ಕುಷ್ಟಗಿ

ಶರಣರ ಹೂಗಾರ ಮಾದಯ್ಯ ಕೊಡುಗೆಗಳ ಅಧ್ಯಯನದ ಅಗತ್ಯವಿದೆ: ಶಾಸಕ ಅಮರೇಗೌಡ ಬಯ್ಯಾಪೂರ

ಶರಣರ ಹೂಗಾರ ಮಾದಯ್ಯ ಕೊಡುಗೆಗಳ ಅಧ್ಯಯನದ ಅಗತ್ಯವಿದೆ: ಶಾಸಕ ಅಮರೇಗೌಡ ಬಯ್ಯಾಪೂರ

ಕುಷ್ಟಗಿ 08: 12ನೇ ಶತಮಾನದ ಶರಣ ಹೂಗಾರ ಮಾದಯ್ಯನವರು ಇತಿಹಾಸ ಹಾಗೂ ಸಾಹಿತ್ಯ, ಜೀವನ ಚರಿತ್ರೆ ಸಮಾಜಕ್ಕೆ ನೀಡಿದ ಕೊಡುಗೆಗಳ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.  

ಶನಿವಾರ ಬೆಳಿಗ್ಗೆ  ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಬೆಂಗಳೂರು, ತಾಲೂಕ ಹೂಗಾರ ಸಮಾಜ, (ಹೂಗಾರ, ಜೀರ, ಪೂಜಾರ, ಗುರುವ ಸಮಾಜದ ಒಕ್ಕೂಟ) ವತಿಯಿಂದ ಏರಿ​‍್ಡಸಿದ್ದ ಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ-2022 ಹಾಗೂ 101ಕುಂಭ ಮೇಳ ಸಮಾರಂಭ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಅವರು ಹೂಗಾರ ಸಮಾಜದವರು ಹಲವಾರು ಸಂಘಟನೆಗಳ ಮೂಲಕ ಹೂಗಾರ ಮಾದಯ್ಯನವರು ಸಾಧನೆಗಳನ್ನು ಗುರುತಿಸುವ ಕಾರ್ಯ ಮಾಡಬೇಕಿದೆ.  

ಶರಣ ಮಾದಯ್ಯನವರು ಕಾಯಕವೇ ಕೈಲಾಸ ಕಾಯಕವೇ ಮುಖ್ಯ ಎಂದು ನಂಬಿ ಜೀವನ ನಡೆಸಿ ಜಗತ್ತಿಗೆ ಮಾದರಿಯಾಗಿದ್ದಾರೆ ಪ್ರತಿಯೊಬ್ಬರು ಕಾಯಕದಲ್ಲಿ ತೊಡಗಬೇಕು ಎಂದು ಹೇಳಿದರು.  

ಹೂಗಾರ ಸಮಾಜದಲ್ಲಿ ಅನೇಕ ಪ್ರತಿಭಾವಂತ ವ್ಯಕ್ತಿಗಳು ಇದ್ದಾರೆ ಶರಣ ಹೂಗಾರ ಮಾದಯ್ಯನವರ ಇತಿಹಾಸವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಶೋಧನೆ ಮಾಡಿ ಅವರ ಇತಿಹಾಸವನ್ನು ಜಗತ್ ಪ್ರಸಿದ್ಧ ಪಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.  

ಮುಂದಿನ ದಿನಮಾನಗಳಲ್ಲಿ ಸರಕಾರ ಹೂಗಾರ ಸಮಾಜದ ನಿಗಮ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಯಲಬುರ್ಗಾ ತಾಲೂಕಿನ  ಸಿರಗುಂಪಿ ಗ್ರಾಮದ ಕರಿಬಸವೇಶ್ವರ ದೇವಸ್ಥಾನದ ಮಾತೋಶ್ರೀ ನೀಲಮ್ಮ ತಾಯಿ ಹೂಗಾರ, ಮೇಣದಾಳ ಗ್ರಾಮದ ದೇವಿ ಉಪಾಸಕ ಪೂಜ್ಯ ಭೀಮಜ್ಜ ಹೂಗಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದರು.   

ಚಳಗೇರಿ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಯಪ್ಪ ಹೂಗಾರ ವಿಶೇಷವಾಗಿ ಉಪನ್ಯಾಸ ನೀಡಿದರು. ತಾಲೂಕ ಹೂಗಾರ ಸಮಾಜ ಅಧ್ಯಕ್ಷ ಹನಮಂತಪ್ಪ ನಾಗಪ್ಪ ಹೂಗಾರ ಕಂದಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಕೆ.ಪಿ.ಸಿ.ಸಿ ಉಪಾಧ್ಯಕ್ಷ ಹಸನಸಾಬ ದೋಟಿಹಾಳ, ರಾಷ್ಟ್ರೀಯ ಹಣ್ಣು ಬೆಳೆಗಾರರ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಜಿಲ್ಲಾಧ್ಯಕ್ಷ ಹೂಗಾರ ಸಮಾಜ ಗವಿಸಿದ್ದಪ್ಪ ಹೂಗಾರ, ತಾಲೂಕ ಭಾಜಪ ಅಧ್ಯಕ್ಷ ಬಸವರಾಜ ಹಳ್ಳೂರ ಮಾತನಾಡಿದರು.  

