ಸಂಘರ್ಷದ ಸಂದರ್ಭದಲ್ಲಿ ಜೀವಿಸಿದ ಮಹಾನ ಸಂತ: ಪ್ರೊ.ಎಮ್ಭಾಸ್ಕರ್
ಲೋಕದರ್ಶನ ವರದಿ
ಶಿಗ್ಗಾವಿ (ಗೊಟಗೋಡಿ) :ಕನಕದಾಸರು ಎಂದರೆ ತಕ್ಷಣ ನೆನಪಾಗುವುದು ಬಾಹ್ಯಲೋಕ ಮತ್ತುಆಂತರಿಕ ಲೋಕ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಕನಕದಾಸರು ಭಾಹ್ಯ ಲೋಕದ ಕುರಿತು ಮತ್ತು ಆಂತರಿಕ ಲೋಕದಕುರಿತು ಏನು ಮಾಡಿದರುಎಂದು ತಿಳಿಯುವುದು ಅವಶ್ಯ ಎಂದು ಕನರ್ಾಟಕ ಜಾನಪದ ವಿವಿಯ ಕುಲಪತಿ ಪ್ರೊ.ಟಿ.ಎಮ್ ಭಾಸ್ಕರ್ ಅವರು ಹೇಳಿದರು.
ತಾಲೂಕಿನ ಗೊಟಗೋಡಿಯಲ್ಲಿ ಕರ್ನಾಟಕ ಜಾನಪದ ವಿವಿಯಲ್ಲಿ ನಡೆದಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕನಕದಾಸರು ಲೌಕಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರವನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿದರು.
ಅತ್ಯಂತಕಷ್ಟಕರ ಕಾಲ ಸಂದರ್ಭದಲ್ಲಿ ಜನಿಸಿದ ಕನಕದಾಸರು ಅನೇಕ ಸಂಘರ್ಷಗಳನ್ನು ಎದುರಿಸಿ ಸಂತರಾಗಿ ನಾಡಿನ ಜನತೆಯನ್ನು ಸನ್ಮಾರ್ಗದ ಕಡೆಗೆ ಕೊಂಡೋಯ್ದರು.
ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ ಅವರು ಮಾತನಾಡಿ ಮನುಕುಲದ ಉದ್ಧಾರಕ್ಕಾಗಿ ಸರ್ವಸ್ವನ್ನು ತ್ಯಜಿಸಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ ಸಂತಕನಕದಾಸರು ಶೈವ ಪರಂಪರೆಯ ಆರಾಧಕರಾಗಿ ಭಕ್ಕಿ ಪರಂಪರೆಯನ್ನು ಮುಂದುವರೆಸಿದವರು ಬಂಕಾಪುರ ಪ್ರಾಂತ್ಯದ ಆಡಳಿತದ ಸಂದರ್ಭದಲ್ಲಿ ಕನಕದಾಸರು ಒಂದು ರಾಜ ಮನೆತದ ಕುಟುಂಬದಲ್ಲಿ ಜನಿಸಿ ಸಾಮ್ರಾಜ್ಯವನ್ನು ಸಲುಹಿದರುಎಂದರು
ಹಾವೇರಿಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕನಕದಾಸರು ಮಾಡಿದ ಪವಾಡಗಳು ಇಂದಿಗೂ ಅಚ್ಚಳಿಯದೆ ಉಳಿದಿವೆ ಎಂದರು.
ಕುಲಸಚಿವ ಪ್ರೊ.ಸಿ.ಟಿ ಗುರುಪ್ರಸಾದ್ಅವರು ಮಾತನಾಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಪ್ರತಿನಿತ್ಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆಅದರಲ್ಲಿ ಹಲವಾರು ಸಂತ ಶರಣದಾರ್ಶನಿಕರ ಜಯಂತಿಗಳನ್ನು ಆಚರಿಸುತ್ತಿದ್ದೆವೆ ಆ ಎಲ್ಲ ದಾರ್ಶನಿಕರ ಜಯಂತಿಗಳಲ್ಲಿ ಕನಕದಾಸರಜಯಂತಿಯು ವಿಶೇಷವಾಗಿದೆಎಂದರು.
ವಿಶ್ವವಿದ್ಯಾಲಯದ ಬೋದಕ ಬೋದಕೇತರ ಸಿಬ್ಬಂದಿವಿದ್ಯಾರ್ಥಿಗಳು ಹಾಜರಿದ್ದರು.ಈ ಸಂದರ್ಭದಲ್ಲಿ ಸಹಾಯಕ ಕುಲಸಚಿವ ಷಹಜಹಾನ ಮುದಕವಿ ಸ್ವಾಗತಿಸಿದರು ಕಿರಿಯ ಸಹಾಯಕ ಗುರುಪ್ರಕಾಶ ಪ್ರಾರ್ಥಿಸಿದರು, ಶರೀಫ ಮಾಕಪ್ಪನವರ ಕಾರ್ಯಕಮ ನಿರೂಪಿಸಿ ವಂದಿಸಿದರು