ಮುಂದಗೋಡ

ಪ್ರತ್ಯಕ್ಷಗೊಂಡ ಅಪರೂಪದ ಪುನುಗು ಬೆಕ್ಕು

ಪ್ರತ್ಯಕ್ಷಗೊಂಡ ಅಪರೂಪದ  ಪುನುಗು ಬೆಕ್ಕು

ಮುಂಡಗೋಡ:ತಾಲೂಕಿನ ಹುನಗುಂದ ಗ್ರಾಮದ ಯಲ್ಲಪ್ಪ ಶಿವಳ್ಳಿ ಎಂಬುವರ ಮನೆಯಲ್ಲಿ ಶುಕ್ರವಾರ ಪ್ರತ್ಯಕ್ಷಗೊಂಡ ಅಪರೂಪದ  ಪುನುಗು ಬೆಕ್ಕನ್ನು(ಕಾಡು ಬೆಕ್ಕು)(ಋಜಚಿಟಿ ಠಿಚಿಟಟ ಛಿತಜಣ ಛಿಚಿಣ) ಅರಣ್ಯ ರಕ್ಷಕ ಶ್ರೀಧರ ಭಜಂತ್ರಿ ಮತ್ತು ಸಿಬ್ಬಂದಿ ಸುಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು.  

ಮಳೆ ಹೆಚ್ಚಾದ ಕಾರಣ ಸುಮಾರು ಐದಾರು ವರ್ಷದ ಈ ಗಂಡು ಪುನುಗು ಬೆಕ್ಕು(ಋಜಚಿಟಿ ಠಿಚಿಟಟ ಛಿತಜಣ ಛಿಚಿಣ) ಕಾಡಿನಿಂದ ನಾಡಿಗೆ ಬಂದು ಸೇರಿಕೊಂಡಿದೆ. ಇವು ಸಾಮಾನ್ಯವಾಗಿ ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ನೆಲದಲ್ಲಿಯೂ ಇವು ಬಿಲ ಮಾಡಿಕೊಂಡಿರುತ್ತವೆ. ಬಿಲದಲ್ಲಿ ನೀರು ಹೊಕ್ಕು ಬಿಲದಿಂದ ಹೊರಗೆ ಬಂದಿರಬಹುದು. ಮನೆಯಲ್ಲಿ ಸೇರಿಕೊಳ್ಳುವಾಗ ಕಾಲುಗಳನ್ನು ಪರಚಿಕೊಂಡು ಅಲ್ಲಲ್ಲಿ ಗಾಯಗೊಂಡು ನಿಶ್ಯಕ್ತವಾಗಿತ್ತು. ಪಶು ವೈದ್ಯಾಧಿಕಾರಿಗಳಿಂದ ಬೆಕ್ಕಿಗೆ ಚಿಕಿತ್ಸೆ ಕೊಡಿಸಿ ನಂತರ ಕಾಡಿಗೆ ಬಿಡಲಾಯಿತು. ಕಳೆದ ಶುಕ್ರವಾರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕಾಣಿಸಿಕೊಂಡ ಸಣ್ಣ ಸಿವೆಟ್ ಬೆಕ್ಕು(ಋಜಚಿಟಿ ಟಚಿಟಟ ಛಿತಜಣ ಛಿಚಿಣ) ಹೋಲುವ ಎಲ್ಲ ಗುಣ-ಲಕ್ಷಣಗಳನ್ನು ಇದು ಹೊಂದಿದ್ದು ತಾಲೂಕಿನ ಎಲ್ಲ ಭಾಗದ ಕಾಡುಗಳಲ್ಲಿ ಇದರ ಸಂತತಿ ಕಂಡು ಬರುತ್ತದೆ ಎಂದು ಅರಣ್ಯ ರಕ್ಷಕ ಶ್ರೀಧರ ಭಜಂತ್ರಿ ತಿಳಿಸಿದರು. ಅರಣ್ಯ ರಕ್ಷಕರಾದ ಶಿವಪ್ಪ ಶಿರ್ಮಾ ಮತ್ತು ಅಮಿತ್ ಸಣ್ಣಕ್ಕಿ ಬೆಕ್ಕನ್ನು ಹಿಡಿಯಲು ಸಹಾಯ ಮಾಡಿದರು. 


ಸುದ್ದಿ ಓದಿ