ಸಹದೇವಪ್ಪ ನಡಿಗೇರಗೆ ಸನ್ಮಾನ
ಲೋಕದರ್ಶನ ವರದಿ
ಮುಂಡಗೋಡ ೧೩: ಪಟ್ಟಣದ ಬಸವನಬೀದಿಯ ಶ್ರೀವೀರಭದ್ರೇಶ್ವರ-ಶ್ರೀಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಶಿರಸಿ ಜಿಲ್ಲಾ ಘಟಕದವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಂದೂರಿನ ಜಾನಪದ ಕಲಾವಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಸಹದೇವಪ್ಪ ನಡಿಗೇರ ಅವರನ್ನು ಗುರುವಾರ ಸಂಜೆ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಮಲ್ಲಿಕಾರ್ಜುನ ಕಾರ್ಕಳ, ಎಸ್.ಬಿ.ಹೂಗಾರ, ಸಂಗಪ್ಪ ಕೋಳೂರ, ಮಹದೇಶ್ವರ ಲಿಂಗದಾಳ, ಶ್ರೀಶೈಲ ಐನಾಪೂರ ಹಾಗೂ ಮುಂತಾದವರು ಉಪಸ್ಥಿತರಿದ್ದರು