ಅತಿಥಿ ಶಿಕ್ಷಕರ ರಾಜ್ಯವ್ಯಾಪಿ ಪ್ರತಿಭಟನೆ
ಬಳ್ಳಾರಿ 08: ರಾಜ್ಯ ಸಕರ್ಾರ ಈ ಕೂಡಲೇ ಎಲ್ಲಾ ಅತಿಥಿ ಶಿಕ್ಷಕರಿಗೆ ಕೋವಿಡ್-19 ವಿಶೇಷ ಆಥರ್ಿಕ ಪ್ಯಾಕೇಜನ್ನು ಘೋಷಿಸಬೇಕು. ಮುಂಬರುವ ಎಲ್ಲಾ ನೇಮಕಾತಿಗಳಲ್ಲಿ ಅತಿಥಿ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಿ, ಅತಿಥಿ ಶಿಕ್ಷಕರನ್ನು ನಿದರ್ಿಷ್ಟ ಸಂಖ್ಯೆಯಲ್ಲಿ ಈ ಖಾಯಂ ಹುದ್ದೇಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅತಿಥಿ ಶಿಕ್ಷಕರಿಗೆ ನಿದರ್ಿಷ್ಟ ಕೋಟಾ ಕಾದಿರಿಸುವ/ವಿಶೇಷ ಅಂಕ (ವೇಟೇಜ್) ನೀಡುವ ಹಾಗೂ ವಯೋಮಿತಿ ಏರಿಸುವ ಹಾಗೂ ಇತ್ಯಾದಿ ಪ್ರಜಾತಾಂತ್ರಿಕ ಪದ್ಧತಿಗಳನ್ನು ಜಾರಿಗೊಳಿಸುವ ನಿಧರ್ಾರವನ್ನು ತಕ್ಷಣವೇ ಸಚಿವ ಸಂಪುಟ ತೆಗೆದುಕೊಳ್ಳಬೇಕು. ಈಗಾಗಲೇ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಕೆಲಸದಿಂದ ತೆಗೆದು ಹಾಕದಂತೆ ಹಾಗೂ ಅವರೆಲ್ಲರಿಗೂ ಉದ್ಯೋಗ ಭದ್ರತೆ ನೀಡುವಂತಹ ಸೂಕ್ತ ಸಕರ್ಾರಿ ಆದೇಶವನ್ನು ಈ ಕೂಡಲೇ ಹೊರಡಿಸಿ. ಈ ಕೂಡಲೇ ಸಕರ್ಾರ ಅತಿಥಿ ಶಿಕ್ಷಕರ ಸಂಬಳವನ್ನು ಹೆಚ್ಚಿಸಬೇಕು, ವರ್ಷದ 12 ತಿಂಗಳು ಸಂಬಳ ನೀಡಬೇಕು ಮತ್ತು ಇದು ಪ್ರತಿ ತಿಂಗಳ ಮೊದಲ ವಾರದಲ್ಲಿ ಅತಿಥಿ ಶಿಕ್ಷಕರಿಗೆ ತಲುಪಬೇಕು. ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣ ಪತ್ರವನ್ನು ನೀಡಬೇಕು ಮತ್ತು ಗುರುತಿನ ಚೀಟಿಯನ್ನು ಕೊಡಬೇಕು. ಎಲ್ಲಾ ಅತಿಥಿ ಶಿಕ್ಷಕರಿಗೆ ಪಿ.ಎಫ್ ಮತ್ತು ಇ.ಎಸ್.ಐ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಶಿಕ್ಷಕರನ್ನು ಖಾಯಂಗೊಳಿಸುವುದರಿಂದ ಸಕರ್ಾರಕ್ಕೆ ತಗಲುವ ಖಚರ್ಿನಿಂದ ತಪ್ಪಿಸಿಕೊಳ್ಳಲು ನಮ್ಮನ್ನು ಅರೆಕಾಲಿಕ / ಅತಿಥಿ' ಶಿಕ್ಷಕಕರು ಎಂದು ಕರೆಯುವ ಅಸಹ್ಯಕರ ಪದ್ಧತಿ ಚಾಲ್ತಿಯಲ್ಲಿರುವುದು ದುರಂತ. ಹೀಗಾಗಿ ನಮಗೆ ಸಂಬಳಕ್ಕೆ ಬದಲಿಗೆ ಕೇವಲ ಗೌರವಧನ' ನೀಡಲಾಗುತ್ತಿದೆ. ಸಕರ್ಾರಗಳ ಈ ನೀತಿಯಿಂದಾಗಿ "ಸಮಾನ ಕೆಲಸಕ್ಕೆ ಸಮಾನ ವೇತನ" ಪಡೆಯುವ ನಮ್ಮ ಪ್ರಜಾತಾಂತ್ರಿಕ ಹಾಗೂ ಸಂವಿಧಾನದ ಹಕ್ಕಿನ ಹರಣವಾಗಿದೆ. ಕಾನೂನನ್ನು ಪಾಲಿಸಿ, ಸಂವಿಧಾನವನ್ನು ಎತ್ತಿಹಿಡಿಯಬೇಕಾದ ಸಕರ್ಾರಗಳೇ ಈ ನೆಲದ ಕಾನೂನನ್ನು ಗಾಳಿಗೆ ತೂರಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂಧು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಶೀಕ್ಷಣ ಉಳಿಸಿ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ವ್ಹಿ.ಎನ್.ರಾಜಶೇಖರ, ರಾಜೇಶ ಭಟ್, ವೀರಭದ್ರಪ್ಪಾ ಆರ್ ಕೆ. ಪ್ರಮೋದ್, ಚಿತ್ರಲೇಕ, ಹಣಮಂತ, ಜಾವೀದ,ಮಹಾದೇವ,ಗಣಪತಿ,ಗಂಗಾಧರ, ರುದ್ರಗೌಡ,ಯಲ್ಲಮ್ಮಾ, ಚಂದ್ರಿಕಾ, ಜಯಮಳಾ,ವರಣ್ಣ, ಪ್ರಭಾಕರ, ಕೃಷ್ಣಾನಾರಾಯನ, ನಿಂಗಪ್ಪಾ, ಭೂದೇವಿ, ನಾಗರತ್ನಾ, ಸಂಗೀತಾ, ಶ್ರೀದೇವಿ, ಶೃತಿ ಮುತಾದವರು ಭಾಗವಹಿಸಿದ್ದರು