ಬಳ್ಳಾರಿ

ರಾಯರ ಬೃಂದಾವನಕ್ಕೆ, ಆಂಜನೇಯಸ್ವಾಮಿಗೆ ಬೆಳ್ಳಿಯ ರಜತ ಕವಚ ಅಲಂಕಾರ

ರಾಯರ ಬೃಂದಾವನಕ್ಕೆ, ಆಂಜನೇಯಸ್ವಾಮಿಗೆ ಬೆಳ್ಳಿಯ ರಜತ ಕವಚ ಅಲಂಕಾರ

ಲೋಕದರ್ಶನ ವರದಿ 

ಕಂಪ್ಲಿ 23: ಇಲ್ಲಿನ ಸತ್ಯನಾರಾಯಣಪೇಟೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಶಾಖಾಮಠದಲ್ಲಿ, ಗುರುಸಾರ್ವಭೌಮ ಶ್ರೀರಾಘವೇಂದ್ರಸ್ವಾಮಿಗಳ 350ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆಯ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ಜರುಗಿದವು. ಸಕಲ ಸದ್ಭಕ್ತರಿಂದ ಸಂಗ್ರಹಿಸಿದ 15ಕೆಜಿ. ಬೆಳ್ಳಿಯಿಂದ ನಿರ್ಮಿಸಿದ ರಜತ ಕವಚವನ್ನು ರಾಯರ ಬೃಂದಾವನಕ್ಕೆ ಹಾಗೂ ಆಂಜನೇಯಸ್ವಾಮಿಗೆ ಬೆಳ್ಳಿಯ ಕವಚವನ್ನು ಸಮರ​‍್ಿಸಿ ಅಲಂಕರಿಸಲಾಗಿತ್ತು.  


ಭಾನುವಾರ ಸಂಜೆ  ಶ್ರೀರಾಘವೇಂದ್ರಸ್ವಾಮಿಗಳ 350ನೇ ಆರಾಧನಾ ಮಹೋತ್ಸವಕ್ಕೆ ಶಾಸಕ ಜೆ.ಎನ್‌.ಗಣೇಶ್ ಅವರು ಗೋಪೂಜಾ, ಮತ್ತು ಧ್ವಜಾರೋಹಣ ನೆರವೇರಿಸುವ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಜೆ.ಎನ್‌.ಗಣೇಶ್‌ರಾಯರ ದರ್ಶನ ಪಡೆದರು ಕಂಪ್ಲಿಯ ರಾಯರ ಮಠದ ಪ್ರಧಾನ ಆರ್ಚಕ ಕೀಶೋರ್ ಅಚಾರ್ ವವ್ಯಸ್ಥಾಪಕರು ಶ್ರೀನಿವಾಸ ಕೂರಲ್ ಹಳ್ಳಿ ಮೇಲ್ವಿಚಾರಕ ಟಿ.ಕೊಟ್ರೇಶ್, ಗಂಗಾವತಿ ರಾಯರ ಮಠದ ಮೇಲ್ವಿಚಾರಕ ರಾಮಕೃಷ್ಣ ಜಾಗೀರದಾರ್, ಸದ್ಭಕ್ತರಾದ ರಾಯ್ಕರ್ ಜಗದೀಶ್, ವ್ಯಾಸಾಚಾರ್, ಡಿ.ಮೌನೇಶ್, ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಗಂಗಾವತಿಯ ಡಾ.ಹಯವಧನ, ಬೃಂದಾವನದ ರಜತ ಕವಚ ನಿರ್ಮಿಸಿದ ಕೊಪ್ಪಳದ ಪ್ರಕಾಶ ಶೇಖರ​‍್ಪ ಶಿಲ್ಪಿ ಸೇರಿ ಸದ್ಭಕ್ತರಿದ್ದರು. 


ಸುದ್ದಿ ಓದಿ