ಮುಂದಗೋಡ

ಸಂಭ್ರಮದ ಕಾರ್ತಿಕೋತ್ಸವ

ಸಂಭ್ರಮದ ಕಾರ್ತಿಕೋತ್ಸವ

ಲೋಕದರ್ಶನ ವರದಿ

ಮುಂಡಗೋಡ:ಪಟ್ಟಣದ ಹೊಸ ಓಣಿ ಮಿತ್ರ ಮಂಡಳಿ ವತಿಯಿಂದ ಹೊಸ ಓಣಿಯಲ್ಲಿರುವ ಆದಿಶೇಷ ದೇವಸ್ಥಾನದಲ್ಲಿ ಬುಧವಾರ ಸಂಜೆ ಸಂಭ್ರಮದ ಕಾರ್ತಿ ಕೋತ್ಸವ ಜರುಗಿತು. 

ವಿದ್ಯುತ್ ದೀಪಗಳಿಂದ ದೇವಸ್ಥಾನವನ್ನು ಸಿಂಗಾರ ಮಾಡಿದ್ದರು. ಮಹಿಳೆಯರು ಮತ್ತು ಮಕ್ಕಳು ದೀಪಗಳನ್ನು ಬೆಳಗಿಸಿದರು. ಬಾನಂಗಳದಲ್ಲಿ ರಂಗುರಂಗಿನ ಚಿತ್ತಾರ ಮೂಡಿಸುವ ಪಟಾಕಿಗಳನ್ನು ಸಿಡಿಸಿ ಯುವಕರು ಸಂಭ್ರಮಿಸಿದರು. ಹೊಸ ಓಣಿ ಮಿತ್ರ ಮಂಡಳಿಯವರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 

ಸುದ್ದಿ ಓದಿ