ಜಮಖಂಡಿ

ಶಿಕ್ಷಕರಿಗೆ ಅಭಿನಂದನಾ ಸನ್ಮಾನ ಸಮಾರಂಭ

ಶಿಕ್ಷಕರಿಗೆ ಅಭಿನಂದನಾ ಸನ್ಮಾನ ಸಮಾರಂಭ

ಲೋಕದರ್ಶನ ವರದಿ,

ಜಮಖಂಡಿ 27: ಕನ್ನಡಾಭಿಮಾನಿಯಾಗಿ ಕಳೆದ 4 ವರ್ಷಗಳಿಂದ ಕೊಣ್ಣೂರ ನುಡಿ ಸಡಗರ ಮಾಡುತ್ತಿದ್ದೇವೆ, ಕನ್ನಡ ಸಂಸ್ಕೃತಿ, ನಾಡು, ನುಡಿ ಬಿಂಬಿಸುವ ಕೆಲಸ ಮಾಡುತ್ತಿದ್ದೇನೆ, ಎಲ್ಲರೂ ಜೊತೆ ನಡೆದರೆ ಒಳ್ಳೆಯ ಸಂಬಂಧ ಸೃಷ್ಟಿಯಾಗುತ್ತದೆ ಎಂದು ಪ್ರೋ.ಬಿ.ಕೆ.ಕೊಣ್ಣೂರ ಹೇಳಿದರು.

ನಗರದ ಬಸವೇಶ್ವರ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ವೀರೇಶ್ವರ ಪ್ರಕಾಶನ ಹಾಗೂ ಸಾಹಿತ್ಯ ಸೌರಭ ವೇದಿಕೆ ಜಮಖಂಡಿ ಮತ್ತು ಬಸವೇಶ್ವರ ಶಿಕ್ಷಣ ಸಂಸ್ಥೆ ಕಡಪಟ್ಟಿ ಸಹಯೋಗದಲ್ಲಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ 70ಕ್ಕೂ ಹೆಚ್ಚು ಸಾಧಕ ಉಪನ್ಯಾಸಕರು, ಶಿಕ್ಷಕರಿಗೆ ಅಭಿನಂದನಾ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು, ಕನ್ನಡ ಕಲಿಸುವುದರ ಜೊತೆ ಕಲಿಯುವ ಅವಕಾಶ ದೊರೆಯುತ್ತದೆ, ಜೀವನದಲ್ಲಿ ಯಾವುದನ್ನು ಕೊಟ್ಟರು, ಅದರ ದುಪ್ಪಟ್ಟು ಆದರ ಪ್ರತಿಫಲ ಸಿಗುತ್ತದೆ ಎಂದರು.

ಕೆಎಲ್ಇ ಸಂಸ್ಥೆಯ ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಶಿಕ್ಷಕರು ಭಾಷೆಯ ಋಣ ತೀರಿಸುವ ಕೆಲಸ ಮಾಡಬೇಕು, ಹಿಂದಿನ ಕಾಲದಲ್ಲಿ ಯಜ್ಞಗಳನ್ನು ಮಾಡಿ ಗೌರವಿಸುತ್ತಿದ್ದರು, ಈಗ ಈ ರೀತಿಯ ಸನ್ಮಾನ ಪುರಸ್ಕಾರಗಳನ್ನು ನೀಡಿ ಗೌರವಿಸುತ್ತಾರೆ. ಅದರಲ್ಲಿಯು ಕನ್ನಡ ಭಾಷಾ ಶಿಕ್ಷಕರನ್ನು ಗೌರವಿಸಿದ್ದು ಸ್ಮರಣೀಯ. ನನ್ನಲ್ಲಿನ ಕನ್ನಡ ಭಾಷಾಭಿಮಾನವನ್ನು ಭೋಧನೆ, ಸಮಾಲೋಚನೆ, ಸಾಮಾಜಿಕ ಕಳಕಳಿಯನ್ನು ಹೊಂದಿದ್ದೇನೆ ಎಂದರು. 

ಡಾ, ಎಸ್, ಬಿ, ಮಟೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಕವಿ ಕುವೆಂಪು ಅವರ ಒಳ್ಳೆಯ ನುಡಿಗಳನ್ನು ನೆನಸಿಕೊಂಡು, ನಮ್ಮಲ್ಲಿರುವ ಜ್ಞಾನ ಅಗಾಧವಾದದ್ದು, ನಮ್ಮಲ್ಲಿರುವ ದೋಷಗಳನ್ನು ಎತ್ತಿ ತೋರಿಸಿ ನಾವು ಕುಂದಬಾರದು. ಕನ್ನಡ ಭಾಷಾಭಿಮಾನ ವಿರಲಿ, ಕನ್ನಡ ಶಿಕ್ಷಕರು ಅಪ್ರತಿಮರು. ಕಿವಿಗೊಟ್ಟು ಕೇಳುವವ ಚೆನ್ನಾಗಿ ಹೇಳಬಲ್ಲ, ಚೆನ್ನಾಗಿ ಓದುವವ ಒಳ್ಳೆಯ ಜ್ಞಾನ ಪಡೆದುಕೊಳ್ಳ ಬಲ್ಲ ಎಂದರು.

ಕಸಾಪ ಜಿಲ್ಲಾ ಅದ್ಯಕ್ಷ ಶಿವಾನಂದ ಶಲ್ಲಿಕೇರಿ ಮಾತನಾಡಿದರು, ಪ್ರಾಥನಾ ಗೀತೆ ಬಿ, ಎನ್, ಅಸ್ಕಿ ಪ್ರಾರ್ಥಿನಿಸಿದರು, ರಾಜಶೇಖರ ಹೊಸಟ್ಟಿ ಸ್ವಾಗತಿಸಿದರು, ಎಸ್, ಎಂ, ತೇಲಿ ವಂದಿಸಿದರು, ಚಂದ್ರಶೇಖರ ಹೊಸೂರ, ನಾರಾಯಣ ಶಾಸ್ತ್ರಿ, ಸಿದ್ರಾಮ ಖಾನಾಪುರ, ದ್ರಾಕ್ಷಾಯಿನಿ ಮಠಮತಿ ಶಿಕ್ಷಕರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.

ವಿಜಯಕುಮಾರ ವಂದಾಲ, ನರಸಿಂಹ ಕಲ್ಲೋಳ್ಳಿ, ರವಿಂದ್ರ ತಳ್ಳಿ, ಎಸ್, ಎಂ, ಖರ್ಗೆ ಸೇರಿದಂತೆ ಅನೇಕರು ಇದ್ದರು.



ಸುದ್ದಿ ಓದಿ