ಮುಂಡರಗಿ

ಭಕ್ತರ ಬೃಹತ್ ಪ್ರತಿಭಟನಾ ಸತ್ಯಾಗ್ರಹ

ಭಕ್ತರ ಬೃಹತ್ ಪ್ರತಿಭಟನಾ ಸತ್ಯಾಗ್ರಹ

ಮುಂಡರಗಿ : ಶಿಂಗಟಾಲೂರ ಏತ ನೀರಾವರಿ ಯೋಜನೆಯ ನೀರು ನಿಲುಗಡೆಯಿಂದ ಮುಳುಗಡೆ ಪ್ರದೇಶಕ್ಕೆ ಒಳಗೊಂಡಿರುವ ತಾಲೂಕಿನ ಐತಿಹಾಸಿ ಹಿನ್ನೇಲೆಯನ್ನು ಉಳ್ಳಂತಹ ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನ, ಬಿದರಳ್ಳಿಯ ಬಿದರಳ್ಳೆಮ್ಮ (ರೇಣುಕಾದೇವಿ) ದೇವಸ್ಥಾನ, ವಿಠ್ಠಲಾಪೂರದ ರಸಲಿಂಗ ದೇವಸ್ಥಾನಗಳ ಉಳುವಿಗಾಗಿ ಆಗ್ರಹಿಸಿ, ತಾಲೂಕು ತಹಶೀಲ್ದಾರರ ಕಛೇರಿಯ ಮುಂದೆ ಗ್ರಾಮಸ್ಥರು ಹಾಗೂ ದೇವಸ್ಥಾನದ ಭಕ್ತರು ಬೃಹತ್ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. 

ಶಿಂಗಟಾಲೂರ ಏತ ನೀರಾವರಿ ಯೋಜನೆಯ ಅಡಿಯಲ್ಲಿ ತಾಲೂಕಿನ ಹಮ್ಮಿಗಿ ಗ್ರಾಮದ ಹತ್ತಿರ ಬಾಂದರ ನಿರ್ಮಿಸುವದರ ಮೂಲಕ ಸುಮಾರು 18 ಟಿ.ಎಂ.ಸಿ. ನೀರು ಸಂಗ್ರಹ ಮಾಡುವದಕ್ಕೆ ಮುಂದಾಗಿದ್ದರಿಂದ ಮುಂಡರಗಿ ತಾಲೂಕಿನ ಬಿದರಳ್ಳಿ, ಗುಮ್ಮಗೋಳ ಹಾಗೂ ವಿಠ್ಠಲಾಪೂರ ಗ್ರಾಮಗಳು ಮುಳುಗಡೆ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಹಾಗೂ ಹಿನ್ನೀರಿನಲ್ಲಿ ಅಂತರಾಜ್ಯದ ಭಕ್ತರನ್ನು ಹೊಂದಿರುವಂತಹ ಹಾಗೂ ಪೂರಾತನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಬಿದರಳ್ಳೆಮ್ಮ (ರೇಣುಕಾದೇವಿ) ದೇವಸ್ಥಾನ, ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನ, ವಿಠ್ಠಲಾಪೂರದ ರಸಲಿಂಗ ದೇವಸ್ಥಾನಗಳು ಮುಳುಗಡೆಯಾಗುತ್ತಿವೆ. ಇದರಿಂದ ಕೋಟ್ಯಾಂತರ ಭಕ್ತರ ಭಕ್ತಿ ಭಾವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಆ ದೇವಾಲಯಗಳನ್ನು ಉಳಿಸಿಕೊಳ್ಳುವುದು ಅವಶ್ಯವಾಗಿದೆ. 

