ನಿವೃತ್ತಿ: ಯೋಧ ರಮೇಶಗೆ ಅದ್ದೂರಿ ಸ್ವಾಗತ
ಇಂಡಿ: ಕಳೆದ 28 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ಯೋಧ ರಮೇಶ ಪಾಂಡು ರಾಠೋಡ ಅವರಿಗೆ ಇಂಡಿ ನಗರದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಶನಿವಾರ ಯೊಧ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ, ಪಟ್ಟಣದ ಜನರು ಹಾಗೂ ಇಂಗಳಗಿ ತಾಂಡಾದ ಸಾರ್ವಜನಿಕರು ಅವರನ್ನು ತೆರೆದ ವಾಹನದಲ್ಲಿ ಏರಿಸಿ ಮೆರವಣಿಗೆ ಮಾಡಿದರು. ತಾಂಡಾದ ಮಹಿಳೆಯರು ಕುಂಭ ಮೆರವಣಿಗೆ ಮೂಲಕ ಯೋಧನನ್ನು ಸ್ವ ಗ್ರಾಮಕ್ಕೆ ಸ್ವಾಗತಿಸಿ, ಗೌರವಿಸಿದರು.
ಇಂಡಿ ಪಟ್ಟಣದಿಂದ ಇಂಗಳಗಿ ಗ್ರಾಮದವರೆಗೆ ಸುಮಾರು 06.ಕಿ.ಮೀ ಯೊಧನಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
ಇಂಡಿಯಲ್ಲಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಸೇರಿದಂತೆ ನಗರದ ನಾಗರಿಕರು ಯೋಧನಿಗೆ ಸತ್ಕರಿಸಿ ಗೌರವಿಸಿದರು.
ಮೆರವಣಿಗೆಯಲ್ಲಿ ಸಚಿನ್ ರಾಠೋಡ, ವಿಜಯಕುಮಾರ ರಾಠೋಡ, ಅನೀಲಗೌಡ ಬಿರಾದಾರ, ಶ್ರೀಶೈಲ ಅರ್ಜುಣಗಿ, ಸಂಜು ದಶವಂತ, ಹಣಮಂತ ಗುಡ್ಲ, ಶಾಂತು ಕಂಬಾರ, ನಾಗು ದಶವಂತ, ಅವಿನಾಶ ಬಗಲಿ, ಶಿವು ಬಿಸನಾಳ, ವಿಶ್ವನಾಥ ಚೌಹಾಣ, ಸಂಜಯ್ ಚವ್ಹಾಣ, ಮೋಹನ್ ರಾಠೋಡ, ರಮೇಶ ರಾಠೋಡ, ಮೋಹನ್ ರಾಠೋಡ, ಸುನೀಲ ಚವ್ಹಾಣ, ಸಂಜು ಜಾಧವ, ಸರಜು ಜಾಧವ್, ನಿಂಗಪ್ಪ ರಾಠೋಡ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.