ರೈತರ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ರಸ್ತೆ ಸಂಪರ್ಕ ಕಲ್ಪಿಸಲು ಮನವಿ
ಮುದ್ದೇಬಿಹಾಳ 07: ತಾಲೂಕಿನ ನಾಗರಬೆಟ್ಟ ಗ್ರಾಮದ ಸರ್ವೆ ನಂ:51, ಕ್ಷೇತ್ರ185-25ಗುಂ. ಸರ್ವೆ ನಂ:89, ಕ್ಷೇತ್ರ:ಎ24-01ಗುಂ, ಸಂಪೂರ್ಣ ನೈಸರ್ಗಿಕ ಗುಡ್ಡವನ್ನು ಸರಕಾರ ವಶಪಡಿಸಿಕೊಂಡು ಗೋಮಾಳ ಎಂದು ಘೋಷಿಸುವ ಮೂಲಕ ಸಂರಕ್ಷಣೆ ಮಾಡಬೇಕು ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ರೈತ ಮುಖಂಡ ಮಲ್ಲಿಕಾರ್ಜುನ ಸಿದರಡ್ಡಿ ತಹಶಿಲ್ದಾರ ಬಲರಾಮ ಕಟ್ಟಿಮನಿಯವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಾಗರಬೆಟ್ಟ ಗ್ರಾಮವು ಹೈದರಾಬಾದ ನಿಜಾಮರ ಕಾಲದಲ್ಲಿ ಕೊನೆಯ ಹಳ್ಳಿಯಾಗಿತ್ತು. ಹಾಗೂ ಈ ಗ್ರಾಮವು ಕೊಡೇಕಲ್ಲ ಜಾಗೀರುದಾರರ ಒಡೆತನದಲ್ಲಿತ್ತು. ಮುಂದೆ ಟೆನೆಂಟ್ ಕಾಯ್ದೆ ಪ್ರಕಾರ ಜಮೀನುಗಳನ್ನು ರೈತರಿಂದ ಪಟ್ಟು ತುಂಬಿಸಿಕೊಂಡು ಬಿಟ್ಟುಕೊಟ್ಟಿದ್ದಾರೆ. ಆದರೆ ಎರಡೂ ಗುಡ್ಡಗಳು ಸಂಪೂರ್ಣ ಖರಾಬ ಇರುವದರಿಂದ ಸರಕಾರವೇ ಕೊಡೇಕಲ್ಲ ಜಾಗೀರುದಾರರಿಗೆ ಪಟ್ಟನ್ನು ನೀಡಿ ಅವುಗಳನ್ನು 1978ನೇ ಇಸ್ವಿಯಲ್ಲಿ ಸರಕಾರ ಎಂದು ದೃಢೀಕರಿಸಲಾಗಿದೆ. ಸನ್ 2005-06ನೇ ಸಾಲಿನಲ್ಲಿ ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆಗಾಗಿ ಆಗಿನ ತಹಶೀಲ್ದಾರರಾದ ಎ.ವಿ.ನಾಡಗೌಡ ಸಾಹೇಬರ ತಪ್ಪು ಮಾಹಿತಿಯಿಂದಾಗಿ ಕೊಡೇಕಲ್ಲ ಜಾಗೀರದಾರರ ವಂಶಸ್ಥರಿಗೆ ವಾರಸಾ ಮಾಡಲಾಯಿತು. ಅದರಲ್ಲಿ ಕ್ಷೇತ್ರಎ8-08ಗುಂ, ಜಮೀನನ್ನು ಅವರಿಂದ ರಾಜ್ಯಪಾಲರ ಹೆಸರಿನಲ್ಲಿ ಖರೀದಿ ಮಾಡಿ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಾಗಿ ಅವಕಾಶ ಮಾಡಿಕೊಡಲಾಯಿತು. ಬಳಿಕ ಜಾಹಗೀರುದಾರರು ಸಂಪೂರ್ಣ ಗುಡ್ಡಗಳನ್ನು ಮಾರಲು ಹುನ್ನಾರ ನಡೆಸಿದರು. ಗ್ರಾಮಸ್ಥರಿಗೆ ವಿಷಯ ತಿಳಿದ ತಕ್ಷಣ 2012ನೇ ಸಾಲಿನಲ್ಲಿ ಗುಡ್ಡಗಳನ್ನು ಉಳಿಸಿಕೊಳ್ಳಲು ಇಲ್ಲಿಯವರೆಗೂ ಹೋರಾಟಗಳನ್ನು ಮಾಡುತ್ತಾ ಬಂದಿರುತ್ತೇವೆ. ಆಗ ನಮಗೆ ಅಧಿಕಾರಿ ವರ್ಗದವರು ಆ ರೀತಿ ಮಾರಲಿಕ್ಕೆ ಬರುವದಿಲ್ಲವೆಂದು ಭರವಸೆ ನೀಡಿದರು. ಆದರೆ ಈಗ ಪಹಣಿ ಉತಾರೆಯಲ್ಲಿ ಗೆರೆಯಮೇಲಿದ್ದ ಸರಕಾರ ಕಡಿಮೆ ಮಾಡಿ ವಾರಸುದಾರರನ್ನು ಗೆರೆಯ ಮೇಲೆ ತಂದಿದ್ದಾರೆ. ಹೀಗಾಗಿ ಅವರು ಅದನ್ನು ಸಂಪೂರ್ಣ ಕಬ್ಬಾ ತೆಗೆದುಕೊಂಡು ಮಾರುವ ಹುನ್ನಾರ ನಡೆಸಿದ್ದಾರೆ.
