ಬಳ್ಳಾರಿ

ಮೆಣ್ಣತ್ತಿನ ಅಮವಾಸ್ಯೆ ಪ್ರಯುಕ್ತ ಜೋಡು ಎತ್ತುಗಳ ಮೆರವಣಿಗೆ

ಮೆಣ್ಣತ್ತಿನ ಅಮವಾಸ್ಯೆ ಪ್ರಯುಕ್ತ ಜೋಡು ಎತ್ತುಗಳ ಮೆರವಣಿಗೆ

ವಿಜಯನಗರ 29: ಹೊಸಪೇಟೆಯ ಕೊಂಡನಾಯಕನಹಳ್ಳಿಯ ಗ್ರಾಮದಲ್ಲಿ ದಿ. 28ರಂದು ಮೆಣ್ಣತ್ತಿನ ಅಮವಾಸ್ಯೆ ಪ್ರಯುಕ್ತ ಜೋಡು ಎತ್ತುಗಳ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಸಮಾರಂಭದಲ್ಲಿ  ಹೊಸಪೇಟೆಯ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಂಖಡ ಹೆಚ್.ಎನ್.ಎಫ್.ಇಮಾಮ್ ನಿಯಾಜಿ ಅವರು ಭಾಗವಹಿಸಿ ಮಾತನಾಡಿ ಸಮಸ್ತ ನಾಡಿನ ರೈತಭಾಂಧವರಿಗೆ ಮೆಣ್ಣತ್ತಿನ ಅಮವಾಸ್ಯೆಯ ಶುಭ ಕೋರಿದರು. 

ಇಡೀ ದೇಶಕ್ಕೆ ಅನ್ನದಾತರಾಗಿರುವ ಹಾಗೂ ಭಾರತ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರ ದಿನಚರಿ ಪ್ರಾರಂಭವಾಗುವುದೆ  ಈ ಎತ್ತುಗಳಿಂದ ಅಂತಹ ಎತ್ತುಗಳಿಗೆ ಪೂಜ್ಯನೀಯ ಭಾವದಿಂದ ಆರಾಧಿಸುವ ಹಬ್ಬದ ಪ್ರಯುಕ್ತ ಈ ಒಂದು ಮಣ್ಣೆತ್ತಿನ ಅಮವಾಸ್ಯೆಯನ್ನು ಪ್ರತಿವರ್ಷವೂ ಆಚರಿಸುತ್ತಾರೆ. ಆ ಭಗವಂತನ ಆಶೀರ್ವಾದದಿಂದ ದೇಶದಾದ್ಯಂತ  ಉತ್ತಮ ಮಳೆ ಬೆಳೆಯಾಗಿ ಹಸಿರು ಸಮೃದ್ಧವಾಗಿ ಎಲ್ಲರೂ ಸುಖ, ಶಾಂತಿ, ನೆಮ್ಮದಿ, ಹಾಗೂ ಪ್ರೀತಿ ಪ್ರೇಮ ವಾತ್ಸಲ್ಯದಿಂದ ಬಾಳುವಂತಾಗಲಿ ಎಂದು ಪ್ರಾಥಿಸಿದರು.     

ಸಮಾರಂಭದಲ್ಲಿ ಮಾಜಿನಗರ ಸಭಾ ಸದಸ್ಯ ಎಸ್ ಪಿ. ಬಸವರಾಜಪ್ಪ, ಪಿ. ರಾಜಪ್ಪ, ಸಿ. ಚೆನ್ನ ಮಲ್ಲೇಶ್, ಆರ್. ಆರ್ ತಾಯಪ್ಪ, ವಿ.ಗಾಳೆಪ್ಪ, ಎಂ.ಪಿ.ಕೆ. ಮಂಜಪ್ಪ, ಸಿರಿಗೇರಿ ಈರಣ್ಣ,ಗೋಗಿ ಕಣಿಮೆಪ್ಪ, ಗೋಗಿ ಸೋಮಪ್ಪ, ದೊಡ್ಡ ಬಸಪ್ಪ, ಗ್ರಾಮದ ಮುಖಂಡರು, ಸದ್ಭಕ್ತರು ಉಪಸ್ಥಿತರಿದ್ದರು 

ಸುದ್ದಿ ಓದಿ