದರು, ದುದರ್ೈವವಶಾತ್ ಸ್ಕಾಟ್ ಬದಲಾಗಿ ಸ್ಯಾಂಡಸರ್್ನನ್ನು ಕೊಂದು ತಪ್ಪಿಸಿಕೊಂಡು ಪರಾರಿಯಾಗುತ್ತಾರೆ. ಮೂರು ವರ್ಷಗಳವರೆಗೂ ಬ್ರಿಟಿಷರಿಗೆ ಸ್ಯಾಂಡಸರ್್ನನ್ನು ಕೊಂದವರಾರೆಂಬುದು ಸ್ವಲ್ಪವು ಅನುಮಾನ ಬರಲಿಲ್ಲ. ಈ ಇಡೀ ಕಾಯರ್ಾಚರಣೆಯನ್ನು ಆಜಾದನೆ ರೂಪಿಸಿದ್ದ. ಅವನ ರೂಪರೇಷೆಗಳೆಂದೂ ಪೊಲೀಸರಿಗೆ ಗೊತ್ತಾಗಲಿಲ್ಲ.
1929 ಎಪ್ರೀಲ್ 8 ರಂದು ಭಗತ್ಸಿಂಗ್, ರಾಜಗುರು, ಸುಖದೇವ, ಬಟುಕೇಶ್ವರದತ್ತ ಎಲ್ಲರೂ ಸೇರಿ ತಾವು ತಯಾರಿಸಿದ ಬಾಂಬ್ಗಳನ್ನು ಬ್ರಿಟೀಷ ಪಾಲರ್ಿಮೆಂಟ್ ಮೇಲೆ ಎಸೆದರು. ಈ ಮೂವರನ್ನು ಬಂಧಿಸಿ, ಚಂದ್ರಶೇಖರ ಆಜಾದನ ಹುಡುಕಾಟ ನಡೆಸಿದರು. ಕೋಟರ್ಿನಲ್ಲಿ ತೀವ್ರವಾದ ವಿಚಾರಣೆಯಿಂದಾಗಿ 1931 ಮಾಚರ್್ 23 ರಂದು ಈ ಮೂವರನ್ನು ಗಲ್ಲಿಗೇರಿಸಲಾಯಿತು. ಈ ಮೂವರನ್ನು ಸೆರೆಮನೆಯಿಂದ ಬಿಡಿಸಲು ಚಂದ್ರಶೇಖರ ಆಜಾದ್ ಪಟ್ಟ ಹಲವಾರು ಪ್ರಯತ್ನಗಳೆಲ್ಲವು ಕೊನೆಗೆ ವಿಪಲವಾದವು. ಆಗ ಕ್ರಾಂತಿಯ ಸಂಘಟನಾ ಶಕ್ತಿ ಕುಗ್ಗಿ ಹೋಯಿತು. ಕೊನೆಗೆ ಉಳಿದಿದ್ದವರು ಚಂದ್ರಶೇಖರ ಆಜಾದ್ ಮತ್ತು ಯಶಪಾಲ ಮಾತ್ರ. ಕಾಕೋರಿ ದರೋಡೆ, ಸ್ಯಾಂಡಸರ್್ ಹತ್ಯೆ, ಶಾಸನಸಭೆಯಲ್ಲಿ ಬಾಂಬ್ ಎಸೆತ, ವೈಸರಾಯ್ ಕುಳಿತಿದ್ದ ರೈಲಿನಲ್ಲಿ ಬಾಂಬ್ ಸ್ಫೋಟ, ಇವು ಆಜಾದ್ ನಡೆಸಿದ ಮುಖ್ಯ ಕಾಯರ್ಾಚರಣೆಗಳಾಗಿದ್ದವು. ಇದರಿಂದಾಗಿ ಪೊಲೀಸರ ಹುಡುಕಾಟ ಜಾಸ್ತಿಯಾಯಿತು. ಕೊನೆಗೆ ಆಜಾದ್ನನ್ನು ಕಂಡ ಪೋಲಿಸರು ಶತಾಯಗತಾಯವಾಗಿ ಆತನನ್ನು