ಈ ಬಗ್ಗೆ 2012ರಲ್ಲಿ ತಹಶೀಲ್ದಾರ ಸೋಮಲಿಂಗ್ ಗೆಣ್ಣೂರ, 2014ರಲ್ಲಿ ತಹಶೀಲ್ದಾರ ಕೆ. ಮಲ್ಲಿನಾಥ, 2016 ರಲ್ಲಿ ತಹಶೀಲ್ದಾರ ಎಂ.ಎ.ಎಸ್.ಬಾಗವಾನ, 2022ರಲ್ಲಿ ತಹಶೀಲ್ದಾರ ಕಡಕಬಾವಿ ಯವರು ಹಾಗೂ ಆ ಸಾಲಿನ ಮಾನ್ಯ ಉಪವಿಭಾಗಾಧಿಕಾರಿಗಳೀಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಶೀಘ್ರವಾಗಿ ಕ್ರಮ ಕೈಗೊಳೂತ್ತೇವೆ ಎಂದು ಮೌಖಿಕವಾಗಿ ಭರವಸೆ ನೀಡಿದ್ದಲ್ಲದೆ ತಹಶೀಲ್ದಾರರಾದ ಕಡಕಬಾವಿಯವರನ್ನು ನಮ್ಮ ಎದುರಿಗೆ ಕರೆಸಿ ಸೂಚಿಸಿದ್ದರು. ಅದರಂತೆ ತಾಲೂಕಿನ ನಾಗರಬೇಟ್ಟ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳು ರಸ್ತೆ ಸಂಪರ್ಕವಿಲ್ಲದೇ ಈ ಭಾಗದ ರೈತರು ತಮ್ಮ ಕೃಷಿ ಚಟುವಟಿಕೆ ಪ್ರಾರಂಭಿಸಲು ತಮ್ಮ ತಮ್ಮ ಜಮೀನುಗಳಿಗೆ ನಿತ್ಯ ಸಂಚಾರ ಮಾಡಲು ತೀವೃ ತೊಂದರೆಯಾಗುತಿದೆ. ಈ ಬಗ್ಗೆ ಈ ಗಾಗಲೇ ತಾಲೂಕಾ ದಂಡಾಧಿಕಾರಿಗಳಿಗೆ ಸಾಕಷು ದೂರುಕೂಡ ನೀಡಿ ಸಮಸ್ಯೆ ಪರಿಹರಿಸಲು ಮನವಿ ಕೂಡ ಸಲ್ಲಿಸಲಾಗಿದೆೆ ಆದರೇ ಇಲ್ಲಿಯವರಗೆ ಯಾವೂದೇ ನಮ್ಮ ಮನವಿಗೆ ಸ್ಪಂದಿಸಿ ನ್ಯಾಯ ಒದಗಿಸಿಲ್ಲ ಸಧ್ಯ ರಸ್ತೆ ಇಲ್ಲದೇ ತುಂಬಾ ಕಷ್ಟಕರ ಸ್ಥಿತಿ ಎದುರಿಸುತ್ತಿದು ಈಗಾಗಲೇ ಕರ್ನಾಟಕ ಸರಕಾರ ರೈತರ ಉಳುಮೆಗೆ ಹಾಗೂ ಕೃಷಿ ಚಟುವಟಿಕೆ ನಡೆಸಲು ಅಕ್ಕಪಕ್ಕದ ಜಮೀನಿನ ಮಾಲಿಕರು ಪರಸ್ಪರ ರೈತರು ಹೊಂದಾಣಿಕೆ ಮಾಡಿಕೊಂಡು ತಾತ್ಕಾಲಿಕ ರಸ್ತೆ ನಿರ್ಮಾಕ್ಕೆ ಯಾರೂಕೂಡ ಅಡ್ಡಿಪಡಿಸಬಾರದು ಎಂದು ಸೂಚನೆ ಕೂಡ ನೀಡಿದೆ. ಈ ಹಿನ್ನೇಲೆಯಲ್ಲಿ ರೈತರು ತಮ್ಮ ಜಮೀನಿಗೆ ಹೋಗಿ ಬರಲು ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು.
