ಶಾಂತಿ ಸೌಹಾರ್ದತೆ, ಸಮಾನತೆ, ಆದ್ಮಾತಿಕತೆ ಬಗ್ಗೆ ಬೆಳಕು ಚೆಲ್ಲಿದ ಮಹಾಪುರುಷ: ಹಾವೇರಿ
ಶಿಗ್ಗಾವಿ 30: ಭಕ್ತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು ಅವರ ಆದರ್ಶಗಳನ್ನು ನಾವು ನೀವೇಲ್ಲರೂ ಪಾಲಿಸೋಣ ಎಂದು ಪ್ರಾಚಾರ್ಯ ಎಸ್.ಹೆಚ್.ಹಾವೇರಿ ಹೇಳಿದರು.
ಪಟ್ಟಣದ ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಧಾಸ ಶ್ರೇಷ್ಠ ಭಕ್ತಕನಕದಾಸ ಜಯಂತಿ ನಿಮಿತ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಸಮಾಜದಲ್ಲಿ ಶಾಂತಿ ಸೌಹಾರ್ದತೆ, ಸಮಾನತೆ, ಆದ್ಮಾತಿಕತೆಯ ಬಗ್ಗೆ ಬೆಳಕು ಚೆಲ್ಲಿದ ಮಹಾಪುರುಷ ಕನಕದಾಸರು ಆಗಿನ ಕಾಲದಲ್ಲಿಯೇ ಜಾತಿ ತಾರತಮ್ಯದ ವಿರುದ್ದ ದ್ವನಿ ಎತ್ತಿದವರು ಕನಕದಾಸರ ತತ್ವೋಪದೇಶಗಳು ಸರ್ವಜನಾಂಗದ ಸಾರ್ಥಕ ಬದುಕಿಗೆ ದಾರಿದೇಪವಾಗಿವೆ ಎಂದರು.
ಹಿರಿಯ ಶಿಕ್ಷಕ ಡಿ.ಬಿ.ಶಿರೂರ ಮಾತನಾಡಿ ಕನಕದಾಸರು ದಂಡನಾಯಕರೆಂದು ಖ್ಯಾತರಾದ ಇವರು ತಿರುಪತಿ.ಹಂಪಿ, ಉಡುಪಿ ಇತ್ಯಾದಿ ಪುಣ್ಯಕ್ಷೇತ್ರಗಳಿಗೆ ಬೇಟಿ ನೀಡಿ ಕೀರ್ತನೆಗಳನ್ನು ಹಾಡುವ ಮೂಲಕ ಸಮಾಜದ ಒಳಿತನ್ನು ಸಾರಿದವರು ಎಂದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತಾ ಹರಿಗೊಂಡ ಪ್ರಾರ್ಥಿಸಿದರು, ಶಿಕ್ಷಕಿ ಶಾಲಿನಿ ಎಸ್ ಸ್ವಾಗತಿಸಿದರು, ಶಿಕ್ಷಕಿ ವೀಣಾ ಗೊಂದಿ ವಂದಿಸಿದರು, ಶಿಕ್ಷಕಿ ಶಿಲ್ಪಾ ಹಾದಿಮನಿ ನಿರೂಪಿಸಿದರು.