ನಗರವಾಸಿಗಳ ಮನೆಗೆದ್ದ ಗಂಡು ಮೆಟ್ಟಿದ ಕಲೆ ಬಯಲಾಟ
ಬಳ್ಳಾರಿ25: ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್ (ರಿ) ಲಕ್ಷ್ಮೀನಗರ ಕ್ಯಾಂಪ್,ಮುದ್ದಟನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಾಮಾನ್ಯ ಯೋಜನೆ ಅಡಿ ಬಯಲಾಟ ಜಾನಪದ ರಂಗೋತ್ಸವ ಎಂಬ ಕಾರ್ಯಕ್ರಮವನ್ನು ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗ ತೋರಣ ಕಾರ್ಯದರ್ಶಿಗಳಾದ ಪ್ರಭುದೇವ ಕಪ್ಪಗಲ್ ರವರು ಮಾತನಾಡುತ್ತಾ ಬಯಲಾಟವು ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಕಲೆ ಇದಕ್ಕೆ ಪ್ರೋತ್ಸಾಹ ಹೆಚ್ಚಿನ ಮಟ್ಟದಲ್ಲಿ ಅಗತ್ಯತೆ ಇದೆ ಆಧುನಿಕ ಸ್ಪರ್ಶವನ್ನು ಬಯಲಾಟಕ್ಕೆ ನೀಡಬೇಕು ಬಯಲಾಟವನ್ನು ಕಲಿಯುವುದಕ್ಕೆ ಶಾಸ್ತ್ರೀಯ ಚೌಕಟ್ಟು ಮುಖ್ಯವಾಗಿ ಇದೆ. ಇದನ್ನು ಅಳವಡಿಸಿಕೊಂಡು ಕಲಿತರೆ ಯಶಸ್ವಿಯಾಗುತ್ತದೆ ಕರಾವಳಿ ಭಾಗದಲ್ಲಿ ಶಿವರಾಮ ಕಾರಂತರು ಯಕ್ಷಗಾನವನ್ನು ಹಳ್ಳಿಹಳ್ಳಿಗೂ ಪರಿಚಯಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು ಇದೇ ರೀತಿ ಬಯಲಾಟವು ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹೇಳಿದರು.
ಅಕ್ಷರ ಜ್ಞಾನ ಇಲ್ಲದೆ ಮತ್ತು ಅಕ್ಷರ ಕಲಿತ ಬುದ್ಧಿಜೀವಿಗಳಿಗೆ ಇಲ್ಲದ ಬದ್ಧತೆ ಬಯಲಾಟದ ಕಲಾವಿದರಿಗೆ ಹಳ್ಳಿಗಳಲ್ಲಿ ಹೊಲದ ಕೆಲಸವನ್ನು ಮುಗಿಸಿಕೊಂಡು ಬಂದು ಬಯಲಾಟದ ಪಾತ್ರದಲ್ಲಿ ಬಹಳ ನಿಷ್ಠೆಯಿಂದ ಅಭಿನಯಿಸುತ್ತಾರೆ ಇವರ ಆಸಕ್ತಿಗೆ ಮೆಚ್ಚಲೇಬೇಕು ಇದನ್ನು ನೋಡಿದಾಗ ನಮಗೆ ಹೆಮ್ಮೆ ಅನಿಸುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಮೋಹನರೆಡ್ಡಿ ಅವರು ಹೇಳಿದರು