ಬಳ್ಳಾರಿ

ಇಂದಿನಿಂದ ಮೂರು ದಿನ ಹೋಡೆಲ್ ರಾಯಲ್ ಪೋರ್ಟನಲ್ಲಿ ವಿಶೇಷ ಆಭರಣ ಪ್ರದರ್ಶನ

ಇಂದಿನಿಂದ ಮೂರು ದಿನ ಹೋಡೆಲ್ ರಾಯಲ್ ಪೋರ್ಟನಲ್ಲಿ ವಿಶೇಷ ಆಭರಣ ಪ್ರದರ್ಶನ

ಬಳ್ಳಾರಿ 14: ನಗರದಲ್ಲಿ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್‌ ಮೂರು ದಿನಗಳ ವಿಶೇಷ ಆಭರಣ ಮಾರಾಟವನ್ನು ಪ್ರಸ್ತುಪಡಿಸುತ್ತಿದೆ. ಗ್ರಾಹಕರಿಗಾಗಿಯೇ ವಿಶೇಷವಾಗಿ ಸಂಗ್ರಹಿಸಲಾದ ಅತ್ಯಂತ ಆಕರ್ಷಕ ಆಭರಣಗಳನ್ನು ಇಂದಿನಿಂದ ಜ.16, 2023 ರವರೆಗೆ ಹೋಟೆಲ್ ರಾಯಲ್ ಫೋರ್ಟ್‌ನಲ್ಲಿ( ಹಿಲ್ಡ್ರ​‍್) ಬೆಳಿಗ್ಗೆ 10:30 ರಿಂದ ರಾತ್ರಿ 8:00 ರವರೆಗೆ  ಪ್ರದರ್ಶಿಸಲಿದೆ. ಅತ್ಯುತ್ತಮವಾದ ಕರಕುಶಲತೆಯೊಂದಿಗೆ ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹದ ಶುದ್ಧ ಚಿನ್ನ ಮತ್ತು ರತ್ನಗಳು ವಿಶಿಷ್ಠ ಶ್ರೇಣಿಯಲ್ಲಿ ಲಭ್ಯವಿದೆ. ಮಹಾನಗರ ಪಾಲಿಕೆಯ ಮಹಾಪೌರರಾದ ರಾಜೇಶ್ವರಿ ಅವರು ಶನಿವಾರ ಪ್ರದರ್ಶನ ಉದ್ಘಾಟಿಸಿದರು.  

ನಮ್ಮ ಹೊಸ ಶ್ರೇಣಿಯ ಮಕರ ಸಂಕ್ರಾಂತಿ ಸಂಗ್ರಹದೊಂದಿಗೆ ವ್ಯಕ್ತಿತ್ವಕ್ಕಾಗಿ ಅಪರೂಪದ ಆಭರಣಗಳನ್ನು ಪ್ರಸ್ತುತಪಡಿಸುತ್ತಿದೆ. ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಶ್ರೇಷ್ಠವಾಗಿದ್ದು ಕಲ್ಪನೆ, ಸೃಜನಶೀಲತೆಯೊಂದಿಗೆ ಸಂಪೂರ್ಣ ಶ್ರೇಣಿಯ ಆಭರಣ ಸಂಗ್ರಹಗಳಾಗಿವೆ.ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ನ ಆಭರಣ ಸಂಗ್ರಹಗಳು ಸೊಬಗು ಮತ್ತು ಆಕರ್ಷಕ ಶೈಲಿಯ ಜೊತೆಗೆ ಸೂಕ್ಷ್ಮವಾದ ವಜ್ರಗಳೊಂದಿಗೆ, ವೈಡೂರ್ಯ, ಹವಳ, ಮುತ್ತುಗಳು, ಮಾಣಿಕ್ಯಗಳಂತಹ ಅಪರೂಪದ ರತ್ನಗಳೊಂದಿಗೆ ಆಕರ್ಷಕ ವಿನ್ಯಾಸಗಳೊಂದಿಗೆ ಕಾಣಿಸಿಕೊಂಡಿವೆ. ಈ ಸಂಗ್ರಹಣೆಯು ನಿಮ್ಮ ವ್ಯಕ್ತಿತ್ವದತ್ತ ಗಮನ ಸೆಳೆಯಲು ಮತ್ತು ನಿಮ್ಮ ಉಡುಪಿಗೆ ಸರಿ ಹೊಂದುವ ಆಭರಣಗಳನ್ನು ನೀಡುತ್ತದೆ.ಮಕರ ಸಂಕ್ರಾಂತಿ ಸಂಗ್ರಹ, ಮದುವೆ ಸಂಗ್ರಹ, ಪಾರಂಪರಿಕ ಸಂಗ್ರಹ,  ಪಾರಂಪರಿಕ ಸಂಗ್ರಹವು ದಕ್ಷಿಣ ಭಾರತ ಮತ್ತು ಡೆಕ್ಕನ್ನ ಕುತ್ತಿಗೆ ಹಾರವನ್ನು(ಕುಂಡಲವೇಲೈ) ಒಳಗೊಂಡಿದೆ. ಕುಂಡಲವೇಲೈ ಅನ್ನು ಕೊಬೊಕಾನ್ ಮಾಣಿಕ್ಯಗಳಿಂದ ಮಾತ್ರ ವಿನ್ಯಾಸಗೊಳಿಸಲಾಗಿದೆ. ಇದು ಮಾಣಿಕ್ಯಗಳಿಗೆ ಉಬ್ಬು ಮತ್ತು ತಗ್ಗಿನ ಅನುಭವ ನೀಡುತ್ತದೆ. ನಮ್ಮ ಬ್ರ್ಯಂಡ್ನ ಈ ವಿನ್ಯಾಸದ ಆಭರಣ ಈವೆಂಟ್‌-ಸ್ಟಾಪರ್ ಆಗಿದೆ. ಸಾಂಪ್ರದಾಯಿಕ ವಿನ್ಯಾಸಗಳು ಕಲ್ಪನೆಗೆ ಮಿತಿಯಿಲ್ಲದಂತೆ ಸಮಕಾಲೀನಕ್ಕೆ ತಕ್ಕಂತೆ ಸಿದ್ಧಗೊಂಡಿವೆ.  ಅಪರೂಪದ ಸುಗಂಧಗಳು.  ಬೆಂಗಳೂರಿನ 150-ವರ್ಷದ ಪರಂಪರೆಯ ಐಷಾರಾಮಿ ಆಭರಣ ಬ್ರ್ಯಂಡ್ ಸಿ. ಕೃಷ್ಣಯ್ಯ ಚೆಟ್ಟಿ ಪ್ರಸ್ತುಪಡಿಸಿರುವ ಭಾರತದ ಏಕೈಕ ಪ್ರೀಮಿಯಂ, ಐಷಾರಾಮಿ ಸುಗಂಧ ಬ್ರಾಂಡ್ ಇದಾಗಿದೆ.  ಆಡಮಾಸ್, ಓರಮ್, ಬೆರಿಲ್, ಕೊರುಂಡಮ್ ಮತ್ತು ಪ್ಲಾಟಿನಮ್  5 ಸೊಗಸಾದ ಅವತರಣಿಕೆಗಳಲ್ಲಿ ಲಭ್ಯವಿದೆ. 

