ಎರಡು ಗುಂಪುಗಳ ನಡುವೆ ಹೊಡೆದಾಟ; ದೂರು ದಾಖಲೆ
ಮುಂಡಗೋಡ 06: ಮರಳಿನ ವಿಷಯಕ್ಕೆ ಸಬಂಧಿಸಿದಂತೆ ಎರಡು ಗುಂಪುಗಳ ನಡುವೆ ಹೊಡೆದಾಟ ಸಂಭವಿಸಿದ್ದು, ದೂರು ಪೊಲೀಸ ಠಾಣೆಯಲ್ಲಿ ಇಂದು ದಾಖಲಾಗಿದೆ
ಈ ಘಟನೆಯಲ್ಲಿ ಮಹ್ಮದ ಅಜರುದ್ದಿನ ಅಕ್ತರ ಅವರ ಕೈ ಮೂಳೆ ಮುರದ್ದಿದು, ರವಿ ತಳವಾರ ಅವರ ತಲೆಗೆ ಗಂಭೀರವಾಗಿ ಗಾಯವಾಗಿದ್ದು ಅವರನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ
ಎರಡೂ ಗುಂಪಿನಲ್ಲಿ ಸೇರಿದಂತೆ ಒಟ್ಟು 8 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಎಸ್.ಪಿ. ಭೇಟಿ : ಸಮಗ್ರ ಪರೀಶೀಲನೆ ;
ಈ ಘಟನೆಗೆ ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲಾ ಎಸ್. ಪಿ ವಿಷ್ಣುವರ್ಧನ ಅವರು ಬುಧವಾರ ಮುಂಡಗೋಡ ಪೊಲೀಸ ಠಾಣೆಗೆ ಭೇಟಿ ನೀಡಿ ಸಮಗ್ರ ಪರೀಶೀಲನೆ ನಡೆಸಿ, ಎರಡು ಗುಂಪುಗಳ ನಡುವಿನ ಹೊಡೆದಾಟ ಪ್ರಕರಣಕ್ಕೆ ಸಂಬಂಧಪಟ್ಟಂತಹ ಮಾಹಿತಿಯನ್ನು ಪಡೆದುಕೊಂಡರು. ನಂತರ ಅವರು ಮಾಧ್ಯಮವರೊಂದಿಗೆ ಮಾತನಾಡುತ್ತಾ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದ್ದು, ನಿಖರ ಕಾರಣ ಏನೆಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.