ಕಲಿಕೆಯಲ್ಲಿ ಉತ್ಸಾಹ ತರುವದೇ ಕಲಿಕಾ ಹಬ್ಬ: ಧರಿಕಾರ
ತಾಳಿಕೋಟೆ25: ಕಲಿಕೆಯಲ್ಲಿ ನವೋತ್ಸಾಹ ತರುವ ಕಲಿಕಾ ಹಬ್ಬದಿಂದ ಮಕ್ಕಳಲ್ಲಿನ ಸೃಜನಾತ್ಮಕ ಕಲಿಕೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಾಳಿಕೋಟೆ ಕ್ಲಷ್ಟರ್ ಹಂತಹ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ.ಅನಿತಾ ಸಜ್ಜನ, ಮಕ್ಕಳಿಗೆ ಕಲಿಕೆಯನ್ನು ಉಣಬಡಿಸುವ ಹಬ್ಬಿದಾಗಿದ್ದು, ಮಕ್ಕಳು ತಾವು ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಇದೊಂದು ವೇದಿಕೆಯಾಗಿದೆ ಎಂದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಎಸ್.ಎಸ್.ಹಿರೇಮಠ, ಬಿಆರ್ಿ ಕೆ.ಎಸ್.ಸಜ್ಜನ, ಸಿಆರ್ಿ ರಾಜು ವಿಜಾಪುರ, ಮಿಣಜಗಿ ಕ್ಲಸ್ಟರ್ ಸಿಆರ್ಿ ಬಾಲಾಜಿ ವಿಜಾಪುರ, ಉರ್ದು ಸಿಆರ್ಿ ಎ.ಎಲ್.ಆಲಮೇಲ, ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ಆರ್.ಬಿ.ಆಲೂರ ಸೇರಿದಂತೆ ಇತರರಿದ್ದರು. ಮಕ್ಕಳಿಂದ ವಿವಿಧ ಬಗೆಯ ಚಟುವಟಿಕೆಗಳು ನಡೆದವು.ಪ್ರತಿ ಚಟುವಟಿಕೆಗಳಲ್ಲೂ ಮಕ್ಕಳ ಉತ್ಸಾಹ ಮೇರೆ ಮೀರಿತ್ತು. ಶಿಕ್ಷಕ ಆನಂದ ತಳವಾರ ಸ್ವಾಗತಿಸಿದರು. ಪ್ರೇಮನಗೌಡ ಪಾಟೀಲ ನಿರ್ವಹಿಸಿದರು. ಶಿಕ್ಷಕಿ ಎಸ್.ಆರ್.ಬಿರಾದಾರ ವಂದಿಸಿದರು.