ಸಿಂಧಗಿ

ಸಂವಿಧಾನ ಅರಿವಿಗಾಗಿ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಮ್ಯಾರಾಥನ್ ಓಟ

ಸಂವಿಧಾನ ಅರಿವಿಗಾಗಿ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಮ್ಯಾರಾಥನ್ ಓಟ

ಸಿಂದಗಿ:  ಪಟ್ಟಣದ ಪ್ಲೈಯ್ ಸ್ಪೋಟ್ಸ್  ಅಸೋಸಿಯೇಷನ್ ಹಾಗೂ ಗಣೇಶ ಕನ್ಸಸ್ಟ್ರ್ಕ್ಷನ್ ಜಂಟಿ ನೇತೃತ್ವದಲ್ಲಿ ನವೆಂಬರ್ 26ರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಅರಿವಿಗಾಗಿ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಮ್ಯಾರಾಥನ್ ಓಟ ಹಮ್ಮಿಕೊಳ್ಳಲಾಗಿದೆ ಎಂದು ಪ್ಲೈಯ್ ಸ್ಪೋಟ್ಸ್  ಅಸೋಸಿಯೇಷನ್ ಅಧ್ಯಕ್ಷ ಪರಶುರಾಮ ಕೂಚಬಾಳ ತಿಳಿಸಿದ್ದಾರೆ. 

        ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಓಟದ ಪ್ರಥಮ ಬಹುಮಾನ 25000ರೂ ಹಾಗೂ ದ್ವೀತಿಯ ಬಹುಮಾನ 11000ರೂ ಮತ್ತು ಪಾರಿತೋಷಕ ನೀಡಲಾಗುವುದು ಅಲ್ಲದೆ ಸದರಿ ಓಟದಲ್ಲಿ ಪಾಲ್ಗೊಂಡ ಓಟಗಾರರಿಗೆ ಆಯೋಜಕರಿಂದ ಅಭಿನಂದನಾ ಪತ್ರ ಹಾಗೂ ಟೀ-ಶರ್ಟ್ ನೀಡಲಾಗುತ್ತದೆ. ಓಟದಲ್ಲಿ ಪಾಲ್ಗೋಳಲು ದಿನಾಂಕ 23 ನವೆಂಬರ್ 2023 ಸಾಯಂಕಾಲ 5 ಗಂಟೆ ವರೆಗೆ ಹೆಸರು ನೊಂದಣಿಗೆ  ಅವಕಾಶವಿದ್ದು ಆಸಕ್ತರು ನೊಂದಣಿ ಮಾಡಿಕೋಳಬೇಕಾಗಿ ವಿನಂತಿ. ಹೇಚಿನ ಮಾಹಿತಿ ಮತ್ತು ನೊಂದಣಿಗಾಗಿ ನಿಂಗರಾಜ ಗುಡಿಮನಿ 9663995571 ಶಿವಾನಂದ ಆಲಮೇಲ 9901447503 ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