ಬಳ್ಳಾರಿ

ನಗರದಲ್ಲಿ ಪುನೀತ್ ಪುತ್ಥಳಿ ಸ್ಥಾಪನೆ : ಸಚಿವ ಶ್ರೀರಾಮುಲು

ನಗರದಲ್ಲಿ ಪುನೀತ್ ಪುತ್ಥಳಿ ಸ್ಥಾಪನೆ : ಸಚಿವ  ಶ್ರೀರಾಮುಲು

ಲೋಕದರ್ಶನ ವರದಿ 

ಬಳ್ಳಾರಿ 28: ಭಾರತ ರತ್ನ ಲತಾ ಮಂಗೇಶ್ಕರ್, ಡಾ ಬಾಲಸುಬ್ರಹ್ಮಣ್ಯಂ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಇವರ ತಮ್ಮ ತಮ್ಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಮರೆಯಲು ಅಸಾಧ್ಯ ಅದರಲ್ಲೂ ಪುನೀತ್ ರವರ ನಟನೆಯ ಜೊತೆಗೆ ಅವರು ಮಾಡಿದ ಸಮಾಜ ಸೇವೆಯಿಂದ ಜನಮಾನಸದಲ್ಲಿ ಉಳಿದು ಹೋಗಿದ್ದಾರೆ. ಜನರು ಸ್ವಾರ್ಥದಿಂದ ಜೀವನ ಮಾಡುವುದು ಬಿಟ್ಟು ಸಮಾಜ ಸೇವೆಯಲ್ಲಿ ಸಹತೊಡಗಿಕೊಳ್ಳಬೇಕು, ಹಾಗೆ ಮುಂದಿನ ದಿನಗಳಲ್ಲಿ ಬಳ್ಳಾರಿ ನಗರದ ಪ್ರಮುಖ ಸ್ಥಳದಲ್ಲಿ ಡಾ.ಪುನೀತ್  ರಾಜ್‌ಕುಮಾರ್ ರವರ ಪುತ್ಥಳಿಯನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರಿಗೆ ಸಚಿವ ಬಿ ಶ್ರೀರಾಮುಲು ರವರು ಹೇಳಿದರು.  


ಅವರು ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಅಬ್ಧುಲ್ ಅಜೀಜ್ (ಗುಜರಿ) ಮತ್ತು ಅಬ್ಧುಲ್ ಮಾಜೀದ್ ಇವರು ಹಮ್ಮಿಕೊಂಡಿದ್ದ ಸಂಗೀತ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ್‌ರೆಡ್ಡಿ, ನಗರ ಶಾಸಕ ಜಿ ಸೋಮಶೆಖರ್‌ರೆಡ್ಡಿ, ಕೆ ಶಾಂತಮ್ಮ, ಸಣ್ಣ ಪಕ್ಕೀರ​‍್ಪ, ಬುಡಾ ಅಧ್ಯಕ್ಷರ ಪಾಲಣ್ಣ, ಮಾಜಿ ಪಾಲಿಕೆ ಸದಸ್ಯ ದಿವಾಕರ್, ಹಾಲಿ ಸದಸ್ಯರಾದ ಮೋತ್ಕರ್ ಸೀನಾ, ಗುಡಿಗಂಟೆ ಹನುಮಂತ, ಬಿ ಹನುಮಂತ, ಕೋನಂಕಿ ತಿಲಕ್ ಮತ್ತು ಐನಾಥ್‌ರೆಡ್ಡಿ ಸೇರಿದಂತೆ ಹಲವಾರು ಕನ್ನಡಾಭಿಮಾನಿಗಳು ಮತ್ತು ಇದ್ದರು.  

ಗಾಯಕಿ ಶಮಿತಾ ಮಲ್ನಾಡು ಸೇರಿದಂತೆ ಹಲವಾರು ಖ್ಯಾತ ಗಾಯಕರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 


ಸುದ್ದಿ ಓದಿ