ಬಳ್ಳಾರಿ

ಟಿಪ್ಪು ನಿಜಕನಸುಗಳು ವಿಶೇಷ ರಂಗಪ್ರಯೋಗ ಪ್ರದರ್ಶನ

ಟಿಪ್ಪು ನಿಜಕನಸುಗಳು ವಿಶೇಷ ರಂಗಪ್ರಯೋಗ ಪ್ರದರ್ಶನ

ಬಳ್ಳಾರಿ 08: ಟಿಪ್ಪು ನಿಜಕನಸುಗಳು ನಾಟಕ ಸತ್ಯ ಚರಿತ್ರೆಯ ಅನಾವರಣ. ಮೈಸೂರು ಸಂಸ್ಥಾನವನ್ನು ಆಕ್ರಮಿಸಿಕೊಂಡವನು ಪರ್ಷಿಯನ್ ಮೂಲದ ಟಿಪ್ಪು ಸುಲ್ತಾನನ ಬಗ್ಗೆ ಅತಿರಂಜಿತ ಸುಳ್ಳು ಚರಿತ್ರೆಯೇ ನಿರ್ಮಾಣಗೊಂಡಿದೆ. ಭಾರತೀಯ ಸಂಸ್ಕೃತಿಯ ಮೇಲೆ ನಡೆದಿರುವ ಮುಸ್ಲಿಂ ದೊರೆಗಳ ಆಕ್ರಮಣಕಾರಿ ಕೃತ್ಯಗಳನ್ನು ಅತ್ಯಂತ ಜಾಣತನದಿಂದ ಮುಚ್ಚಿಟ್ಟು ಬರೆದಿರುವ ಇತಿಹಾಸಕಾರರ ಚರಿತ್ರೆಯನ್ನೇ ಪಠ್ಯಪುಸ್ತಕವನ್ನಾಗಿಸಿ ಅದನ್ನೇ ಓದಿಸಿಕೊಂಡು ಬರಲಾಗಿದೆ. ಈ ಸುಳ್ಳಿನಲ್ಲಿ ಟಿಪ್ಪು ಸುಲ್ತಾನ ಸೇರುತ್ತಾನೆ. 

ಟಿಪ್ಪು ಸುಲ್ತಾನನನ್ನು ಮಹಾ ಶೂರ, ಧೀರ, ದೇಶಪ್ರೇಮಿ, ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರ, ವಿಶ್ವಧರ್ಮ ಪ್ರೇಮಿ, ಪ್ರಜಾಪ್ರೇಮಿ: ಮುಸ್ಲಿಂ ಆಗಿದ್ದರೂ ಹಿಂದೂ ದೇವಾಲಯ, ಮಠಗಳಿಗೆ ಉದಾರವಾಗಿ ದಾನ ದತ್ತಿ ನೀಡಿದ ಜಾತ್ಯತೀತವಾದಿ, ಹೀಗೆಲ್ಲ ಹೊಗಳಿ ಅಟ್ಟಕ್ಕೇರಿಸಲಾಗಿದೆ. ಈ ಅಟ್ಟದ ಮೇಲಿನ ಟಿಪ್ಪುವಿನ ಹೆಗಲ ಮೇಲೆ ಓಟ್ಬ್ಯಾಂಕ್ ನಿಮರ್ಾತರು, ಡೋಂಗಿ ಬುದ್ಧಿಜೀವಿಗಳು ಕೋಟೆಯನ್ನೇ ನಿರ್ಮಾಣ ಮಾಡಿಕೊಂಡಿದ್ದಾರೆ. ಅತ್ಯಂತ ಅಘಾತಕಾರಿ ವಿಷಯವೆಂದರೆ ಕನ್ನಡವನ್ನು ಕೊಂದ ಒಬ್ಬ ಮುಸ್ಲಿಂ ಸುಲ್ತಾನನನ್ನು `ಕನ್ನಡ ಪ್ರೇಮಿ' ಎಂದು ಬಣ್ಣಿಸಿರುವುದು. ಈತನ ಕರಾಳ ಮುಖದ ಚರಿತ್ರೆಯನ್ನು ಬಚ್ಚಿಡಲಾಗಿದೆ. ಇಂತಹ ಅಪಾಯಕಾರಿ ಬೌದ್ಧಿಕ ರಿವಾಜುಗಳನ್ನು ಬದಲಿಸಿ, ಡೋಂಗಿ ವಾದವನ್ನು ತಿರಸ್ಕರಿಸಿ ಮತ್ತು ನಿಷ್ಕ್ರಿಯಗೊಳಿಸಿ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ ಬಚ್ಚಿಡಲಾದ ಅನೇಕ ಸತ್ಯಗಳನ್ನು ಹೊರಚೆಲ್ಲಲು ಹದಿನೈದು ದೃಶ್ಯಗಳ `ಟಿಪ್ಪು ನಿಜಕನಸುಗಳು' ನಾಟಕವನ್ನು ರಚಿಸಿ, ಪ್ರಯೋಗಕ್ಕೆ ಸಿದ್ಧಪಡಿಸಲಾಗಿದೆ. ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಈ ನಾಟಕವನ್ನು ರಚಿಸಿ ನಿದೇಶಿಸಿದ್ದಾರೆ. ಖ್ಯಾತ ರಂಗವಿನ್ಯಾಸಕ ಶಶಿಧರ್ ಅಡಪ, ವಸ್ತ್ರ-ಪರಿಕರ ವಿನ್ಯಾಸಕ ಪ್ರಮೋದ್ ಶಿಗ್ಗಾಂವ್, ಸಂಗೀತಕ್ಕೆ ಧನಂಜಯ ಆರ್.ಸಿ. ಮತ್ತು ಸುಬ್ರಹ್ಮಣ್ಯ ಮೈಸೂರು, ಬೆಳಕಿನ ವಿನ್ಯಾಸ ಮಹೇಶ್ ಕಲ್ಲತ್ತಿ ಕೈ ಜೋಡಿಸಿದ್ದಾರೆ.

