ಕರೋನ ಸಂಕಷ್ಟದಲ್ಲಿ ಬಡ ಕುಟುಂಬಗಳಿಗೆ 12 ಸಾಮಗ್ರಿವುಳ್ಳ ಕಿಟ್
ಅಪ್ಪು ಸೇವಾ ಸಮಿತಿಯ ಕಾರ್ಯ ಶ್ಲಾಘನೀಯ: ರಾಜಶೇಖರ ಗೌಡ
ಬಳ್ಳಾರಿ 01: ಕರೋನ ಸಂಕಷ್ಟದಲ್ಲಿ ಕೂಲಿ ಕೆಲಸ ಇಲ್ಲದೆ ಇರುವ ಬಡ ಕುಟುಂಬವನ್ನು ಗುರುತಿಸಿ ಅಂತವರಿಗೆ ಅಪ್ಪು ಸೇವಾ ಸಮಿತಿಯ 12 ಸಾಮಗ್ರಿ ಉಳ್ಳ ಕಿಟ್ಟು ನೀಡಿ ಬಡವರಿಗೆ ತಮ್ಮ ಅಳಿಲು ಸೇವೆ ಶ್ಲಾಘನೀಯ ಎಂದು ಗೋನಾಳ ರಾಜಶೇಖರ ಗೌಡ ಹೇಳಿದರು.
ನಗರದ ಅಖಿಲ ಕನರ್ಾಟಕ ಅಪ್ಪು ಸೇವಾ ಸಮಿತಿ ಹಾಗೂ ಗೋನಾಳ ರಾಜಶೇಖರ ಗೌಡ್ರು ಸಾರಥ್ಯದಲ್ಲಿ ಅರ್ಹ ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸಿ ಅವರು ಮಾತನಾಡಿದರು.ಡಾಕ್ಟರ್ ರಾಜ್ ಆದರ್ಶಗಳು ಇವರಿಗೆ ದಾರಿ ದೀಪವಾಗಿವೆ. ಈ ನಿಟ್ಟಿನಲ್ಲಿ ಪುನೀತ್ ರಾಜಕುಮಾರ್ ಈ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿರುವುದು ವಿಶೇಷವಾಗಿದೆ. ಇದು ದೊಡ್ಮನೆ ಅವರ ದೊಡ್ಡ ಗುಣ ಹಾಗೆ ಸಂಘ-ಸಂಸ್ಥೆಗಳನ್ನು ಹುಟ್ಟು ಹಾಕುವುದು ದೊಡ್ಡ ಮಾತು ಅಲ್ಲ ಆದರೆ ನಿರಂತರ ಸಮಾಜ ಸೇವೆ ಮಾಡುವುದು ದೊಡ್ಡ ಮಾತು.
ಸಂಚಾರಿ ಸಿಪಿಐ ಎಂ ನಾಗರಾಜ್ ಮಾಡಳ್ಳಿ ಮಾತನಾಡಿ ಒಂದನೇ ಅಲೆ ಗಿಂತ ಎರಡನೇ ಅಲೆ ಸಾಕಷ್ಟು ಸಾವು-ನೋವುಗಳನ್ನು ಉಂಟು ಮಾಡಿದೆ. ಹಾಗಾಗಿ ಜನರು ಕಾನೂನು ಪಾಲನೆ ಮಾಡಿ ಇನ್ನೂ ಮೂರನೇ ಅಲೆ ಕೂಡ ಬರುವ ಸಂಭವ ಇದೆ. ಜನರು ಜಾಗೃತಿಯಾಗಿ ಇರಬೇಕು ಎಸ್ಎಂಎಸ್ ಪಾಲನೆ ಮಾಡಬೇಕು. ಈ ಕರೋನ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಕರೋನ ವಾರಿಯಸರ್್ ಗಳ ಸಂಘ ಸಂಸ್ಥೆಗಳ ಸೇವೆ ಅವಿಸ್ಮರಣೀಯವಾದದ್ದು ಎಂದರು.ವೀರೇಶ್ ಗೌಡ್ರು ಅಭಯ್ ಫೌಂಡೇಶನ್ ಅಧ್ಯಕ್ಷ ರಾಮಕೃಷ್ಣ, ಹಲಕುಂದಿ ಸತೀಶ್, ಸಿದ್ಮಲ ಮಂಜುನಾಥ್, ಕಪ್ಪಗಲ್ ಚಂದ್ರಶೇಖರ ಆಚಾರ್, ಅಪ್ಪು ಸೇವಾ ಸಮಿತಿಯ ಜಿಲ್ಲಾ ಉಸ್ತುವಾರಿ ಜೇಪೀ ಮಂಜುನಾಥ್, ಹಾಗೂ ಅಧ್ಯಕ್ಷರಾದ ರವಿ ಕುಮಾರ್, ಉಪಾಧ್ಯಕ್ಷ ರಾಜೇಶ್ ಹುಂಡೇಕಾರ್, ನಾಗರಾಜ್ ಕನ್ನಡಿಗ, ಕುಮಾರ್ ಸ್ವಾಮಿ ಸೂರಜ್ ಸದಸ್ಯರು ಉಪಸ್ಥಿತರಿದ್ದರು