ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಸಭೆಗೆ ಮನವಿ
ಶಿಗ್ಗಾವಿ 03: ರಾಜ್ಯ ಸರ್ಕಾರದ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಅವರನ್ನು ಹಾವೇರಿಯ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಶಿಗ್ಗಾವಿ ತಾಲೂಕಿನ ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಗಳ ಕೆಲಸಗಳಿಗೆ ತೊಂದರೆಯಾಗಿದೆ ದಯಮಾಡಿ ಶಿಗ್ಗಾವ್ ತಾಲೂಕಿನಲ್ಲಿ ಅಧಿಕಾರಿಗಳ ಸಭೆ ಮಾಡಿ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಿ ಕಾಂಗ್ರೆಸ್ ಪಕ್ಷದ ತಾಲೂಕ ವಕ್ತಾರ ಮಂಜುನಾಥ ಮಣ್ಣಣ್ಣವರ ಮನವಿ ಮಾಡಿದರು.
ಮನವಿ ಆಲಿಸದ ಸಲೀಂಅಹ್ಮದವರು ಬೆಳಗಾವಿ ಅಧಿವೇಶನದ ನಂತರ ಒಂದು ದಿನ ಸಭೆ ಮಾಡುವುದಾಗಿ ನಾಗರಿಕರ ಕಾರ್ಯಗಳಿಗೆ ನಿರ್ಲಕ್ಷ ಧೋರಣೆ ತೋರುವ ಅಧಿಕಾರಿಗಳಿಗೆ ನಾಗರಿಕರಿಗೆ ಸ್ಪಂದನೆ ಮಾಡುವಂತೆ ಸೂಚಿಸಲಾಗುವುದು ಎಚ್ಚೆತ್ತುಕೊಳ್ಳದಿದ್ದರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಹಳೆ ಬಂಕಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀರೀಶ್ ಭೈಲವಾಳ ಮನವಿ ಮಾಡಿ ತಾಲೂಕ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಸಭೆ ಮಾಡಿ ಸರ್ಕಾರಿ ಯೋಜನೆಗಳ ಬಗ್ಗೆ ನಾಗರೀಕರಿಗೆೆಸುವ ಕಾರ್ಯದಲ್ಲಿ ಗ್ರಾಮ ಪಂಚಾಯತಿ ಪ್ರತಿನಿಧಿಗಳಿಗೆ ಸಹಕಾರ ಕೊಡುವಂತೆ ಸೂಚಿಸಬೇಕೆಂದು ಮನವಿ ಮಾಡಿಕೊಂಡರು. ಸವಣೂರು ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜೆ ಮುಲ್ಲಾ, ಗ್ರಾಮ ಪಂಚಾಯತಿ ಸದಸ್ಯ ಮುಜಾಹಿದ ದಿವಾನ್ನವರ ಹಲವಾರು ಪಕ್ಷದ ಮುಖಂಡರು ಪದಾಧಿಕಾರಿಗಳು ಪ್ರತಿನಿಧಿಗಳು ಉಪಸ್ಥಿತರಿದ್ದರು.