ಶುಕ್ರವಾರ ಸಂತೆಯಲ್ಲಿ ಎಮ್ಮೆಯ ಹಾವಳಿ
ಸಂಕೇಶ್ವರ,02: ಇಂದು ಮುಂಜಾನೆ ಶುಕ್ರವಾರದ ಸಂತೆ 11. ಗಂಟೆಗೆ ದನಗಳ ಪೇಟೆಯಿಂದ ಎಮ್ಮೆಯೊಂದು ಅಲ್ಲಿಂದ ತಪ್ಪಿಸಿಕೊಂಡು ಪಿ.ಬಿ.ರೋಡದ ವರೆಗೆ ಬಂದು ಜನರನ್ನು ಇರಿಯಲು ಹೋದಾಗ ಜನತೆ ಭಯಭೀತರಾಗಿ ಓಡಾಡತೊಡಗಿದರು ಈ ಎಮ್ಮೆಯ ಕಾಟದಿಂದ ಕೆಲ ಅಂಗಡಿಗಳಲ್ಲಿ ಹೊಕ್ಕಿ ಅಂಗಡಿಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿಗೊಳಿಸಿತು ನಂತರ ಎಮ್ಮೆಯ ಮಾಲೀಕರಿಗೆ ಈ ಎಮ್ಮೆಯ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಎಮ್ಮೆಯನ್ನು ತೆಗೆದುಕೊಂಡು ಹೋಗಿದರು.