ಈ ಸಂದರ್ಭದಲ್ಲಿ ಯಲಬುರ್ಗಾ ಹೂಗಾರ ಸಮಾಜದ ಅಧ್ಯಕ್ಷ ವಿರುಪಾಕ್ಷಪ್ಪ ಹೂಗಾರ,  ಶಂಕರ್  ಹೂಗಾರ, ಗಂಗಾವತಿ ಹೂಗಾರ ಸಮಾಜದ ಅಧ್ಯಕ್ಷ ಕಂಠೇಪ್ಪ ಹೂಗಾರ, ಕನಕಗಿರಿಯ ಹೂಗಾರ ಸಮಾಜ ಅಧ್ಯಕ್ಷ ವೀರಭದ್ರ​‍್ಪ ಹೂಗಾರ, ವಿಜಯಪುರ ಕಲಾವಿದ ಹಾಗೂ ಜ್ಯೂನಿಯರ್ ರವಿಚಂದ್ರ ಆನಂದ ಹೂಗಾರ, ಗಜೇಂದ್ರಗಡ ಹೂಗಾರ ಸಮಾಜ ಅಧ್ಯಕ್ಷ ಶಶಿಧರ ಹೂಗಾರ, ಹುಲಕೋಟಿಯ ಬಸವರಾಜ ಹೂಗಾರ,  ಹುನಗುಂದ ಹೂಗಾರ ಸಮಾಜದ ಮಾಜಿ ಅಧ್ಯಕ್ಷ ಸಕ್ರ​‍್ಪ ಚನ್ನಪ್ಪ ಹೂಗಾರ,  ವಣಗೇರಿಯ ಸಣ್ಣಬಸಣ್ಣ ಹೂಗಾರ, ಸಿಂಧನೂರ ಹೂಗಾರ ಸಮಾಜದ ಅಧ್ಯಕ್ಷ ಭೀಮಣ್ಣ ಹೂಗಾರ, ಬಾಗಲಕೋಟ ಹೂಗಾರ ಜಿಲ್ಲಾಧ್ಯಕ್ಷ ಸುಭಾಷ ಹೂಗಾರ, ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಶರಣ ಹೂಗಾರ, ಕಂದಕೂರಿನ ಗುತ್ತಿಗೆದಾರ ಹಾಲಪ್ಪ ಹೂಗಾರ, ಚಂದಪ್ಪ ನಾಗಪ್ಪ ಹೂಗಾರ, ಮಹಾದೇವಪ್ಪ ಹೂಗಾರ, ಕರಿಯಪ್ಪ ಹೂಗಾರ, ಕಳಪ್ಪ ಹೂಗಾರ ಸೇರಿದಂತೆ ಹೂಗಾರ ಸಮಾಜದ ಮುಖಂಡರು ಭಾಗವಹಿಸಿದ್ದರು.  

ಮಾದಯ್ಯನವರ ಭಾವಚಿತ್ರವನ್ನು ಸಕಲ ಮಂಗಲವ್ಯಾದಗಳೊಂದಿಗೆ ಕುಂಭ ಮೆರವಣಿಗೆಯು ಮಲ್ಲಿಕಾರ್ಜುನ ದೇವಸ್ಥಾನದಿಂದ ಆರಂಭಿಸಿ  ಆಂಜನೇಯ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಕನಕವೃತ್ತ, ಬಸವೇಶ್ವರ ವೃತ್ತ, ಮಾರುತಿ ವೃತ್ತ, ಮಲ್ಲಯ್ಯವೃತ್ತ ಮಾರ್ಗವಾಗಿ ಬುತ್ತಿಬಸವೇಶ್ವರ ದೇವಸ್ಥಾನ ತಲುಪಿತು. ಜೂಲಕಟ್ಟಿ ಎಚ್‌.ಪಿ.ಎಸ್ ಮುಖ್ಯಗುರು ಶಿವಾನಂದ ಎಸ್‌. ಹೂಗಾರ ಸ್ವಾಗತಿಸಿದರು. ಶಿಕ್ಷಕ ತಿಪಣ್ಣ ತಾವರಗೇರಿ ನಿರೂಪಿಸಿದರು. 


ಸುದ್ದಿ ಓದಿ