ಸಂಘರ್ಷದ ಸಂದರ್ಭದಲ್ಲಿ ಜೀವಿಸಿದ ಮಹಾನ ಸಂತ: ಪ್ರೊ. ಭಾಸ್ಕರ್
ಶಿಗ್ಗಾವಿ 01: ಕನಕದಾಸರು ಎಂದರೆ ತಕ್ಷಣ ನೆನಪಾಗುವುದು ಬಾಹ್ಯಲೋಕ ಮತ್ತು ಆಂತರಿಕ ಲೋಕ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಕನಕದಾಸರು ಭಾಹ್ಯ ಲೋಕದ ಕುರಿತು ಮತ್ತು ಆಂತರಿಕ ಲೋಕದಕುರಿತು ಏನು ಮಾಡಿದರು ಎಂದು ತಿಳಿಯುವುದು ಅವಶ್ಯ ಎಂದು ಕರ್ನಾಟಕ ಜಾನಪದ ವಿವಿಯ ಕುಲಪತಿ ಪ್ರೊ.ಟಿ.ಎಮ್ ಭಾಸ್ಕರ್ ಅವರು ಹೇಳಿದರು.
ತಾಲೂಕಿನ ಗೊಟಗೋಡಿಯಲ್ಲಿ ಕರ್ನಾಟಕ ಜಾನಪದ ವಿವಿಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನಕದಾಸರು ಲೌಕಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರವನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿದರು.
ಅತ್ಯಂತ ಕಷ್ಟಕರ ಕಾಲ ಸಂದರ್ಭದಲ್ಲಿ ಜನಿಸಿದ ಕನಕದಾಸರು ಅನೇಕ ಸಂಘರ್ಷಗಳನ್ನು ಎದುರಿಸಿ ಸಂತರಾಗಿ ನಾಡಿನ ಜನತೆಯನ್ನು ಸನ್ಮಾರ್ಗದ ಕಡೆಗೆಕೊಂಡೊಯ್ದರು.
ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರ್ಪ ಸೊಬಟಿ ಅವರು ಮಾತನಾಡಿ ಮನುಕುಲದ ಉದ್ಧಾರಕ್ಕಾಗಿ ಸರ್ವಸ್ವನ್ನು ತ್ಯಜಿಸಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ ಸಂತ ಕನಕದಾಸರು ಶೈವ ಪರಂಪರೆಯ ಆರಾಧಕರಾಗಿ ಭಕ್ಕಿ ಪರಂಪರೆಯನ್ನು ಮುಂದುವರೆಸಿದವರು ಬಂಕಾಪುರ ಪ್ರಾಂತ್ಯದ ಆಡಳಿತದ ಸಂದರ್ಭದಲ್ಲಿ ಕನಕದಾಸರು ಒಂದು ರಾಜ ಮನೆತದಕುಟುಂಬದಲ್ಲಿ ಜನಿಸಿ ಸಾಮ್ರಾಜ್ಯವನ್ನು ಸಲುಹಿದರು ಎಂದರು.
ಹಾವೇರಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕನಕದಾಸರು ಮಾಡಿದ ಪವಾಡಗಳು ಇಂದಿಗೂ ಅಚ್ಚಳಿಯದೆ ಉಳಿದಿವೆ ಎಂದರು.
ಕುಲಸಚಿವ ಪ್ರೊ.ಸಿ.ಟಿ ಗುರುಪ್ರಸಾದ್ ಅವರು ಮಾತನಾಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಪ್ರತಿನಿತ್ಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ ಅದರಲ್ಲಿ ಹಲವಾರು ಸಂತ ಶರಣದಾರ್ಶನಿಕರ ಜಯಂತಿಗಳನ್ನು ಆಚರಿಸುತ್ತಿದ್ದೇವೆ ಆ ಎಲ್ಲ ದಾರ್ಶನಿಕರ ಜಯಂತಿಗಳಲ್ಲಿ ಕನಕದಾಸರ ಜಯಂತಿಯು ವಿಶೇಷವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಬೋದಕ ಬೋದಕೇತರ ಸಿಬ್ಬಂದಿ ವಿಧ್ಯಾರ್ಥಿಗಳು ಹಾಜರಿದ್ದರು. ಸಹಾಯಕ ಕುಲಸಚಿವಷಹಜಹಾನ ಮುದಕವಿ ಸ್ವಾಗತಿಸಿದರು ಕಿರಿಯ ಸಹಾಯಕ ಗುರುಪ್ರಕಾಶ ಪ್ರಾರ್ಥಿಸಿದರು, ಶರೀಫ ಮಾಕಪ್ಪನವರ ಕಾರ್ಯಕಮ ನಿರೂಪಿಸಿ ವಂದಿಸಿದರು.