ಅಲ್ಲದೇ ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನವೂ ವಿಶಿಷ್ಟ ವಾಸ್ತುಶಿಲ್ಪ ಹೊಂದಿದೆ, ಇಂತಹ ಐತಿಹಾಸಿಕ ಹಾಗೂ ವೈಶಿಷ್ಠೆತೆಯನ್ನು ಹೊಂಡಿರುವಂತಹ ಬಿದರಳ್ಳಿಯ ಬಿದರಳ್ಳೆಮ್ಮ (ರೇಣುಕಾದೇವಿ) ದೇವಸ್ಥಾನ, ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನ, ವಿಠ್ಠಲಾಪೂರದ ರಸಲಿಂಗ ದೇವಸ್ಥಾನಗಳ ಸಂರಕ್ಷಣೆಗಾಗಿ ರಾಜ್ಯ ಸರ್ಕಾರಕ್ಕೆ ಹಾಗೂ ಭಾರಿ ನೀರಾವರಿ ಇಲಾಖೆಗೂ ಮತ್ತು ಪುನರ್ ವಸತಿ ಇಲಾಖೆಗಳಿಗೆ ಗ್ರಾಮಸ್ಥರು ಅನೇಕ ಭಾರಿ ಮನವಿ ಸಲ್ಲಿಸುವದರ ಮೂಲಕ ಒತ್ತಾಹಿಸಿದರು ಸಹ ಪ್ರಯೋಜನವಾಗಿರುವುದಿಲ್ಲಾ. 

ಈ ಕುರಿತು ಹೋರಾಟದ ನೇತೃತ್ವ ವಹಿಸಿದ್ದ ವೈ.ಎನ್‌.ಗೌಡರ ಮಾತನಾಡಿ, ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹಿನ್ನೀರಿನಿಂದ ಮುಳುಗಡೆಯಾಗುತ್ತಿರುವಂತಹ ಗೂಮ್ಮಗೋಳದ ಗೋಣಿಬಸವೇಶ್ವರ ದೇವಾಲಯವು "ಪುಷ್ಕರ್ಣ ಶೈಲಿಯಾ ಇಂಡೋಗ್ರೀಕ್ ಮಾದರಿಯ ಐತಿಹಾಸಿ ದೇವಾಲಯವಾಗಿದ್ದು ದಕ್ಷೀಣ ಭಾರತದ 2ನೇ ದೇವಾಲಯವಾಗಿದೆ. ಹಾಗೇ ಬಿದರಳ್ಳಿಯ ಬಿದರಳ್ಳೆಮ್ಮ (ರೇಣುಕಾದೇವಿ) ದೇವಸ್ಥಾನ, ಹಾಗೂ ವಿಠ್ಠಲಾಪೂರದ ರಸಲಿಂಗ ದೇವಸ್ಥಾನಗಳು ಪೂರಾತನ ಇತಿಹಾಸದ ಹಿನ್ನೇಳೆಯಲ್ಲಿ ಲಕ್ಷಾಂತರ ಭಕ್ತ ಸಮುಹವನ್ನು ಹೊಂದಿದ್ದು, ಆದ್ದರಿಂದ ಸರ್ಕಾರವು ಕುಡಲ ಸಂಗಮದಲ್ಲಿ ಜಗಜ್ಯೋತಿ ಬಸವೇಶ್ವರ ಅಕ್ಯೆ ಸ್ಥಳವನ್ನು ಯಾವರೀತಿ ಸುತ್ತಲು ತಡೆ ಗೋಡಿ ನಿರ್ಮಿಸಿ ಭಕ್ತರಿಗೆ ತೂಗು ಸೇತುವೆಯ ಮೂಲಕ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟಿದೆಯೋ ಅದೇ ರೀತಿ ಇಂತಹ ವಾಸ್ತು ಶಿಲ್ಪತ ಕಲೆಯನ್ನು ಹೊಂದಿರುವಂತಹ ಮೂರು ದೇವಸ್ಥಾನಗಳನ್ನು ತೂಗು ಸೇತುವೆ ಮಾಡುವದರೊಂದಿಗೆ ಸುತ್ತಲೂ ತಡೆಗೋಡೆ ನಿರ್ಮಿಸಿ ದೇವಸ್ಥಾನವನ್ನು ಸಂರಕ್ಷಿಸಬೇಕು. 

