ಮುಂದಗೋಡ

ಇಲ್ಲಿ ಕಸ ಹಾಕಬೇಡಿ ಎಂಬ ಬೋರ್ಡೇ “ದಂಡ”

ಇಲ್ಲಿ ಕಸ ಹಾಕಬೇಡಿ ಎಂಬ ಬೋರ್ಡೇ “ದಂಡ”

ಮುಂಡಗೋಡ 14: ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ಕಸದ ರಾಶಿಗಳ ಕಾಣುತ್ತಿವೆ. ರಸ್ತೆಗಳ ಪಕ್ಕದಲ್ಲಿ ಕಸ ಹಾಕಬೇಡಿ ಎಂದು ಸೂಚನಾ ಫಲಕ ಹಾಕಲಾಗಿದೆ. ಆದರೆ ಫಲಕಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಕಸ ಹಾಕುತ್ತಿದ್ದಾರೆ. 

ರಸ್ತೆ ಬದಿಯೇ ಕಸದ ರಾಶಿ ಸೂಚನಾ ಫಲಕ್ಕೆ ಇಲ್ಲ ಕಿಮ್ಮತ್ತು..? ಪಟ್ಟಣದಿಂದ ಬಂಕಾಪುರ ಹೋಗುವ ದಾರಿಯಲ್ಲಿ   ಬಂಕಾಪುರ ರಸ್ತೆ ಸೇರಿದಂತೆ  ರಸ್ತೆ  ಪಕ್ಕದಲ್ಲೇ ಸೂಚಕ ಫಲಕ ಇದ್ದರು ಅಲ್ಲೇ ಪ್ಲಾಸ್ಟಿಕ್ ರಾಶಿಯೇ ಕಂಡುಬರುತ್ತದೆ. ಸೀಟಿ ಫಾರ್ಮ ಹೋಗುವ  ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ರಾಶಿಗಳಲ್ಲದೆ, ಮನೆಯ ತ್ಯಾಜ್ಯ ಸಹ ಚೆಲ್ಲಿರುವುದರಿಂದ ದುರ್ನಾತ ಬೀರುತ್ತಿದೆ.     

ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರು ಕಸದ ರಾಶಿ ಗುಡ್ಡೆ ಹಾಕುತ್ತಿದ್ದಾರೆ. ಕಸ ಎಲ್ಲೆಂದರಲ್ಲಿ ರಸ್ತೆಯುದ್ದಕ್ಕೂ ರಸ್ತೆಯ ಬದಿಯಲ್ಲೂ ಜನರು ತ್ಯಾಜ್ಯವನ್ನು ಎಸೆಯದಂತೆ ಪಟ್ಟಣ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ನಿವಾಸಿಗಳ ಒತ್ತಾಯವಾಗಿದೆ. ಪಟ್ಟಣ ಪಂಚಾಯಿತಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದೇ? ಎಂದು ಕಾದು ನೋಡಬೇಕಾಗಿದೆ. 


ಸುದ್ದಿ ಓದಿ