ಈ ವಿಶೇಷ ರಂಗಪ್ರಯೋಗ `ಟಿಪ್ಪು ನಿಜಕನಸುಗಳು' ನಾಟಕವನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ, ಪ್ರದರ್ಶನಗೊಳ್ಳಬೇಕೆಂಬ ಯೋಜನೆಯನ್ನು ರಂಗಾಯಣ ರೂಪಿಸಿದೆ. ನಮ್ಮ ರಂಗಪಯಣದ ಮೊದಲ ಹೆಜ್ಜೆ ಬೆಂಗಳೂರಿನಿಂದ ಆರಂಭಗೊಂಡಿದೆ. ಈ ಪಯಣದಲ್ಲಿ ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ 2023 ಫೆ. 14 ರಂದು ಸಂಜೆ 6.00ಕ್ಕೆ ಟಿಪ್ಪು ನಿಜಕನಸುಗಳು ವಿಶೇಷ ರಂಗಪ್ರಯೋಗ ಪ್ರದರ್ಶನಗೊಳ್ಳಲಿದೆ.

ಈ ನಾಟಕ ಮೂರುವರೆ ತಾಸುಗಳ ಅವಧಿಯದ್ದಾಗಿದ್ದು 10 ನಿಮಿಷಗಳ ಮಧ್ಯಂತರದ ವಿರಾಮವಿದೆ. ಈ ಪ್ರದರ್ಶನಕ್ಕೆ ರೂ.100/- ಬೆಲೆಯ ಟಿಕೆಟ್ಗಳನ್ನು ಇಡಲಾಗಿದೆ. ಟಿಕೆಟ್ಗಳಿಗಾಗಿ ಶಿವೇಶ್ವರಗೌಡ 9980354301 ಮತ್ತು ಅಡವಿಸ್ವಾಮಿ 9916009426 ಇವರನ್ನು ಸಂಪರ್ಕಿ ಸ ಬಹುದಾಗಿದೆ. ರಂಗಾಯಣದ ವೆಬ್ಸೈಟ್ ತಿತಿತಿ.ಡಿಚಿಟಿರಚಿಥಿಚಿಟಿಚಿ.ಠಡಿರನಲ್ಲಿ ಆನ್ಲೈನ್ ಮೂಲಕ ಟಿಕೆಟ್ ಪಡೆಯಬಹುದಾಗಿದೆ. ಟಿಕೆಟ್ ಖರೀದಿಸಿ ನಾಟಕ ನೋಡಿ. ಇದು ನಮ್ಮ ವಿನಮ್ರ ಪ್ರಾರ್ಥನೆ.

ಇಂತಹದೊಂದು ವಿಶೇಷ ರಂಗಪ್ರಯೋಗದ ಸತ್ಯದ ಅನಾವರಣಕ್ಕೆ ಎಲ್ಲಾ ರಂಗಾಸಕ್ತರು, ರಂಗಕರ್ಮಿಗಳು, ಕಲಾವಿದರು, ಸಾಹಿತಿಗಳು ಮಾಧ್ಯಮದ ಸ್ನೇಹಿತರು ಸಾಕ್ಷಿಗಳಾಗಬೇಕೆಂಬುದು ಮೈಸೂರು ರಂಗಾಯಣದ ಬಯಕೆ. ರಂಗಭೂಮಿಯ ಈ ಕ್ರಿಯಾತ್ಮಕ ಕಾಯಕದ ಸಂಭ್ರಮಕ್ಕೆ ಎಲ್ಲಾ ರಂಗಾಸಕ್ತರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ 

ಸುದ್ದಿ ಓದಿ