ಇಂದಿನ ಸರ್ಕಾರ ಹಿಂದೂ ದೇವರು ಹಾಗೂ ಮೂರ್ತಿಗಳಿವೆ ಎಂದು ಸಂಶೋಧನೆ ಹೆಸರು ಹೇಳಿಕೊಂಡು ಸಮಾಜದಲ್ಲಿದ್ದ ಸೌಹಾರ್ಧತೆಯ ಭಾವನೆಗಳನ್ನು ಕದಳಿಸುವಂತಹ ಕೆಲಸ ಮಾಡುವದನ್ನು ಬಿಟ್ಟು ಕಣ್ಣು ಎದುರಿಗೆ ಐತಿಹಾಸಿಕ ಕಲೆಯನ್ನು ಮತ್ತು ಇತಿಹಾಸವನ್ನು ಹೊಂದಿರುವಂತಹ ಹಿಂದೂ ದೇವಾಲಯಗಳು ನಶಿಸಿ ಹೋಗುವ ಹಂತಕ್ಕೆ ಬಂದಿವೆ. ಅದನ್ನು ಬಿಟ್ಟು ಕಣ್ಣುಗಳ ಎದುರಿಗೆ ಇರುವ ದೇವಸ್ಥಾನವನ್ನು ಸಂರಕ್ಷಣೆ ಮಾಡುವದಕ್ಕೆ ಮುಂದಾಗಬೇಕು. ಎಂದು ಒತ್ತಾಹಿಸಿದರು. 

ಸರ್ಕಾರವು 2010 ರಲ್ಲಿ ಏತ ನೀರಾವರಿ ಯೋಜನೆಗೆ ರೈತರ ಭೂಮಿ ಹಾಗೂ ಗೂಮ್ಮಗೋಳ, ಬಿದರಹಳ್ಳಿ, ಹಾಗೂ ಹೂವಿನ ಹಡಗಲಿ ತಾಲೂಕಿನ ಅಲ್ಲಿಪೂರ ಗ್ರಾಮಗಳನ್ನು ಸಹ ಸ್ವಾಧೀನ ಪಡೆಸಿಕೊಂಡು ನಂತರ 2012 ರಲ್ಲಿ ರೈತರಿಗೆ ಹಾಗೂ ನಿವಾಸಿ ಕುಟುಂಬಗಳಿಗೆ ಪರಿಹಾಸ  ನೀಡಿದರು, ಆದರೆ ಸ್ಥಳಾಂತರ ಪ್ರದೇಶದ ಹಕ್ಕು ಪತ್ರಗಳನ್ನು 2017ಕ್ಕೆ ನೀಡಿದರು ಅಷ್ಟೋತ್ತಿಗಾಗಲೇ ಸರ್ಕಾರವು ನೀಡಿದಂತಹ ಪರಿಹಾರವನ್ನು ಕುಟುಂಬಸ್ಥರು ಖರ್ಚ್ಚು ಮಾಡಿಕೊಂಡಿದ್ದರು, ಅಲ್ಲದೆ ಅತ್ಯಂತಹ ಕಡಿಮೇ ಹಣದ ಪರಿಹಾರವನ್ನು ನೀಡಿದ್ದಾರೆ, ಆದರು ಸಹ ನಾವು ಮೌನವಾಗಿದ್ದೇವು, ಆದರೆ ದೈವಿ ಸಂಬಂಧ ನಂಟು ಹೊಂದಿರುವಂತಹ ನಮ್ಮ ಆರಾಧ್ಯ ದೇವರ ದೇವಸ್ಥಾನವನ್ನು ಇಂದು ಕಳೆದುಕೊಳ್ಳುತ್ತಿರುವುದು ಅತ್ಯಂತಹ ನೋವಿನ ಸಂಗತಿಯಾಗಿದೆ ಹಾಗೂ ನಮಗೆ ದುಖಃವು ಸಹ ಬರುತ್ತಿದೆ. 

