ಮುದ್ದೆಬಿಹಾಲ್

ಅದ್ದೂರಿ ಮೊಹರಂ ಆಚರಣೆ- ಮುದ್ದೇಬಿಹಾಳ

ಅದ್ದೂರಿ ಮೊಹರಂ ಆಚರಣೆ- ಮುದ್ದೇಬಿಹಾಳ

ಮುದ್ದೇಬಿಹಾಳ 17 : ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಬಹುಪಾಲು ಕಡೆ ಮೊಹರಂ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹಿಂದೂ, ಮುಸ್ಲಿಂರೂ ಸೇರಿದಂತೆ ಎಲ್ಲ ಧರ್ಮಗಳ ಜನರು ಒಗ್ಗಟ್ಟಾಗಿ ಭಾವೈಕ್ಯತೆಯಿಂದ ಹಬ್ಬ ಆಚರಿಸಿದರು.  

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೊಹರಂ ಹಬ್ಬದ ನೃತ್ಯದ ಸೊಬಗು, ಗಾಯನ ಎಲ್ಲೆ ಮೀರಿತ್ತು. ಡೋಲಿಗಳ ಮೆರವಣಿಗೆ ಇಡೀ ದಿನ ಶ್ರದ್ಧೆ, ಭಕ್ತಿಯಿಂದ ನಂತರ. ಮೊಹರಂ ಗೀತೆಗೆ ಯುವಕರು ಕುಣಿದು ಕುಪ್ಪಳಿಸಿದರು. ಹರಕೆ ಹೊತ್ತವರು ಹೆಣ್ಣು, ಗಂಡು ಎಂಬ ಭೇದಭಾವವಿಲ್ಲದೆ ಕೆಂಡ ಕಾಯ್ದದ್ದು ನೋಡುಗರ ಗಮನ ಸೆಳೆಯಿತು. 

ಪ್ರತಿ ಡೋಲಿಗಳು ಬಣ್ಣ, ಬಣ್ಣದ ಬಟ್ಟೆ, ಪರಪರಿ, ಪುಷ್ಪಮಾಲೆ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ಭಕ್ತರು ಡೋಲಿಗಳಿಗೆ ಊದೂ, ಕಾಯಿ,  ಸಕ್ಕರೆ ಲಾಬಾನ, ಮಾದಲಿಯ ಬೆಳಗಿ ನೈವೇದ್ಯ ಅರ​‍್ಿಸಿ ಪೂಜೆ ಸಲ್ಲಿಸಿದರು.  

ಡೋಲಿಗಳ ಭಕ್ತರು ವಿಶೇಷ ನೈವೇದ್ಯ ಅರಸಿ ಭಕ್ತಿ ಸಮರ​‍್ಿಸಿದರು. ಹಲವು ಗ್ರಾಮಗಳ ಪ್ರದೇಶದಲ್ಲಿ ಮೊಹರಂ ಹಬ್ಬವು ಸಂಭ್ರಮ ಇಮ್ಮಡಿಸಿತ್ತು. ಕೆಂಡ ಹಾಯ್ದ ಭಕ್ತರು ಹಬ್ಬದ ಸಡಗರ, ಸಂಭ್ರಮ ಹೆಚ್ಚಿತ್ತು. ಎಲ್ಲ ಕಡೆ ಭಕ್ತರು ತನು, ಮನ ಶುದ್ಧಿಯಾಗಿ ಹಸೇನ, ಹುಸೇನಕೀ ದೋಸ್ತೋದಿನ್ ಎನ್ನುತ್ತ ಭಕ್ತಿ ಪರವಶರಾಗಿ ಕೆಂಡ ಹಾಯ್ದರೆ, ಮದರಿ ಗ್ರಾಮದಲ್ಲಿ ಬೆಂಕಿಯಲ್ಲಿ ಕಂಬಳಿ ಹಾಸಿ ದೇವಭಕ್ತರು ಪೂಜಿಸಿದರು. ಹೆಣ್ಣು ಮಕ್ಕಳು, ಪುರುಷರು, ಯುವಕರು, ಯುವತಿಯರು, ಮಹಿಳೆಯರು ಹೊತ್ತುಕೊಂಡು ಕೆಂಡ ಹಾಯ್ದರು. ಡೋಲಿಗಳ ಮೆರವಣಿಗೆ ಆಕರ್ಷಿಸಿತು. ಎಲ್ಲ ಡೋಲಿಗಳು ಭಟ್ಟನ ಕೂಟದಲ್ಲಿ ಒಂದೆಡೆ ಸೇರಿ ಒಗ್ಗಟ್ಟಿನಿಂದ ಹಬ್ಬದ ಆಚರಣೆ ಯಶಸ್ವಿಗೊಳಿಸಿದರು.  

ಇನ್ನು ಸಂಜೆ ಆಗುತ್ತಲೇ ಡೋಲಿಗಳು ನದಿಗೆ ತೆರಳಿದವು. ಡೋಲಿಗಳ ಹಿರಿಯರು, ಮುಖ್ಯ, ಯುವಕರು ಹಬ್ಬ ಶಾಂತಿಯುತವಾಗಿ ಆಚರಿಸಲು ಶ್ರಮಿಸಿದರು. ಕೆಲವು ಕಡೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸ್ ಇಲಾಖೆ ಪಟ್ಟಣದ ಹಿರಿಯರಿಗೆ ತಿಳಿ ಹೇಳಿತ್ತು. ಅದರಂತೆ ಶಾಂತಿಯುತವಾಗಿ ಮೊಹರಂ ಆಚರಣೆ ಮಾಡಿದರು. 


ಸುದ್ದಿ ಓದಿ