ಸಧ್ಯ ನಾಗರಬೆಟ್ಟ ಎರಡೂ ಗುಡ್ಡಗಳು ಸಂಪೂರ್ಣ ಸರಕಾರ ಎಂದು ದಾಖಲಾಗಿರುವದರಿಂದ ಸರಕಾರ ಗೆರೆಯ ಕೆಳಗಿರುವ ವಾರಸುದಾರ ಹೆಸರನ್ನು ಸಂಪೂರ್ಣ ತೆಗೆದುಹಾಕಬೇಕು. ಸರಕಾರಿ ಗುಡ್ಡವನ್ನು ಸರಕಾರಿ ದರದಲ್ಲಿ (3 ಲಕ್ಷ 28 ಸಾವಿರ ರೂಗಳ ಬಡ್ಡಿ ಸಮೇತ ವಸೂಲಿ ಮಾಡಿ (2005-06ರಿಂದ 05-12-2023ರವರೆಗೆ) ರಾಣಿ ರಂಗಪ್ಪ ಗಂ. ರಾಜಾ ವೆಂಕಟಪ್ಪ ನಾಯಕ ಇವರಿಂದ ಸರಕಾರದ ಬೊಕ್ಕಸಕ್ಕೆ ಮರಳಿ ಪಾವತಿಸಬೇಕು. ಗುಡ್ಡದ 2 ಎಕರೆ ಜಮೀನದಲ್ಲಿ ಮಣ್ಣನ್ನು ಅಗೆದು ಕನಿಷ್ಠ 14 ಲಕ್ಷ ರೂಗಳನ್ನು ರಸ್ತೆಗಳಿಗೆ ಬಳಸಿದ ಕ್ಲಾಸ್- ಕಾಂಟ್ರಾಕ್ಟರ್ ನೀಲಕಂಠರಾವ ಸಂ. ದೇಶಮುಖ ಇವರಿಂದ ಸರಕಾರಕ್ಕೆ ಪಾವತಿಸಬೇಕು. ನಾಗರಬೆಟ್ಟ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಬೂದಿಹಾಳ, ಮಾವಿನಬಾವಿ, ಅರಸನಾಳ, ಹಿರೇಮುರಾಳ, ಜಂಗಮುರಾಳ, ಅರೆಮುರಾಳ, ಜೈನಾಪೂರ ಹಾಗೂ ಖಿಲಾರಹಟ್ಟಿ ಗ್ರಾಮಗಳಲ್ಲಿ ಗೋಮಾಳ ಇದರ ಕಾರಣ ಈ ಎರಡೂ ಗುಡ್ಡಗಳನ್ನು ಗೋಮಾಳ ಎಂದು ಘೋಸಿಸಬೇಕು ಒಂದು ವೇಳೆ ನಮ್ಮ ಬೇಡಿಕೆ ಇಡೇರಿಸದೇ ಇದ್ದಲ್ಲಿ ಇದೇ ತಿಂಗಳು ದಿ, 18 ರಂದು ತಹಶಿಲ್ದಾರ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ರೈತರಾದ ಪರಸಪ್ಪ ಗುರಿಕಾರ, ನಿಂಗಪ್ಪ ಗುರಿಕಾರ, ಅಮರಪ್ಪ ಬಂಗಾರಗುಂಡ, ಸಂಗಪ್ಪ ಗುರಿಕಾರ, ಹಣಮಂತ್ರಾಯ ಗುರಿಕಾರ, ವಿರೇಶ ಬಾರಡ್ಡಿ, ಯಮನಪ್ಪ ನಂದ್ಯಾಳ, ದಾವಲಸಾಬ ನಾಲತವಾಡ ಸೇರಿದಂತೆ ಹಲವರು ಇದ್ದರು.