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರಾದ ರಾಮಣ್ಣ ಲಮಾಣಿ, ಬಿದರಳ್ಳಿಯ ಬಿದರಳ್ಳೆಮ್ಮ (ರೇಣುಕಾದೇವಿ) ದೇವಸ್ಥಾನ, ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನಗಳನ್ನು ಸಂರಕ್ಷಣೆಗಾಗಿ ಆಯಾ ಗ್ರಾಮದ ಗ್ರಾಮಸ್ಥರ ಅಭಿಪ್ರಾಯದಂತೆ ಎರಡು ದೇವಸ್ಥಾನಗಳಿಗೆ ತಡೆಗೋಡೆ ನಿರ್ಮಿಸುವದಕ್ಕೆ ಏತ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಸರ್ವೇ ಮಾಡಿಸಿ ಸೂಮಾರು 35 ಕೋಟಿ ರೂ. ಅಂದಾಜು ಪ್ರತಿ ನೀಲಿ ನಕ್ಷೆ ತಯಾರಿಸಿ ಈಗಾಗಲೇ ಮುಖ್ಯಮಂತ್ರಿಗಳಿಗೂ ಹಾಗೂ ಭಾರಿ ನೀರಾವರಿ ಮಂತ್ರಿಗಳಿಗೆ ಸಲ್ಲಿಸುವದರ ಮೂಲಕ ಕ್ರೀಯಾ ಯೋಜನೆ ಅನುಮೋಧನೆಗೆ ಒತ್ತಾಯ ಮಾಡಿದ್ದೇನೆ, ಹಾಗೇ ಮುಖ್ಯ ಮಂತ್ರಿಗಳು ಮತ್ತು ನೀರಾವರಿ ಮಂತ್ರಿಗಳು ಸಹ ಆಶ್ವಾಸನೆ ನೀಡಿದ್ದಾರೆ, ಶೀಗ್ರದಲ್ಲಿಯೇ ಸರ್ಕಾರದ ಅನೂಮೋಧನೆ ಪಡೆಯುವದಕ್ಕೆ ಪ್ರಮಾಣಿ ಪ್ರಯತ್ನ ಮಾಡುತ್ತಿದ್ದೆನೆ. 

ಆದರೆ ಹೋರಾಟಗಾರರು ಮತ್ತು ಗ್ರಾಮಸ್ಥರು, ತಡೆಗೋಡಿಯೊಂದಿಗೆ ತೂಗು ಸೇತುವೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರಿಂದ ತಕ್ಷಣ ಏತ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹೇಳಿ ಹೊಸ ಕ್ರೀಯಾ ಯೋಜನೆ ರೂಪಿಸಿ ಶೀಗ್ರವೇ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ತರುವದರ ಮೂಲಕ ಆದಷ್ಟು ಬೇಗ ಅಭಿವೃದ್ಧಿಯ ಕಾಮಗಾರಿ ಕೆಲಸ ಪ್ರಾರಂಭಿಸುವದಕ್ಕೆ ಪ್ರಯತ್ನಿಸುತ್ತೆನೆ, ಒಂದು ವೇಳೆ ಕೆಲಸ ಆಗದಿದ್ದರೆ ನಾನು ಸಹ ಶಾಸಕನೆಂಬುವದನ್ನು ಮರೆತು ಯೋಜನೆ ಅನುಷ್ಠಾನಕ್ಕೆ ಹಾಗೂ ಮೂರು ದೇವುಸ್ಥಾನಗಳ ಉಳುವಿಗೆ ನಿಮ್ಮೊಂದಿಗೆ ಹೋರಾಟ ಕುಳಿತುಕೊಳ್ಳುತ್ತೇನೆ. ಅದರಲ್ಲಿಯು ಪ್ರಮುಖವಾಗಿ ಮೂರು ಗ್ರಾಮಗಳ ಆರಾಧ್ಯ ದೇವರುಗಳ ದೇವಸ್ಥಾನಗಳನ್ನು ಉಳಿಸುವದರೊಂದಿಗೆ ಸಂರಕ್ಷಿಸುವ ಕೆಲಸವನ್ನು ಅತ್ಯಂತಹ ಶೀಘ್ರದಲ್ಲಿ ಸರ್ಕಾರದ ಮೇಲೆ ಒತ್ತಡ ತರುವದರ ಮೂಲಕ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸುತ್ತೆನೆ ಎಂದು ಶಾಸಕರಾದ ರಾಮಣ್ಣ ಲಮಾಣಿ ಹೇಳಿದರು. 

