ಬಳ್ಳಾರಿ

ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಡಬೇಕೆಂದು ಸಂಸ್ಥೆಯ ನೊಂದಣಿ ಅಧಿಕಾರಿಗಳಿಗೆ ಮನವಿ

ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಡಬೇಕೆಂದು ಸಂಸ್ಥೆಯ ನೊಂದಣಿ ಅಧಿಕಾರಿಗಳಿಗೆ ಮನವಿ

ಬಳ್ಳಾರಿ :ರಂದು ನಡೆದ ನಗರದಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘಕ್ಕೆ ಸದಸ್ಯರಿಂದ ಅವಿಶ್ವಾಸ ನಿರ್ಣಯ ಚುನಾವಣೆ ನಡೆಸಲು ಸಂಘ ಸಂಸ್ಥೆಗಳ ನೋಂದಣಾಧಿಕಾರಿಗಳಿಗೆ ಸಂಘದ ಸದಸ್ಯರಿಂದ ಒತ್ತಾಯಿಸಿದರು. 

ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಅವದಿ ಮುಗಿದ್ದಿದ್ದು, ವಿವಿಧ ಪದಾಧಿಕಾರಿಗಳ ಆಯ್ಕೆಗಾಗಿ ಸಂಘ ಸಂಸ್ಥೆ ನೋಂದಣಿ ಅಧಿನಿಯಮ ಮತ್ತು ನಿಯಮ ಮತ್ತು ನಿಬಂಧನೆಗಳನ್ವಯ ಎಲ್ಲಾ ಸದಸ್ಯರೊಡಗೂಡಿದ ಚುನಾವಣೆಯನ್ನು ನಡೆಸುವ ಮೂಲಕ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂದು ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಸದಸ್ಯರು ಸಂಘ ಸಂಸ್ಥೆಗಳ ನೊಂದಣಾಧಿಕಾರಿಗಳಿಗೆ ಮನವಿ ಮಾಡುವುದರ ಮೂಲಕ ಒತ್ತಾಯಿಸಿದರು. 

ಈಗಿರುವ ಸದಸ್ಯರು ಚುನಾವಣೆಯಿಲ್ಲದಂತೆ ಹಿಂದೆ ಇದ್ದಂತಹ ಪದಾಧಿಕಾರಿಗಳನ್ನ ಮುಂದುವರೆಸಿ ಪದಗ್ರಹಣ ಕಾರ್ಯಕ್ರಮದ ಕುರಿತು ವಾಟ್ಸಪ್ ಮೂಲಕ ಎಲ್ಲಾ ಸದಸ್ಯರಿಗೆ ಮಾಹಿತಿ ನೀಡಿರುತ್ತಾರೆ. ಇದು ಸಂಘ ಸಂಸ್ಥೆಗಳ ನಿಯಮ ನಿಬಂಧನೆಗಳನ್ವಯ ಅಪರಾಧವಾಗುತ್ತದೆ. ಈ ಹಿಂದೆ ಇದ್ದ ಪದಾಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳಿರುವುದರಿಂದ ಮತ್ತು ಅವರ ಮೇಲೆ ಸಂಘದ ಸದಸ್ಯರಿಗೆ ಅವಿಶ್ವಾಸ ಹೊಂದಿರುವುದರಿಂದ ಅವರೇ ಇನ್ನೊಂದು ಅವದಿಗೆ ಮುಂದುವರೆಯುವುದನ್ನು ತಡೆಯಲು ನಿಯಮ ನಿಬಂಧನೆಗಳನುಸಾರ ಚುನಾವಣೆ ಮೂಲಕ ಸದರಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು ಮತ್ತು ಸಂಘದ ಎಲ್ಲಾ ಕಾರ್ಯಕಲಾಪಗಳನ್ನು ಸ್ಟಾಂಡಿಂಗ್ ಕಮಿಟಿಯ  ಮೂಲಕವೇ ನಡೆಸಬೇಕೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಘದ ಸದಸ್ಯರಾದ ವಿಜಯ್ ಭಾಸ್ಕರ್ ರೆಡ್ಡಿ, ಪ್ರವೀಣ್ ಕುಮಾರ್, ಬಾಬು, ಜೆ ನಾಗರಾಜ್, ರಾಮ್ ಕುಮಾರ್, ಮಹಬೂಬ್ ಭಾಷಾ, ವೆಂಕಟೇಶ್, ಫಯ್ಯಾಜ್, ಎಂ ಲೋಕೇಶ್, ರಮೇಶ್ ಸಿ, ಸುರೇಂದ್ರ, ರಾಮ್ ಕುಮಾರ್, ನೀಲಕಂಠೇಶ್ವರ ನಾಯ್ಡು, ಎಂ. ಇತರರು ಸಂಘ ಸಂಸ್ಥೆ ನೋಂದಣಾಧಿಕಾರಿಗಳನ್ನು ಪತ್ರಿಕಾಗೋಷ್ಠಿಯ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ವ್ಯಕ್ತಪಡಿಸಿದರು. 


ಸುದ್ದಿ ಓದಿ