ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 10 ಗಂಟೆ ಕಾರ್ಯವಕಾಶ ನೀಡಲು ಮನವಿ
ಬಳ್ಳಾರಿ 04: ನಗರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ವತಿಯಿಂದ ಈ ಉಪನ್ಯಾಸಕರ ಬೇಡಿಕೆಗಳಾದ ಅಕ್ಟೋಬರ್ ಮಾಹೆಯ ಕಡಿತವಾದ ಗೌರವ ಧನವನ್ನು ಪೂರ್ಣವಾಗಿ ನೀಡಬೇಕೆಂದು ಹಾಗೂ ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 10 ಗಂಟೆಗಳ ಕಾರ್ಯಭಾರ ಮಾಡಲು ಅವಕಾಶ ನೀಡಬೇಕೆಂದು ಮನವಿ ಪತ್ರವನ್ನು ಡಿಡಿಪಿಯುವರಿಗೆ ಸಲ್ಲಿಸಿ, ಚರ್ಚಿಸಲಾಯಿತು.
ಅಕ್ಟೋಬರ್ ಮಾಹೆಯ ಕಡಿತವಾದ ಗೌರವದನವನ್ನು ಪೂರ್ಣವಾಗಿ ನೀಡುವುದಾಗಿ ಉಪನಿರ್ದೇಶಕರು ಭರವಸೆ ನೀಡುತ್ತಾ ನಮ್ಮ ಮನವಿಯನ್ನು ಸ್ವೀಕರಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ರವಾನಿಸಿರುತ್ತಾರೆ ಹಾಗೂ ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಹಾಗೂ ಮುನಿಸಿಪಲ್ ಕಾಲೇಜು, ನಗರದ ವ್ಯಾಪ್ತಿಯಲ್ಲಿರುವ ಎರಡು ಕಾಲೇಜಿನ ಸಮಸ್ಯೆಯಾದ ವಾರಕ್ಕೆ 10 ಗಂಟೆಗಳ ಕಾರ್ಯಭಾರವನ್ನು ಕುರಿತು ಚರ್ಚಿಸಿದಾಗ ಅವರು ಇದು ನಮಗೆ ಸಂಬಂಧಿಸಿದ ವಿಷಯವಲ್ಲ ಪ್ರಾಂಶುಪಾಲರ ಸಮಸ್ಯೆಯಾಗಿದೆ ಎಂದು ಹೇಳಿದರು.
ಪ್ರಾಂಶುಪಾಲರು ನೀಡಿದ ಕಾರ್ಯ ಭಾರವನ್ನು ಮಾಡುವುದಾದರೆ ಮಾಡಿ, ಇಲ್ಲವಾದರೆ ನಿಮ್ಮ ಜಾಗದಲ್ಲಿ ಮತ್ತೋರ್ವ ಉಪನ್ಯಾಸಕರು ಬರಲು "ರೆಡಿ ಇರುತ್ತಾರೆ ಎಂದು ಉಪನಿರ್ದೇಶಕರು ತಿಳಿಸಿದರು. ಈ ಎಲ್ಲಾ ಕಟ್ಟಳೆಗಳನ್ನು ಅತಿಥಿ ಉಪನ್ಯಾಸಕರ ಸಮ್ಮುಖದಲ್ಲಿ ವಿವರಿಸಿರುತ್ತಾರೆ. ಆದ್ದರಿಂದ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲವೆಂದು ಸಂಘಟನೆ ಖಂಡಿಸುತ್ತಾ ಮುಂದಿನ ಉನ್ನತ ಹೋರಾಟಕ್ಕೆ ಎಲ್ಲಾ ಅತಿಥಿ ಉಪನ್ಯಾಸಕರು ಸಜ್ಜಾಗಬೇಕೆಂದು ಅತಿಥಿ ಉಪನ್ಯಾಸಕರ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ, ನಾಗರಾಜ್, ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.