ನಗರದ ಕೆ.ಪಿ.ಟಿ.ಸಿ.ಎಲ್ ಹತ್ತೀರದ ಗಣೇಶ ದೇವಸ್ಥಾನದಿಂದ ಪ್ರಾರಂಭಗೊಂಡ ಗುಮ್ಮಗೋಳ, ಬಿದಹಳ್ಳಿ ಮತ್ತು ವಿಠ್ಠಲಾಪೂರ ಗ್ರಾಮಸ್ಥರ ಹಾಗೂ ದೇವುಸ್ಥಾನದ ಭಕ್ತರ ಪ್ರತಿಭಟನೆಯು ಮುಂಡರಗಿ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ನಂತರ ತಹಶೀಲ್ದಾರ ಕಛೇರಿ ತಲುಪುವದರೊಂದಿಗೆ ಶಾಸಕರಾದ ರಾಮಣ್ಣ ಲಮಾಣಿ, ಹಾಗೂ ತಹಶೀಲ್ದಾರರಾದ ಡಾ. ಆಶಪ್ಪ ಪೂಜಾರ, ಹಾಗೂ ಹುಲಿಗುಡ್ಡ ಏತ ನೀರಾವರಿ ಇಲಾಖೆಯ ಪುನರ್ ವಸತಿ ವಿಭಾಗದ  ಅಧಿಕಾರಿಗಳಾದ ಬಿ.ವಿನಯಕುಮಾರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  

ಪ್ರತಿಭಟನೆಯಲ್ಲಿ ಗೂಮ್ಮಗೋಳದ ವೇ.ಮು, ಚಂದ್ರಶೇಖರ ಶಿವಾರ್ಚಾಯ ಸ್ವಾಮಿಗಳು, ರವೀಂದ್ರಗೌಡ ಪಾಟೀಲ, ಸತ್ಯಪ್ಪ ಕುರಗೋಡ, ಪರಸಪ್ಪ ಆಣೆಪ್ಪನವರ, ಸತ್ಯಪ್ಪ ನೀಲಗಾರ, ಮಂಜಪ್ಪ ಭಜಂತ್ರಿ, ಶರಣಪ್ಪ ಬಡ್ನಿ, ಪಕ್ಕಣ್ಣ ಗುಜ್ಜಲ, ನಿಂಗರಾಜ ಬಸೆಗೌಡ್ರ, ಕುಮಾರಗೌಡ ಪಾಟೀಲ, ಮಂಜಪ್ಪ ಹಾರೋಗೇರಿ, ಕುಮಾರ ಅಂಗಡಿ, ಚನ್ನಬಸಪ್ಪ ಹೂಗಾರ, ನಾಗರಾಜ ಮಾಗಳದ, ಡಿ.ಡಿ. ಮೋರನಾಳ, ದೃವಕುಮಾರ ಹೊಸಮನಿ, ಶ್ರೀಕಾಂತಗೌಡ ಪಾಟೀಲ, ಶಾಂತಪ್ಪ ರಾಟಿ, ವಿರುಪಾಕ್ಷ ಜೋಗೇರ, ರಾಘವೇಂದ್ರ ಮತ್ತೂರು, ರಾಜು ಡಾವಣಗೇರಿ, ರಾಮು ಕಲಾಲ, ರವೀಂದ್ರಗೌಡ ಪಾಟೀಲ, ಶೇಖಪ್ಪ ಕುರುಬರ, ಶಿವನಗೌಡ ಪಾಟೀಲ, ಶಿವಕುಮಾರಗೌಡ ಪಾಟೀಲ,  ಶೇಖಪ್ಪ ಗುಜ್ಜಟ್ಟಿ, ರೇವಣಪ್ಪ ಬೂದಿಹಾಳ, ಬಸವರಾಜ ಪೂಜಾರ, ದೇವಪ್ಪ ಬಾಳಿಕಾಯಿ, ಮುದಿಯಪ್ಪ ಕರಡಿ, ಕಾಳಪ್ಪ ತಳವಾರ, ರೇವಣಶಿದ್ಧಪ್ಪ ಹೊಸಳ್ಳಿ,  ಗಣೇಶ ಗುತ್ತಲ, ಬಿ.ವ್ಹಿ. ಪತ್ತಾರ, ಕೋಟ್ರೇಶ ಬಾಳಿ, ಸುಭಾಷ ಬೆಳ್ಳಟ್ಟಿ, ಯಲ್ಲಪ್ಪ ರೀತ್ತಿ, ಮುಂತ್ತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