ಬಳ್ಳಾರಿ

ರೈತರರಿಗೆ ಕೊರೊನಾ ಲಸಿಕೆ ಹಾಕಿಸಿದ ಗ್ರಾಮ ಪಂಚಾಯಿತಿ ಸದಸ್ಯ

ರೈತರರಿಗೆ ಕೊರೊನಾ ಲಸಿಕೆ ಹಾಕಿಸಿದ ಗ್ರಾಮ ಪಂಚಾಯಿತಿ ಸದಸ್ಯ

ಹೂವಿನಹಡಗಲಿ 21: ತಾಲೂಕಿನ ನಾಗತಿ ಬಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನೋಬನಗರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಗೌಡ್ರು ಶರಣಗೌಡ ಇವರು ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ರೈತರಲ್ಲಿಗೆ ಹೋಗಿ ಕೋವಿಡ್ ಲಸಿಕೆಯನ್ನು ಹಾಕಿಸುತ್ತಿರುವ  ಕಾರ್ಯವೈಖರಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ, ಪ್ರಶಂಸೆ ವ್ಯಕ್ತವಾಗಿದೆ. ಕಳೆದ ಮೇ ತಿಂಗಳ 29ರಂದು ತಾಲೂಕು ವೈದ್ಯಾಧಿಕಾರಿಗಳಾಗಿದ್ದ  ಶಿವಕುಮಾರ ಸಾಲಗೇರಿ, ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದ ಸೋಮಶೇಖರ್ ಹಾಗೂ ತಹಶೀಲ್ದಾರರು ಸೇರಿ ಈ ಗ್ರಾಮದಲ್ಲಿ ಲಸಿಕೆ ಹಾಕಿಸಿದ್ದರೂ ಸಂಪೂರ್ಣವಾಗಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿರಲಿಲ್ಲ. ಕೆಲವರು ಅಡ್ಡ ಪರಿಣಾಮಕ್ಕೆ ಹಿಂಜರಿದು ಲಸಿಕೆಯನ್ನು ಹಾಕಿಸಿಕೊಳ್ಳಲು  ಹಿಂದೇಟು ಹಾಕಿದ್ದರು, ಸದಸ್ಯ ಶರಣಗೌಡ ಅವರು ಇಂದು ಗುರುವಾರ ಬೆಳಗಿನಿಂದಲೇ ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆ  ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ರೈತರಲ್ಲಿಗೆ ಹೋಗಿ ಲಸಿಕೆ ಕುರಿತು ಅರಿವು ಮೂಡಿಸಿ ಮಹತ್ವ ತಿಳಿಸುತ್ತಾ, ರೈತರಿಗೆ ಕೂಲಿ ಕಾರ್ಮಿಕರಿಗೆ ಲಸಿಕೆ ಹಾಕಿಸಿ ಈ ಗ್ರಾಮವನ್ನು ಸಂಪೂರ್ಣವಾಗಿ ಕೊರೊನಾ  ಲಸಿಕೆ ಹಾಕಿಸಿಕೊಂಡ ಗ್ರಾಮವನ್ನಾಗಿ ಮಾಡಿದ್ದಾರೆ.  

ಈ ಕುರಿತು ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಪ್ರಶಂಸಿಸಿದ್ದು, ಇವರ ಕಾರ್ಯವೈಖರಿ ಜನಪರ ಕಾಳಜಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮಾದರಿಯಾಗಲಿ, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು, ಕರೋನ ರೋಗದಿಂದ ರಕ್ಷಿಸಿಕೊಂಡು, ಈ ದೇಶವನ್ನು ಕೊರೊನಾ ಮುಕ್ತ ದೇಶವಾಗಲಿ, ಗ್ರಾಮ ಪಂಚಾಯಿತಿ ಸದಸ್ಯ ಶರಣಗೌಡರು ಇನ್ನೂ ಇಂತಹ ಹತ್ತಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಲೆಂದು ಪತ್ರಿಕೆ ಹಾರೈಸುತ್ತದೆ.  ಈ ಸಂದರ್ಭದಲ್ಲಿ ಅಊಓ ಯಮನೂರ​‍್ಪ, ಗ್ರಾಮಪಂಚಾಯತಿಯ ಸಿಬ್ಬಂದಿಗಳಾದ ಪ್ರಕಾಶ್ , ಗೌಡ್ರು ಪ್ರಶಾಂತ್ ಗೌಡ, ಮಂಜುನಾಥ, ಇದ್ದರು. 


ಸುದ್ದಿ ಓದಿ