ಅನೇಕ ರಂಗ ಕಲೆಗಳನ್ನ ಆಸಕ್ತಿಯಿಂದ ಕಲಿತೆ ತೊಗಲು ಗೊಂಬೆ ಆಟ, ನಾಟಕ, ಬಯಲಾಟ ಹೀಗೆ ಮುಂತಾದ ಕಲೆಗಳಲ್ಲಿ ಯಶಸ್ಸು ಕಂಡ ಬಯಲಾಟ ಎನ್ನುವಂತಹ ಕಲೆ ಬಹಳ ಉತ್ಕೃಷ್ಟವಾದಂತಹ ಕಲೆ ಇದನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುವ ಏಕೈಕ ಜಿಲ್ಲೆ ನಮ್ಮ ಬಳ್ಳಾರಿ ಎಂದು ಅಂತರಾಷ್ಟ್ರೀಯ ತೊಗಲು ಗೊಂಬೆ ಕಲಾವಿದರಾದ ನಾಡೋಜ ಬೆಳಗಲ್ ವೀರಣ್ಣ ರವರು ಹೇಳಿದರು
ಗ್ರಾಮೀಣ ಪ್ರದೇಶದಲ್ಲಿ ಅಲ್ಲದೆ ನಗರದಲ್ಲಿ ಬಯಲಾಟ ಪ್ರದರ್ಶನ ನಡೆಯಬೇಕು ಎನ್ನುವ ಛಲ ಮತ್ತು ಹಠವನ್ನು ಈ ಸಂಸ್ಥೆ ಹೊಂದಿದೆ ಈ ಒಂದು ಮಾರ್ಗದಲ್ಲಿ ಈ ಸಂಸ್ಥೆಯು ಯಶಸ್ವಿಯಾಗುತ್ತಿದೆ. ಬಯಲಾಟ ದೇಶವಿದೇಶದಲ್ಲಲ್ಲಿ ಪ್ರದರ್ಶನ ಕಾಣಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಉಪ ನಿರ್ದೇಶಕರು ಕೊಟ್ರ್ಪ ಚೋರನೂರು ಇವರು ಹೇಳಿದರು. ಹಳ್ಳಿಯಲ್ಲಿ ಬಯಲಾಟದ ಪ್ರದರ್ಶನ ನಡೆಯುತ್ತಿದೆ ಎಂದರೆ ಎಷ್ಟೊಂದು ಜನ ಸೇರುತ್ತಾರೋ ಅದೇ ರೀತಿ ನಗರದಲ್ಲಿ ಸಹ ಸೇರುತ್ತಿರುವುದು ಬಹಳ ಸಂತೋಷದ ವಿಷಯ ಬಯಲಾಟವನ್ನು ನೋಡಿದ ಕ್ಷಣ ಹುಡುಗ ಸಹ ಹೆಜ್ಜೆ ಹಾಕಲು ಪ್ರಾರಂಭಿಸುತ್ತಾನೆ ಇದು ಬಯಲಾಟಕ್ಕಿರುವ ತಾಕತ್ತು ಎಂದು ವಿಶ್ವವಾಣಿ ಪತ್ರಕರ್ತರಾದ ಸಿದ್ದರಾಮಯ್ಯ ಸಿರಿಗೇರಿಯವರು ಹೇಳಿದರು
ವೇದಿಕೆ ಮೇಲೆ ಮಣಿಕಂಠ ಕಾಟನ್ ಮಿಲ್ ನ ಬಿ.ಎ.ಬಸವರಾಜ ಎಸ್.ಎಲ್.ಬಿ. , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ರಮೇಶ್ ಗೌಡ ಪಾಟೀಲ್, ಕಾಟನ್ ಮಿಲ್ ಅಸೋಸಿಯೇಷನ್ ಅಧ್ಯಕ್ಷರಾದ ದಂಡಿನ ತಿಪ್ಪಯ್ಯ, ಕಾಟನ್ ಮಿಲ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಆರ್.ನಾಗರಾಜ, ಮಾಜಿ ಮಂಡಲ ಜಂಗಮರ ಹೊಸಹಳ್ಳಿ ಅಧ್ಯಕ್ಷರಾದ ಬಿ.ಕೆ.ದೊಡ್ಡ ಬಸಯ್ಯಸ್ವಾಮಿ, ಇವರು ಉಪಸ್ಥಿತರಿದ್ದರು
