ಸಾರ್ವಜನಿಕ ಸ್ಥಳಗಳು ದುರ್ಬಳಕೆಯಾಗದಂತೆ ಪುರಸಭೆಯಿಂದ ನಾಮ ಫಲಕ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 12: ಪಟ್ಟಣದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಮಲ,ಮೂತ್ರ ವಿಸರ್ಜನೆಗೆ ಬಳಕೆಯಾಗದಂತೆ ಪುರಸಭೆಯು ಭಾನುವಾರ ಬೆಳಗ್ಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ ಶೌಚಕ್ಕೆ ಶೌಚಾಲಯಗಳನ್ನು ಬಳಸುವಂತೆ ಲಿಖಿತ ರೂಪದಲ್ಲಿರುವ ನಾಮಫಲಕಗಳನ್ನು ಅಳವಡಿಸಲಾಯಿತು.
ಈ ಸಂಧರ್ಭದಲ್ಲಿ ಪುರಸಭೆಯ ನೈರ್ಮಲ್ಯ ಮೇಸ್ತ್ರಿ ಪ್ರಭಾಕರ ಮಾತನಾಡಿ ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬ ನಾಗರೀಕ ಕೈಜೋಡಿಸಬೇಕು ಇದರಿಂದ ಉತ್ತಮ ಆರೋಗ್ಯ ನಗರದ ಸ್ವಚ್ಛತೆ ಕಾಪಾಡುವಲ್ಲಿ ಸಫಲತೆ ಕಾಣಬಹುದಾಗಿದೆ,ಬಯಲು ಪ್ರದೇಶ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಲ, ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಿ, ಸಾರ್ವಜನಿಕ ಶೌಚಾಲಯಗಳ ಬಳಕೆ ಮಾಡಬೇಕು ಇದರಿಂದ ಪಟ್ಟಣ ಸ್ವಚ್ಛ ಹಾಗೂ ಸುಂದರವಾಗಿರುತ್ತದೆ, ಹೋಟೇಲ್ ಸೇರಿದಂತೆ ಇನ್ನಿತರೆ ಅಂಗಡಿ ಮುಂಗಟ್ಟುಗಳಿಂದ ಬಳಸಲ್ಪಡುವ ತ್ಯಾಜ್ಯವನ್ನು ಪುರಸಭೆಯ ಕಸದ ವಾಹನಗಳಿಗೆ ಹಾಕಬೇಕು ಸಾರ್ವಜನಿಕ ಪ್ರದೇಶಗಳಲ್ಲಿ ಕಸವನ್ನು ಹಾಕದಂತೆ ತಾಕೀತು ಮಾಡಿದರು.ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಅಲ್ಲಿ ಪರುಸಭೆಯಿಂದ ಲಿಖಿತ ರೂಪದ ಫಲಕಗಳನ್ನು ಹಾಕಲಾಗುತ್ತಿದೆ ಇದನ್ನು ಮೀರಿ ಆ ಸ್ಥಳಗಳಲ್ಲಿ ಯಾರಾದರೂ ಮೂತ್ರ ವಿಸರ್ಜನೆ ಸೇರಿದಂತೆ ಕಸವನ್ನು ಹಾಕಿದರೆ ಕಾನೂನು ಕ್ರಮ ಕೈಗೊಳ್ಳಾಲಾಗುವುದು ಎಂದು ತಿಳಿಸಿದರು.ಈ ವೇಳೆ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.