ವಿಜಯಪುರ

ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಖರೀದಿ ಕೇಂದ್ರ ಆರಂಬಿಸಬೇಕು ; ಮಲ್ಲಯ್ಯ ಸಾರಂಗಮಠ

ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಖರೀದಿ ಕೇಂದ್ರ ಆರಂಬಿಸಬೇಕು ; ಮಲ್ಲಯ್ಯ ಸಾರಂಗಮಠ

                 ತಾಂಬಾ 06 : ಜಿಲ್ಲೆಯಲ್ಲಿ ಈ ಭಾರಿ ಅತಿಹೇಚ್ಚು ಮೆಕ್ಕೆಜೋಳ ಬೆಳೆಯಲಾಗಿದೆ ಮಾರುಕಟ್ಟೆಗೆ ಮೆಕ್ಕೆಜೋಳ ಬಂದು ಹಲವು ತಿಂಗಳು ಗತ್ತಿಸಿದರು ಇಲ್ಲಿಯವರೆಗೆ ಖರೀದಿ ಕೇಂದ್ರ ಆರಂಬಿಸಿಲ್ಲ ಇದು ಖಂಡನಿಯ ಕುಡಲೆ 10ಹಳ್ಳಿಗೆ ಕೆಂದ್ರ ಸ್ಥಾನವಾಗಿರುವಂತ ತಾಂಬಾ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಖರೀದಿ ಕೇಂದ್ರ ಆರಂಬಿಸಬೇಕು ಎಂದು ಹೋರಾಟಗಾರ ಮಲ್ಲಯ್ಯ ಸಾರಂಗಮಠ ಆಗ್ರಹಿಸಿದ್ದಾರೆ. 

ಗ್ರಾಮದಲ್ಲಿ ಸುದ್ದಿಗಾರರ ಜೋತೆ ಮಾತನಾಡಿದ ಅವರು ಯಾವದೆ ಶರತ್ತುಗಳಿಲ್ಲದೆ ರೈತರು ಬೆಳೆದಿರುವ ಎಲ್ಲ ಮೆಕ್ಕೆಜೋಳ ಖರೀದಿಸಬೇಕು ಹಾಗೂ ಇಲ್ಲಿರುವ ಗೊಂದಲಗಳನ್ನು ನೀವಾರಿಸಬೇಕು ಧಾರವಾಡಕ್ಕೆ ಶ್ಯಾಂಪಲ್ ಕಳುಹಿಸಲು ಸಾಧ್ಯವಾಗುವದಿಲ್ಲ ಶೀಘ್ರದಲ್ಲಿ ಮೆಕ್ಕೆಜೋಳ, ತೋಗರಿ ಬೆಳೆಗಾರರ ಅನುಕುಲಕ್ಕಾಗಿ ಉತ್ಪನ್ನಗಳ ಖರಿದಿಗೆ ಯಾವುದೆ ಮಿತಿ ವಿಧಿಸಬಾರದು ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಹಕಾರಿ ಸಂಘಗಳ ಮುಲಕ ಉತ್ಪನ್ನಗಳನ್ನು ಖರಿದಿಸಬೆಕೆಂದು ಒತ್ತಾಯಿಸಿದರು. 

ತಕ್ಷಣವೇ ಮೆಕ್ಕೆಜೋಳ ತೋಗರಿ, ಖರಿದಿಸಲು ಕ್ರಮ ಕೈಗೋಳ್ಳಬೇಕು ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ರೈತರೋಂದಿಗೆ ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಸಂಧರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ಗ್ರಾಪಂ ಸದಸ್ಯ ಪರಸು ಬಿಸನಾಳ, ಆರ್‌.ಎಮ್‌.ನಾಟಿಕಾರ, ಸಿದ್ದಗೊಂಡ ಹಿರೇಕುರಬರ, ಮಹ್ಮದ ವಾಲಿಕಾರ, ಮಹ್ಮದ ದಡೇದ, ಪಾರುಖ್ ಮುಲ್ಲಾ, ಮಹಾಂತೇಶ ಬಡದಾಳ, ಶಿವಪುತ್ರ ಗಂಗನಳ್ಳಿ ಹಾಗೂ ಪಿಕೆಪಿಎಸ್ ನಿದೇರ್ಶಕರು ಇದ್ದರು. 


ಸುದ್ದಿ ಓದಿ