ನಂತರ ಶ್ರೀ.ಹೆಚ್.ಪಾಂಡುರಂಗಪ್ಪ, ಉಷಾರಾಣಿ, ಅಂಬುಜಮ್ಮ, ಅಂಜಿನಮ್ಮ, ಇ.ಚಿದಾನಂದ ಹನುಮಾವಧೂತ, ಮಂಜುನಾಥ ಗೋವಿಂದವಾಡ, ಓಂಕಾರಮ್ಮ, ಗೀತಾ, ಇವರಿಗೆ ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ವತಿಯಿಂದ ಕಲಾವಿದರಂಗ ಗೌರವ ಸನ್ಮಾನವನ್ನು ವೇದಿಕೆ ಮೇಲೆ ಇರುವ ಗಣ್ಯರು ಹಾಗೂ ಟ್ರಸ್ಟ್ ಅಧ್ಯಕ್ಷರು
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಚನ ಗಾಯನವನ್ನ ಶರಣಯ್ಯ ಸ್ವಾಮಿ ಕಲಾತಂಡ ಸಿದ್ದರಾಮಪುರ.ತಬಲಾದಲ್ಲಿ ತಿಪ್ಪೇಸ್ವಾಮಿ ಕುಡಿತಿನಿ, ಕುಮಾರಗೌಡ ಅಮರಾಪುರ, ಟಿ.ಸಣ್ಣ ಹೊನ್ನೂರ್ ಸಾಬ್ ಶಂಕರಬಂಡೆ ನೆರೆವೇರಿಸಿಕೊಟ್ಟರು. ಮುಂಬೇಳ ಕಮಟವನ್ನು ವಿ ಈರಣ್ಣ ಕಲಾತಂಡ ಕಂಪ್ಲಿ ಸಣ್ಣ ಮುದುಕನ ಗೌಡ ದಾಸಾಪುರ ಷಣ್ಮುಖಪ್ಪ ಕೊಂಚಗೇರಿ ಹೆಚ್ ನಾಗರಾಜ ಹಾಗೂ ಹೆಚ್ ತಾಯಪ್ಪ ಇವರು ನೆರವೇರಿಸಿಕೊಟ್ಟರು. ನಂತರ ಜಿ.ನಾಗನಗೌಡ ಕಲಾ ತಂಡದವರು "ರಾಮ ರಾವಣರ ಯುದ್ಧ" ಎನ್ನುವ ಬಯಲಾಟದ ಪ್ರಸಂಗವನ್ನು ಪ್ರಸ್ತುತಪಡಿಸಿದರು
ಕಾರ್ಯಕ್ರಮದ ನಿರೂಪಣೆ ವಿಷ್ಣು ಹಡಪದ ಮತ್ತು ಜಿ.ಕೆ.ತಿಪ್ಪೇಸ್ವಾಮಿ ವಿಠಲಾಪುರ ಸ್ವಾಗತ ರಮಣಪ್ಪ ಭಜಂತ್ರಿ ವಂದನಾರೆ್ಣಯನ್ನು ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ನ ಅಧ್ಯಕ್ಷ ಎಚ್.ತಿಪ್ಪೇಸ್ವಾಮಿ ನೆರವೇರಿಸಿಕೊಟ್ಟರು. ಪುರುಷೋತ್ತಮ್ ಹಂದ್ಯಾಳು, ತೊಗಲ್ ಗೊಂಬೆ ಹೊನ್ನೂರ್ ಸ್ವಾಮಿ, ಸುಬ್ಬಣ್ಣ, ಲಕ್ಷ್ಮೀನಾರಾಯಣ, ಹೆಚ್,ನವೀನ್ ಕುಮಾರ್ ಕಾರ್ಯದರ್ಶಿ, ಹೆಚ್ ಮೋಹನ್ ಕುಮಾರ್, ವೆಂಕಟೇಶ್ ಕಂಪ್ಲಿ. ಮತ್ತಿತರರು ಪಾಲ್ಗೊಂಡಿದ್ದರು.