ಸಿ.ಕೃಷ್ಣಯ್ಯ ಚೆಟ್ಟಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ  ಚೈತನ್ಯ ವಿ ಕೋಥಾ,  ಐಷಾರಾಮಿ ಸುಗಂಧಗಳಂತಹ ಬ್ರ್ಯಂಡ್ ವಿಸ್ತರಣೆಯನ್ನು ನಮ್ಮ ಗ್ರಾಹಕರಿಗೆ ಅಪರೂಪದ ಮತ್ತು ಉತ್ತಮವಾದ ಸರಕುಗಳನ್ನು ಒದಗಿಸಲು ಸಿ.ಕೃಷ್ಣಯ್ಯ ಚೆಟ್ಟಿ ಐಷಾರಾಮಿ ಆಭರಣಗಳಿಗೆ ತಾರ್ಕಿಕ ವಿಸ್ತರಣೆ ಎಂದು ಪರಿಗಣಿಸುತ್ತದೆ. ವಿಶ್ವಾದ್ಯಂತ ಯಾವುದೇ ಬ್ರಾಂಡ್ನೊಂದಿಗೆ ಸ್ಪರ್ಧಿಸಬಹುದಾದ, ಉನ್ನತ-ಮಟ್ಟದ ಭಾರತೀಯ ಸುಗಂಧ ಕಂಪನಿಯನ್ನು ಸ್ಥಾಪಿಸಲು ನಾವು ಹೊರಟಿದ್ದೇವೆ ಎಂದರು.ಬಳ್ಳಾರಿ ಗ್ರಾಹಕರಿಗೆ ಮಕರ ಸಂಕ್ರಾಂತಿ ವಿಶೇಷ ಕೊಡುಗೆಯಾಗಿ 1 ಕ್ಯಾರೆಟ್ ವಜ್ರ ಖರೀದಿಗೆ 2 ಗ್ರಾಂ ಚಿನ್ನದ ನಾಣ್ಯ  ಮತ್ತು 1 ಗ್ರಾಂ ಚಿನ್ನ ಖರೀದಿಗೆ 3 ಗ್ರಾಂ ಬೆಳ್ಳಿ ನಾಣ್ಯ ಉಚಿತ. ಕೊಡುಗೆ 14,01,2023 ರಂದು ಪ್ರಾರಂಭವಾಗುತ್ತದೆ ಮತ್ತು 16,01,2023 ರಂದು ಕೊನೆಗೊಳ್ಳುತ್ತದೆ. ಷರತ್ತುಗಳು ಅನ್ವಯ.ಕೊಡುಗೆ, ಆಭರಣ ಸಂಗ್ರಹ ಮತ್ತು ಪ್ರದರ್ಶನ ಕುರಿತ ಹೆಚ್ಚಿನ ಮಾಹಿತಿಗೆ: ಪ್ರಸಾದ್ +91 97400 18415  / ಶೇಷಾದ್ರಿ:  +91 99809 50819 ಸಂಪರ್ಕಿಸಬವಹುದಾಗಿದೆ. 


ಸುದ್ದಿ ಓದಿ