ಹಿಡಿದೇ ತೀರಬೇಕೆಂಬ ಸುಸೂತ್ರ ಯೋಜನೆಯೊಂದಿಗೆ ಅವನ್ನು ಬೆನ್ನಟ್ಟಿ ಹೋದರು. ಆಜಾದ್ ತಪ್ಪಿಸಿಕೊಂಡು ಅಲಹಾಬಾದ್ ಪಾಕರ್ಿನೊಳಗೆ ನುಗ್ಗಿದ, ಪೊಲೀಸ್ ಅಧಿಕಾರಿಗಳು ಗುಂಡಿನ ಸುರಿಮಳೆ ಪ್ರಾರಂಭಿಸುತ್ತಾರೆ, ಆ ಪಾರ್ಕ ತುಂಬ ಹಲವಾರು ಗಂಟೆಗಳ ಕಾಲ ಯುದ್ದದ ಛಾಯೆ ಮೂಡುತ್ತದೆ, ದಾಳಿ ಪ್ರತಿದಾಳಿಯ ಕೊನೆಯಲ್ಲಿ, ಒಂದು ಮರದ ಹಿಂದೆ ಕುಳಿತಿದ್ದ ಆಜಾದ್ ಬ್ರಿಟಿಷರ ಕೈಗೆ ಸಿಗದೆ, ತನ್ನ ಬಂದೂಕಿನಲ್ಲಿದ್ದ ಐದು ಗುಂಡಿನಲ್ಲಿ ನಾಲ್ಕು ಗುಂಡುಗಳನ್ನು ಪೊಲೀಸರಿಗೆ ಹೊಡೆದು, ಕೊನೆಯ ಗುಂಡನ್ನು ತನ್ನ ತಲೆಗೆ ಹೊಡೆದುಕೊಂಡು ಪ್ರಾಣಬಿಟ್ಟ. ನಾನು ಸ್ವಾತಂತ್ರ್ಯನಾಗಿ ಹುಟ್ಟಿದ್ದೇನೆ. ಆದರೆ ಸ್ವಾತಂತ್ರ್ಯನಾಗಿಯೇ ಸಾಯುತ್ತೇನೆ, ಹೊರತು ನನ್ನ ಜೀವವಿರೊವರೆಗೂ ನಾನು ಬ್ರಿಟಿಷರ ಕೈಗೆ ಸಿಗುವುದಿಲ್ಲ ಎಂಬ ತನ್ನ ಮಾತಿನಂತೆ, ನಡೆದುಕೊಂಡ ಆಜಾದ್ 'ವಂದೇ ಮಾತರಂ'ೆ ಹೆಳುತ್ತ, ಭಾರತ ಮಾತೆಗೆ ತನ್ನ ಪ್ರಾಣ ಸಮಪರ್ಿಸಿದ.
ಕಾಲೇಜ್ ಕ್ಯಾಂಪಸ್ಗಳಲ್ಲಿ ಯುವಕ ಯುವತಿಯರೆಲ್ಲರೂ ಮೈಮೆಲೆಲ್ಲ ಟ್ಯಾಟೋ ಹಾಕಿಕೊಂಡು ಖುಷಿ ಪಡುವುದು ಮಾಡನರ್್ ಆಗಿಬಿಟ್ಟಿದೆ. ಯಾವುದೊ ಚಿತ್ರಗಳನ್ನು ಹಾಕಿಕೊಂಡು ಖುಷಿ ಪಡುವ ಬದಲು ಆಜಾದ್ ಭಗತ್ ಸಿಂಗ್, ನೇತಾಜಿ ಅವರಂತಹ ಸಿಂಹಗಳ ಭಾವಚಿತ್ರ ನಮ್ಮ ಕಣ್ಣುಂದೆ ಬರಬೇಕು. ಯುವಕರ ನರನಾಡಿಗಳಲ್ಲೆಲ್ಲ ಆಜಾದ್ನಂತ ದೇಶಭಕ್ತಿಯ ಆದರ್ಶ ತುಂಬಬೇಕಿದೆ.
- ಡಾ. ಜಗದೀಶ ಮಾನೆ, ಧಾರವಾಡ
9060656555